ನನಗೆ 10 ಮಕ್ಕಳು ಬೇಕು ಎಂದ ನಟಿ ಸನಾ ಖಾನ್: ನೆಟ್ಟಿಗರಿಂದ ತರಾಟೆ

Published : Jun 04, 2025, 10:02 PM IST

ಇತ್ತೀಚೆಗೆ ಕೆಲವು ನಟಿಯರು ವಿಚಿತ್ರ ಹೇಳಿಕೆಗಳನ್ನು ನೀಡುವ ಮೂಲಕ ಟ್ರೋಲ್‌ಗೆ ಒಳಗಾಗುತ್ತಿದ್ದಾರೆ. ಈ ಸಾಲಿಗೆ ಸೇರಿದವರು ಸನಾ ಖಾನ್. 10 ಮಕ್ಕಳನ್ನು ಹೊಂದಬೇಕೆಂಬ ತಮ್ಮ ಆಸೆಯನ್ನು ವ್ಯಕ್ತಪಡಿಸಿದ್ದಾರೆ. ಇದಕ್ಕೆ ನೆಟ್ಟಿಗರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

PREV
14
ಸಿನಿಮಾರಂಗ ತೊರೆದು ಕೌಟುಂಬಿಕ ಜೀವನಕ್ಕೆ ಮರಳಿದ ನಟಿಯರಲ್ಲಿ ಸನಾ ಖಾನ್ ಕೂಡ ಒಬ್ಬರು. ಧಾರ್ಮಿಕ ಜೀವನ ನಡೆಸುತ್ತಿರುವ ಸನಾ ಖಾನ್ ತಮ್ಮ ಭವಿಷ್ಯದ ಕುಟುಂಬ ಯೋಜನೆ ಬಗ್ಗೆ ಹೇಳಿಕೆ ನೀಡಿದ್ದಾರೆ.
24
ಸನಾ ಖಾನ್ ತಮ್ಮ ಪತಿ ಅನಾಸ್ ಸಯ್ಯದ್ ಜೊತೆ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಇತ್ತೀಚಿನ ಇನ್‌ಸ್ಟಾಗ್ರಾಮ್ ವಿಡಿಯೋದಲ್ಲಿ, ಹಿಂದಿನ ಕಾಲದಲ್ಲಿ ಮಹಿಳೆಯರು 12 ಮಕ್ಕಳಿಗೆ ಜನ್ಮ ನೀಡುತ್ತಿದ್ದರು, ನಾನು 10 ಮಕ್ಕಳನ್ನು ಹೊಂದಲು ಬಯಸುತ್ತೇನೆ ಎಂದು ಹೇಳಿದ್ದಾರೆ.
34
ಈ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ತೀವ್ರವಾಗಿ ಟೀಕಿಸಿದ್ದಾರೆ. 10-12 ಮಕ್ಕಳಿಗೆ ಜನ್ಮ ನೀಡುವುದು ಸುಲಭವೇ? ಎಂದು ಪ್ರಶ್ನಿಸಿದ್ದಾರೆ.
44

ಸನಾ ಖಾನ್ ಅವರ ಪತಿ ಗುಜರಾತ್‌ನ ಸೂರತ್‌ನ ಮುಫ್ತಿ ಅನಾಸ್ ಸಯ್ಯದ್. ಅವರು ಧಾರ್ಮಿಕ ನಾಯಕ ಮತ್ತು ಇಸ್ಲಾಮಿಕ್ ವಿದ್ವಾಂಸರು. ಅಂದಹಾಗೆ, ಸನಾ ಖಾನ್ ನವೆಂಬರ್ 20, 2020 ರಂದು ಗುಜರಾತ್‌ನ ಅಂಕಲೇಶ್ವರದ ಮುಫ್ತಿ ಅನಾಸ್ ಸೈಯದ್ ಅವರನ್ನು ವಿವಾಹವಾದರು. ಇವರಿಬ್ಬರ ಮೊದಲ ಭೇಟಿ 2017ರಲ್ಲಿ ಮೆಕ್ಕಾದಲ್ಲಿ ನಡೆದಿತ್ತು.

Read more Photos on
click me!

Recommended Stories