ಬಿಗ್ ಬಾಸ್ ತೆಲುಗು 6: ನಾಗಾರ್ಜುನ ಅವರ ಸಂಭಾವನೆ ಲೀಕ್‌

First Published | Aug 21, 2022, 1:44 PM IST

ತೆಲಗು ಬಿಗ್ ಬಾಸ್ 6ನಲ್ಲಿ (Big Bos 6)  ತನ್ನ ಹೋಸ್ಟಿಂಗ್ ಸಾಮರ್ಥ್ಯದಿಂದ ಎಲ್ಲರನ್ನೂ ಬೆರಗುಗೊಳಿಸಲು ನಾಗಾರ್ಜುನ (Nagarjuna) ಸಿದ್ಧರಾಗಿದ್ದಾರೆ. ಈ ನಡುವೆ ಅವರು ಸಿಸನ್‌ 6 ಬಿಗ್‌ಬಾಸ್‌ಗೆ ಚಾರ್ಜ್‌ ಮಾಡಲಿರುವ ಪೀಸ್‌ನ ಮಾಹಿತಿ ಸಹ ಲೀಕ್‌ ಆಗಿದೆ ಮತ್ತು ಈ ಸುದ್ದಿ ಸಖತ್‌  ವೈರಲ್‌ ಕೂಡ ಆಗಿದೆ. ಸೌತ್‌ ಸೂಪರ್‌ ಸ್ಟಾರ್‌ ನಾಗಾರ್ಜುನ ಅವರು ಈ ಸಾರಿಯ ಬಿಗ್‌ಬಾಸ್‌ಗೆ ಪಡೆಯುಲಿರುವ ಸಂಭಾವನೆ ಕೇಳಿದರೆ ಶಾಕ್‌ ಆಗುವುದು ಗ್ಯಾರಂಟಿ.  

ದಕ್ಷಿಣದಲ್ಲಿ ಸಹ ಬಿಗ್ ಬಾಸ್ ಹಿಂದಿ ಬಿಗ್ ಬಾಸ್‌ನಂತೆ ದೊಡ್ಡ ಅಭಿಮಾನಿ ಬಳಗವನ್ನು ಹೊಂದಿದೆ ಮತ್ತು ಪ್ರಸಿದ್ಧ ಕಾರ್ಯಕ್ರಮದ ಹೊಸ ಸೀಸನ್ ಅನ್ನು ಅಭಿಮಾನಿಗಳು ಕುತೂಹಲದಿಂದ ನಿರೀಕ್ಷಿಸುತ್ತಾರೆ.

ಸಲ್ಮಾನ್ ಖಾನ್ ನೇತೃತ್ವದ ಕಾರ್ಯಕ್ರಮದ  ಈ  ಋತುವಿನ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ಇಲ್ಲದಿದ್ದರೂ, ಮತ್ತೊಂದೆಡೆ, ಸೆಪ್ಟೆಂಬರ್‌ನಲ್ಲಿ ಪ್ರಾರಂಭವಾಗಲಿರುವ ತೆಲುಗು ಆವೃತ್ತಿಯ 6 ನೇ ಸೀಸನ್ ಅನ್ನು ಹೋಸ್ಟ್ ಮಾಡಲು ನಾಗಾರ್ಜುನ ಹಿಂತಿರುಗುತ್ತಾರೆ.
  

Tap to resize

ಅಚ್ಚರಿ ಎಂದರೆ ಪ್ರತಿ ವರ್ಷ ಸಂಭಾವನೆ ಹೆಚ್ಚಳಕ್ಕೆ ಯತ್ನಿಸುವ ಸಲ್ಮಾನ್ ಖಾನ್ ಅವರ ಹಾದಿಯನ್ನೇ ನಾಗಾರ್ಜುನ ಅನುಸರಿಸಿದ್ದಾರೆ. ಸೂಪರ್‌ಸ್ಟಾರ್ ಹೊಸ ಸೀಸನ್‌ಗೆ 12 ಕೋಟಿ ರೂಪಾಯಿಗಳ ದೊಡ್ಡ ಮೊತ್ತವನ್ನು ಪಡೆಯುತ್ತಾರೆ ಎಂಬ ಸುದ್ದಿ ಲೀಕ್‌ ಆಗಿದೆ.
 

Tollywood.Net ಪ್ರಕಾರ, ಮುಂಬರುವ ಸೀಸನ್‌ಗಾಗಿ ನಾಗರ್ಜುನ ಅವರು  ಸುಮಾರು 15 ಕೋಟಿ ರೂ ಪಡೆಯಲಿದ್ದಾರಂತೆ. ಮತ್ತೊಂದೆಡೆ, ಸಲ್ಮಾನ್ ಖಾನ್ ಬಿಗ್ ಬಾಸ್ ಹೋಸ್ಟ್ ಮಾಡಲು 1050 ಕೋಟಿ ರೂ ಡಿಮ್ಯಾಂಡ್‌ ಮಾಡಿದ್ದಾರೆ.

ನಾಗಾರ್ಜುನ ಅವರು ಬಿಗ್ ಬಾಸ್ 5 ತೆಲುಗಿನ ಪ್ರತಿ ಸಂಚಿಕೆಗೆ ಸುಮಾರು 12 ಲಕ್ಷ ರೂಪಾಯಿಗಳನ್ನು ವಿಧಿಸಿದರು, ಇಡೀ ಸೀಸನ್‌ಗೆ ಒಟ್ಟು 12 ಕೋಟಿ ರೂ ಗಳಿಸಿದ್ದರು. ಅದೇಸ ಸಲ್ಮಾನ್ ಖಾನ್ ಬಿಬಿ 15 ಗಾಗಿ ರೂ 350 ಕೋಟಿ ಪಡೆದರು. ಆದರೆ ಹೊಸ ಸೀಸನ್‌ಗಾಗಿ ಇನ್ನೂ ದೊಡ್ಡ ಮೊತ್ತವನ್ನು ನಿರೀಕ್ಷಿಸುತ್ತಿದ್ದಾರೆ ಸಲ್ಲೂ ಬಾಯ್‌.

ವಿವಾದಾತ್ಮಕ ರಿಯಾಲಿಟಿ ಪ್ರೋಗ್ರಾಂ ತೆಲುಗು ಬಿಬಿ ಸೆಪ್ಟೆಂಬರ್ 4, 2022 ರಂದು ಸ್ಟಾರ್ ಮಾದಲ್ಲಿ ಪ್ರಥಮ ಪ್ರದರ್ಶನಗೊಳ್ಳಲಿದೆ. ಟ್ರೈಲರ್ ಅನ್ನು ಇತ್ತೀಚೆಗೆ ಪ್ರಕಟಿಸಲಾಗಿದೆ, ಆದರೆ ಭಾಗವಹಿಸುವವರ ಗುರುತನ್ನು ಇನ್ನೂ ಜನರಿಗೆ ನೀಡಲಾಗಿಲ್ಲ. ವರದಿಗಳ ಪ್ರಕಾರ, ತಂಡವು ಮುಂದಿನ ವಾರಗಳಲ್ಲಿ ಹೆಚ್ಚಿನ ಮಾಹಿತಿಯನ್ನು ನೀಡಲಿದೆ. ಆದರೂ ಕೆಲವು ಸಂಭಾವ್ಯ ಅಭ್ಯರ್ಥಿಗಳ ಹೆಸರುಗಳು ಈಗಾಗಲೇ ಹರಿದಾಡುತ್ತಿವೆ.
 

ಆ್ಯಂಕರ್ ಉದಯ ಭಾನು, ನಟ ಅಮರ್‌ದೀಪ್, ಆದಿ ರೆಡ್ಡಿ, ದೀಪಿಕಾ ಪಿಲ್ಲಿ, ನೇಹಾ ಚೌದರಿ, ಶ್ರೀಹಾನ್, ಚಾಲಾಕಿ ಚಂಟಿ, ಗೀತು ರಾಯಲ್, ನೃತ್ಯ ನಿರ್ದೇಶಕ ಪಾಪ್ಪಿ ಮಾಸ್ಟರ್, ಶ್ರೀ ಸತ್ಯ ಮತ್ತು ಆರ್‌ಜೆ ಸೂರ್ಯ ಮುಂತಾದವರು ಹೆಸರು ಕೇಳಿಬರುತ್ತಿವೆ.

Latest Videos

click me!