ಬಹುಭಾಷ ನಟಿ ನಮಿತಾ ಕೃಷ್ಣ ಜನ್ಮಾಷ್ಟಮಿ ದಿನವೇ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ. 41 ವರ್ಷದ ನಟಿ ಇಬ್ಬರು ಮುದ್ದಾದ ಗಂಡು ಮಕ್ಕಳಿಗೆ ಜನ್ಮ ನೀಡಿದ ಬಗ್ಗೆ ನಟಿ ನಮಿತಾ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಮೂಲಕ ಬಹಿರಂಗ ಪಡಿಸಿದ್ದಾರೆ. ಪತಿ ಜೊತೆ ಮುದ್ದಾದ ಮಕ್ಕಳನ್ನು ಎತ್ತಿಕೊಂಡಿರುವ ನಮಿತಾ ಅವಳಿಗೆ ಮಕ್ಕಳಾಗಿದೆ ಎಂದು ಬಹಿರಂಗ ಪಡಿಸಿದ್ದಾರೆ.
ಮದುವೆಯಾಗಿ ನಾಲ್ಕು ವರ್ಷಗಳ ಬಳಿಕನಮಿತಾ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ. ಇತ್ತೀಚಿಗಷ್ಟೆ ನಮಿತಾ ಬೇಬಿ ಬಂಪ್ ಫೋಟೋಗಳನ್ನು ಶೇರ್ ಮಾಡುವ ಮೂಲಕ ಗರ್ಭಿಣಿಯಾಗಿದ್ದ ವಿಚಾರವನ್ನು ಬಹಿರಂಗ ಪಡಿಸಿದ್ದರು. ಅನೇಕ ಫೋಟೋಗಳನ್ನು ನಮಿತಾ ಹಂಚಿಕೊಂಡಿದ್ದರು.
ನಟಿ ನಮಿತಾ 2017ರಲ್ಲಿ ಚೆನ್ನೈ ಮೂಲದ ತೆಲುಗು ವ್ಯಕ್ತಿ ವೀರೇಂದ್ರ ಚೌಧರಿ ಜೊತೆ ಹಸೆಮಣೆ ಏರಿದರು. ತಿರುಪತಿಯಲ್ಲಿ ಇಬ್ಬರೂ ಸಪ್ತಪದಿ ತುಳಿದದ್ದರು. ಮದುವೆಯ ನಂತರ ನಮಿತಾ ಸಿನಿಮಾದಲ್ಲಿ ಹೆಚ್ಚು ಸಕ್ರೀಯರಾಗಿರಲಿಲ್ಲ.
2002ರಲ್ಲಿ ನಮಿತಾ ತೆಲುಗು ಸಿನಿಮಾರಂಗದ ಮೂಲಕ ಬಣ್ಣದ ಲೋಕದ ಜರ್ನಿ ಪ್ರಾರಂಭ ಮಾಡಿದರು. ಗುಜರಾತ್ ಮೂಲದ ನಟಿ ನಮಿತಾ ಖ್ಯಾತಿಗಳಿಸಿದ್ದು ದಕ್ಷಿಣ ಭಾರತದಲ್ಲಿ. ತೆಲುಗಿನ ಸೊಂತಮ್ ಸಿನಿಮಾ ಮೂಲಕ ನಮಿತಾ ಮೊದಲ ಬಾರಿಗೆ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟರು.
ತೆಲುಗು, ತಮಿಳು ಮಾತ್ರವಲ್ಲದೇ ಕನ್ನಡ ಸಿನಿಮಾರಂಗದಲ್ಲೂ ಮಿಂಚಿದ್ದರೆ. ನೀಲಕಂಠ ಸಿನಿಮಾ ಮೂಲಕ ಕನ್ನಡಕ್ಕೆ ಕಾಲಿಟ್ಟಿದ್ದ ನಟಿ ನಮಿತಾ ಬಳಿಕ ಕೆಲವು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ಕ್ರೇಜಿ ಸ್ಟಾರ್ ರವಿಚಂದ್ರನ್ ಸಿನಿಮಾ ಮೂಲಕ ಕನ್ನಡ ಪ್ರೇಕ್ಷಕರಿಗೆ ನಮಿತಾ ಚಿರಪರಿಚಿತ. ಹಾಟ್ ನಟಿ ಎಂದೇ ಖ್ಯಾತ ಗಳಿಸಿರುವ ನಮಿತಾ ತಮಿಳು, ತೆಲುಗು ಸಿನಿಮಾಗಳಲ್ಲೂ ಮಿಂಚಿದ್ದಾರೆ.
ನಮಿತಾ ಕೊನೆಯದಾಗಿ ಮಲಯಾಳಂ ಮತ್ತು ತಮಿಳು ಸಿನಿಮಾದಲಲಿ ಮಿಂಚಿದ್ದರು. ಕನ್ನಡದಲ್ಲಿ ಕೊನೆಯದಾಗಿ ಬೆಂಕಿ ಬಿರುಗಾಳಿ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು.