20 ವರ್ಷಗಳ ನಂತರ ಮಾಜಿ ಗರ್ಲ್‌ಫ್ರೆಂಡ್‌ ರವೀನಾ ಟಂಡನ್ ಜೊತೆಯಾದ ಅಕ್ಷಯ್ ಕುಮಾರ್!

First Published | Oct 12, 2023, 5:03 PM IST

ಬಾಲಿವುಡ್‌ನ 90ರ ದಶಕದ ಫೇಮಸ್‌ ರೀಲ್‌ ಮತ್ತು ರಿಯಲ್‌ ಜೋಡಿ ರವೀನಾ ಟಂಡನ್ (Raveena Tandon) ಮತ್ತು ಅಕ್ಷಯ್ ಕುಮಾರ್ (Akshay Kumar) ಮತ್ತೆ ಒಂದಾಗಲಿದ್ದಾರೆ. ಈ ಮಾಜಿ ಜೋಡಿ ಸುಮಾರು 20 ವರ್ಷಗಳ ನಂತರ ತೆರೆ ಮೇಲೆ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಮಯದಲ್ಲಿ ಅಕ್ಷಯ್‌ ಕುಮಾರ್‌ ತಮ್ಮ ಮಾಜಿ ಗೆಳತಿ ಬಗ್ಗೆ ಏನು ಹೇಳಿದ್ದಾರೆ ಗೊತ್ತಾ?

ರವೀನಾ ಟಂಡನ್ ಮತ್ತು ಅಕ್ಷಯ್ ಕುಮಾರ್ ಶೀಘ್ರದಲ್ಲೇ 'ವೆಲ್ ಕಮ್ ಟು ಜಂಗಲ್' ಚಿತ್ರದಲ್ಲಿ ಒಟ್ಟಿಗೆ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರವನ್ನು 2024 ರ ಕ್ರಿಸ್ಮಸ್ ಸಂದರ್ಭದಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಬಹುದು.  

ಇತ್ತೀಚಿನ ಸಂದರ್ಶನವೊಂದರಲ್ಲಿ, ಅಕ್ಷಯ್ ಕುಮಾರ್ 20 ವರ್ಷಗಳ ನಂತರ ಮತ್ತೊಮ್ಮೆ ರವೀನಾ ಅವರೊಂದಿಗೆ ಕೆಲಸ ಮಾಡುವ ಬಗ್ಗೆ ಮಾತನಾಡಿದ್ದಾರೆ.

Tap to resize

ರವೀನಾ ಟಂಡನ್‌ ಅವರ ಜೊತೆ ಕೆಲಸ ಮಾಡಲು ತುಂಬಾ ಉತ್ಸುಕನಾಗಿದ್ದೇನೆ' ಎಂದು ಅಕ್ಷಯ್ ಕುಮಾರ್‌ ಸಂದರಶನದಲ್ಲಿ ಹೇಳಿದ್ದಾರೆ.

ರವೀನಾ ಟಂಡನ್ ಮತ್ತು ಅಕ್ಷಯ್ ಕುಮಾರ್ 90 ರ ದಶಕದಲ್ಲಿ ಸಂಬಂಧದಲ್ಲಿದ್ದರು. ಬ್ರೇಕಪ್ ಆದ ನಂತರ ಇಬ್ಬರೂ ಪರಸ್ಪರ ಮಾತನಾಡಿರಲಿಲ್ಲ ಎನ್ನಲಾಗಿದೆ.

'ನಾವು 'ವೆಲ್‌ಕಮ್ ಟು ದಿ ಜಂಗಲ್' ಎಂಬ ಚಿತ್ರವನ್ನು ನಿರ್ಮಿಸುತ್ತಿದ್ದೇವೆ, ನಾವು ಶೀಘ್ರದಲ್ಲೇ ಚಿತ್ರೀಕರಣವನ್ನು ಪ್ರಾರಂಭಿಸಲಿದ್ದೇವೆ. ರವೀನಾ ಮತ್ತು ನಾನು ಅನೇಕ ಹಿಟ್ ಚಿತ್ರಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದೇವೆ. ಬಹಳ ದಿನಗಳ ನಂತರ ಒಟ್ಟಿಗೆ ತೆರೆ ಹಂಚಿಕೊಳ್ಳಲಿದ್ದೇವೆ. ಈ ಚಿತ್ರದಲ್ಲಿ ಅವರ ಜೊತೆ ಕೆಲಸ ಮಾಡಲು ತುಂಬಾ ಉತ್ಸುಕನಾಗಿದ್ದೇನೆ' ಎಂದು ರವೀನಾ ಟಂಡನ್ ಬಗ್ಗೆ ಅಕ್ಷಯ್ ಕುಮಾರ್ ಹೇಳಿದ್ದಾರೆ.

ಅಕ್ಷಯ್ ಮತ್ತು ರವೀನಾ 'ಮೈನ್ ಕಿಲಾಡಿ ತು ಅನಾರಿ' ಮತ್ತು 'ಮೊಹ್ರಾ' ನಂತಹ ಹಿಟ್ ಚಿತ್ರಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದಾರೆ. ಅವರ ಹಾಡುಗಳಾದ 'ತು ಚೀಜ್ ಬಡಿ ಹೈ ಮಸ್ತ್ ಮಸ್ತ್' ಮತ್ತು 'ಟಿಪ್ ಟಿಪ್ ಬರ್ಸಾ ಪಾನಿ' ಇಂದಿಗೂ ಜನಪ್ರಿಯ.
 

ರವೀನಾ ಟಂಡನ್ ಮತ್ತು ಅಕ್ಷಯ್ ಕುಮಾರ್ ಜೋಡಿ ಒಂದು ಕಾಲದಲ್ಲಿ ತುಂಬಾ ಇಷ್ಟವಾಯಿತು. 1994 ರ 'ಮೊಹ್ರಾ' ಚಿತ್ರದಲ್ಲಿ ಇಬ್ಬರೂ ಮೊದಲ ಬಾರಿಗೆ ಒಟ್ಟಿಗೆ ಕಾಣಿಸಿಕೊಂಡರು. 

ಈ ಚಿತ್ರದ ನಂತರವೇ ಇವರಿಬ್ಬರ ನಿಶ್ಚಿತಾರ್ಥದ ಸುದ್ದಿ ಬರಲಾರಂಭಿಸಿತ್ತು. ಆದರೆ, ಕಾರಣಾಂತರಗಳಿಂದ ಈ ನಿಶ್ಚಿತಾರ್ಥ ಮುರಿದು ಬಿದ್ದು ಇಬ್ಬರೂ ಬೇರೆಯಾದರು. 

ನಂತರ 2001 ರಲ್ಲಿ ಅಕ್ಷಯ್ ರಾಜೇಶ್ ಖನ್ನಾ ಅವರ ಮಗಳು ಮತ್ತು ನಟಿ ಟ್ವಿಂಕಲ್ ಖನ್ನಾ ಅವರನ್ನು ವಿವಾಹವಾದರು. ರವೀನಾ ಅವರು 2004 ರಲ್ಲಿ ಉದ್ಯಮಿ ಅನಿಲ್ ಥಡಾನಿ ಅವರೊಂದಿಗೆ ಸಪ್ತಪದಿ ತುಳಿದ್ದರು.

Latest Videos

click me!