ತಂಗಿಗೆ ಕೈ ಕೊಟ್ಟು, ಅತ್ತಿಗೆ ಜೊತೆ ಡೇಟಿಂಗ್ ಶುರು ಮಾಡಿದ ಅರ್ಜುನ್ ಕಪೂರ್: ಸಲ್ಮಾನ್ ಜೊತೆ ಸರಿ ಹೋದ್ರಾ?

First Published | Oct 12, 2023, 4:57 PM IST

ಬಾಲಿವುಡ್ ನಟರಾದ ಸಲ್ಮಾನ್ ಖಾನ್  (Salamn Khan) ಮತ್ತು ಅರ್ಜುನ್ ಕಪೂರ್  (Arjun Kapoor) ನಡುವೆ ನಡೆಯುತ್ತಿರುವ ಶೀತಲ ಸಮರ ಇದೀಗ ಅಂತ್ಯ ಕಾಣುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಫೋಟೋವೊಂದು ವೈರಲ್ ಆಗುತ್ತಿದೆ. ಇದನ್ನು ನೋಡಿದ ಜನರು ಅರ್ಜುನ್ ಕಪೂರ್ ಮತ್ತು ಸಲ್ಮಾನ್ ಖಾನ್ ನಡುವಿನ ಶೀತಲ ಸಮರ ಈಗ ಮುಗಿದಿದೆ ಎಂದು ಹೇಳುತ್ತಿದ್ದಾರೆ. ಅಷ್ಷಕ್ಕೂ ಅವರಿಬ್ಬರ ಜಗಳ ಕೋಲ್ಡ್‌ವಾರ್‌ ಮುಗಿದಿದ್ದು ಹೇಗೆ?

ಸಲ್ಮಾನ್ ತಮ್ಮ ಮುಂಬರುವ ಚಿತ್ರ 'ಟೈಗರ್ 3' ನ ಪ್ರಚಾರದ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ, ಅದನ್ನು ಅರ್ಜುನ್ ಕಪೂರ್ ನೋಡಿ ಇಷ್ಟ ಪಟ್ಟಿದ್ದಾರೆ, 

 ಈ ಮೂಲಕ  ಅರ್ಜುನ್ ಮತ್ತು ಸಲ್ಮಾನ್ ನಡುವಿನ ಶೀತಲ ಸಮರ ಅಂತ್ಯವಾಗಿದೆ ಎಂಉ ಜನರು ಊಹಿಸಿದ್ದಾರೆ ಮತ್ತು  ಇದನ್ನು ನೋಡಿದ ಇಬ್ಬರ ಅಭಿಮಾನಿಗಳು ತುಂಬಾ ಖುಷಿಯಾಗಿದ್ದಾರೆ.

Tap to resize

ಅರ್ಜುನ್ ಕಪೂರ್ ಅವರು ಸಲ್ಮಾನ್ ಖಾನ್ ಅವರೊಂದಿಗಿನ ಘರ್ಷಣೆಯ ಸುತ್ತಲಿನ ವದಂತಿಗಳನ್ನು ಬಹಿರಂಗವಾಗಿ ಚರ್ಚಿಸಿಲ್ಲವಾದರೂ, ಅವರ ತಂದೆ ಬೋನಿ ಕಪೂರ್ ಅವರು ಸಂದರ್ಶನವೊಂದರಲ್ಲಿ ಸಲ್ಮಾನ್ ಅವರೊಂದಿಗಿನ ಅವರ ಸಂಬಂಧದಲ್ಲಿ ಉದ್ವಿಗ್ನತೆಯನ್ನು ಹೊಂದಿದ್ದಾರೆ ಎಂದು ಒಪ್ಪಿಕೊಂಡಿದ್ದರು.

ವಾಸ್ತವವಾಗಿ, ಬೋನಿ ಕಪೂರ್ ಒಮ್ಮೆ ಅರ್ಜುನ್ ಯಾವಾಗಲೂ ನಿರ್ದೇಶಕರಾಗಲು ಬಯಸುತ್ತಾರೆ. ಆದರೆ ಸಲ್ಮಾನ್ ಅವರ ಸಲಹೆಯಿಂದಾಗಿ ಅವರು ನಟನಾ ಕ್ಷೇತ್ರಕ್ಕೆ ಬಂದರು. ಅರ್ಜುನ್‌ನನ್ನು ತನ್ನ ತೆಕ್ಕೆಗೆ ತೆಗೆದುಕೊಂಡು ಅಂದಗೊಳಿಸಿದ್ದು ಸಲ್ಮಾನ್. ಇದಾದ ನಂತರ ಅರ್ಜುನ್ ಮತ್ತು ಸಲ್ಮಾನ್ ನಡುವಿನ ಸಂಬಂಧ ಚೆನ್ನಾಗಿಲ್ಲ ಎಂದು ಬಹಿರಂಗಪಡಿಸಿದರು.  

ಅರ್ಜುನ್ ಕಪೂರ್‌ ಸಲ್ಮಾನ್ ಸಹೋದರಿ ಅರ್ಪಿತಾ ಜೊತೆ ಡೇಟಿಂಗ್‌ ಮಾಡುತ್ತಿದ್ದರು. ಈ ಸಂಬಂಧ ಮುರಿದುಬಿದ್ದಾಗ ಸಲ್ಮಾನ್ ಖಾನ್ ಮತ್ತು ಅರ್ಜುನ್ ಕಪೂರ್ ನಡುವಿನ ಸಂಬಂಧವು ಹದಗೆಟ್ಟಿತು.

ಇದಾದ ನಂತರ ಅರ್ಜುನ್ ಸಲ್ಮಾನ್ ತಮ್ಮನ ಹೆಂಡತಿ ಮಲೈಕಾ ಅರೋರಾ ಜೊತೆ ಡೇಟಿಂಗ್ ಆರಂಭಿಸಿದ್ದು ಈಗ ಇಬ್ಬರೂ 5 ವರ್ಷಗಳಿಂದ ರಿಲೆಷನ್‌ಶಿಪ್‌ನಲ್ಲಿದ್ದಾರೆ.
 

ಅರ್ಜುನ್‌ ಅವರ ಈ ನಡೆ ಸಲ್ಮಾನ್‌ಗೆ ಇಷ್ಟವಾಗಲಿಲ್ಲ. ಒಮ್ಮೆ ಸಲ್ಮಾನ್  ಖಾನ್‌ ಈವೆಂಟ್‌ನಲ್ಲಿ ಅರ್ಜುನ್‌ ಕಪೂರ್‌ ಅವರನ್ನು ಕಡೆಗಣಿಸಿದ್ದರು ಎನ್ನಲಾಗಿದೆ.

Latest Videos

click me!