True Story Movies: ಮಸಾಲ ದೃಶ್ಯ ಇಲ್ಲ, ಬಿಗ್ ಬಜೆಟ್ ಕೂಡ ಇಲ್ಲ… ಹೃದಯಸ್ಪರ್ಶಿ ಕಥೆಗಳಿಂದಲೇ ಗೆದ್ದ ಸಿನಿಮಾಗಳಿವು

Published : May 28, 2025, 08:37 PM ISTUpdated : May 29, 2025, 10:04 AM IST

ತನ್ನ ಸರಳ ಕಥೆಯಿಂದಲೇ ಚಿತ್ರಮಂದಿರದಲ್ಲಿ ಧೂಳಿಬ್ಬೆಸಿದ ಸಿನಿಮಾಗಳು ಹಲವು. ಅವುಗಳಲ್ಲಿ ಕೆಲವು ನೀವು ನೋಡಲೇಬೇಕಾದ ಸಿನಿಮಾಗಳಿವೆ. ಇದರಲ್ಲಿ ಕನ್ನಡ ಸಿನಿಮಾ ಕೂಡ ಸೇರಿದೆ..

PREV
19

ಒಂದು ಸಿನಿಮಾ ಗೆಲ್ಲಬೇಕು ಅಂದ್ರೆ, ಆ ಸಿನಿಮಾ ದೊಡ್ಡ ಬಜೆಟ್ ನಲ್ಲಿ  (big budget films) ಮಾಡಿರಬೇಕು, ಸ್ಟಾರ್ ನಟರಿರಬೇಕು, ಬೋಲ್ಡ್ ದೃಶ್ಯಗಳಿರಬೇಕು, ರೊಮ್ಯಾನ್ಸ್ ಹೆಚ್ಚಾಗಿರಬೇಕು ಎನ್ನುವ ಅಗತ್ಯವೇ ಇಲ್ಲ. ಯಾಕಂದ್ರೆ ಕಳೆದ ಕೆಲವು ವರ್ಷಗಳಿಂದ ಸರಳವಾದ ಪ್ರೇಮಕಥೆ ಹೊಂದಿರುವ, ಹೃದಯಸ್ಪರ್ಶಿ ಕಥೆಯನ್ನು ಹೇಳುವ ಸಿನಿಮಾಗಳೇ ಗೆದ್ದಿವೆ. ಅಂತಹ ನೀವು ನೋಡಲೇಬೇಕಾದ ಸಿನಿಮಾಗಳ ಕುರಿತು ಒಂದಿಷ್ಟು ಮಾಹಿತಿ ಇಲ್ಲಿದೆ.

29

ಹೃದಯಂ (Hrudayam)

ಹೃದಯಂ ಸಿನಿಮಾ ಪ್ರೀತಿಯ ಮೇಲೆ ಸುತ್ತುತ್ತಿರುವ ಕಥೆಯಾಗಿದೆ. ಮೊದಲ ನೋಟದಲ್ಲೇ ಪ್ರೀತಿಯಲ್ಲಿ ಬಿದ್ದ ಹುಡುಗ, ನಂತರ ಸಣ್ಣ ಕಾರಣಕ್ಕೆ ಇಬ್ಬರ ನಡುವೆ ವಿರಸ ಮೂಡಿ ಬೇರೆಯಾಗಿ, ಇಬ್ಬರ ದಿಕ್ಕು ಬೇರೆ ಬೇರೆಕಡೆಯಾಗಿ, ಆತ ತನ್ನ ಜೀವನದಲ್ಲಿ ಮತ್ತೊಂದು ಪ್ರೀತಿಯನ್ನು ಪಡೆಯೋದು, ಮದುವೆ, ತನ್ನ ಮಾಜಿ ಗೆಳತಿಯ ಮದುವೆ ಇವೆಲ್ಲವೂ ಯೌವ್ವನ, ಪ್ರೀತಿಯ ಮಧ್ಯೆ ಸುತ್ತುವ ಸರಳ ಪ್ರೇಮಕಥೆಯಾಗಿದೆ.

39

ಚಾರ್ಲಿ (Charlie)

ಇದು ಕೂಡ ದುಲ್ಕರ್ ಸಲ್ಮಾನ್ ನಟಿಸಿರುವ ಸಿನಿಮಾ. ಈ ಸಿನಿಮಾದಲ್ಲಿ ಒಬ್ಬ ವ್ಯಕ್ತಿ ಹೇಗೆ ತನ್ನ ಸುತ್ತಮುತ್ತಲಿನ ಜಗತ್ತನ್ನು ಸಂತೋಷವಾಗಿರುವಂತೆ ನೋಡಿಕೊಳ್ಳುತ್ತಾರೆ. ದೇಶವಿಡಿ ಸುತ್ತುತ್ತಾ, ತನ್ನ ಜೀವನವನ್ನು ಅನುಭವಿಸೋದು ಹೇಗೆ ಅನ್ನೋದೆ ಚಾರ್ಲಿ ಜೀವನ.

49

ದಿಯಾ (Dia)

ಇದು ಕನ್ನಡ ಸಿನಿಮಾ. ಇದೊಂದು ತ್ರಿಕೋನ ಪ್ರೇಮಕಥೆ ಅಲ್ಲದ ತ್ರಿಕೋನ ಪ್ರೇಮ ಅಂತಾನೆ ಹೇಳಬಹುದು. ತಾನು ಪ್ರೀತಿಸಿದ ಹುಡುಗ ಸತ್ತ ಸುದ್ದಿ ಕೇಳಿ ಡಿಪ್ರೆಶನ್ ಗೆ ಹೋಗುವ ಹುಡುಗಿಯ ಜೀವನದಲ್ಲಿ ಮತ್ತೊಬ್ಬ ಹುಡುಗ ಬಂದು ಆಕೆಯ ಬದುಕನ್ನು ಹೇಗೆ ಬೆಳಗುತ್ತಾನೆ, ಹುಡುಗಿ ಆತನನ್ನು ಪ್ರೀತಿಸಲು ಆರಂಭಿಸಿದ್ದೆ ತಡ, ಆಕೆಯ ಎದುರು ಸತ್ತು ಹೋಗಿದ್ದಾನೆ ಎಂದು ಅಂದುಕೊಂಡ ಹುಡುಗ ಬಂದು ನಿಲ್ಲುತ್ತಾನೆ. ಮತ್ತೆ ಏನಾಗುತ್ತೆ ಅನ್ನೋದೆ ಕಥೆ.

59

ಬೆಂಗಳೂರ್ ಡೇಸ್ (Bangalore Days)

ಕೇರಳದ ಮೂವರು ಕಸಿನ್ಸ್ ಬೆಂಗಳೂರಿಗೆ ಬಂದಾಗ, ಅಲ್ಲಿ ಏನೆಲ್ಲಾ ಆಗುತ್ತೆ ಅನ್ನೋದು ಸಿನಿಮಾ ಕಥೆ. ಪೂರ್ತಿ ಮನರಂಜನೆ ನೀಡುವ ಈ ಸಿನಿಮಾ ನೋಡಲೇಬೇಕು. ಈ ಸಿನಿಮಾದಲ್ಲಿ ದುಲ್ಖರ್ ಸಲ್ಮಾನ್, ಫಾಹದ್ ಫಾಜಿಲ್, ನಿವೀನ್ ಪೌಲಿ, ನಸ್ರಿಯಾ ನಾಜಿಮ್ ನಟಿಸಿದ್ದಾರೆ.

69

ಲಾಪತಾ ಲೇಡೀಸ್ (Laapata Ladies)

ಹೊಸದಾಗಿ ಮದುವೆಯಾದ ಇಬ್ಬರು ವಧುಗಳು ಅದಲು ಬದಲಾಗುವ ಕಥೆ ಇದು. ಪೂರ್ತಿ ಸಿನಿಮಾ ಮನರಂಜನೆ, ಕಾಮಿಡಿ ಜೊತೆಗೆ ನಿಜವಾದ ಕಥೆಯನ್ನು ಹೇಳುತ್ತೆ.

79

ಸೀತಾ ರಾಮಮ್ (Seetha Ramam)

ಸೀತಾ ರಾಮಮ್ ಸಿನಿಮಾ ಒಬ್ಬ ಯೋಧ ಹಾಗೂ ಒಬ್ಬ ಮುಸ್ಲಿಂ ಮಹಾರಾಣಿಯ ನಡುವೆ ಪತ್ರದ ಮೂಲಕ ನಡೆಯುವ ಪ್ರೇಮ ಕಥೆ. ಆದರೆ ಇಬ್ಬರೂ ಕೊನೆಗೆ ಒಂದಾಗುವುದೇ ಇಲ್ಲ ಅನ್ನೋದೇ ಬೇಸರದ ವಿಷಯ. ಆದ್ರೆ ಈ ಮಧುರ ಪ್ರೇಮ ಕಥೆಯನ್ನು ಪ್ರತಿಯೊಬ್ಬರೂ ನೋಡಬೇಕು.

89

ಉಸ್ತಾದ್ ಹೋಟೇಲ್ (Ustad Hotel)

ವಿದೇಶದಲ್ಲಿ ಹೊಟೇಲ್ ಮ್ಯಾನೇಜ್ ಮೆಂಟ್ ಕಲಿತು ಬಂದ ಯುವಕನೊಬ್ಬ, ತಾನು ಶೆಫ್ ಆಗಲು ತಂದೆಯ ಬೆಂಬಲ ಸಿಗದೇ ಇದ್ದಾಗ, ತನ್ನ ಅಜ್ಜನ ಹೊಟೇಲ್ ನಲ್ಲಿ ಆತನಿಗೆ ಸಹಾಯಕನಾಗಿ ನಿಲ್ಲುತ್ತಾನೆ. ಮುಂದೆ ಏನೆಲ್ಲಾ ಆಗುತ್ತೆ ಅನ್ನೋದೆ ಸುಂದರವಾದ ಕಥೆ.

99

96

ತ್ರಿಷಾ ಮತ್ತು ವಿಜಯ್ ಸೇತುಪತಿ ನಟಿಸಿರುವ ಈ ಸಿನಿಮಾ 90ರ ದಶಕದಲ್ಲಿ ನಡೆಯುವಂತಹ ಮಧುರವಾದ ಪ್ರೇಮಕಥೆಯಾಗಿದೆ. ಶಾಲಾ ಜೀವನ ಮುಗಿದ ಎಷ್ಟೋ ವರ್ಷಗಳ ನಂತರ ಎಲ್ಲರೂ ಜೊತೆಯಾಗಿ ಭೇಟಿಯಾದಾಗ ಹಳೆಯ ಪ್ರೇಮ ಕಥೆ ಮತ್ತೆ ನವೀರಾಗಿ ಅನಾವರಣಗೊಳ್ಳುವ ಕಥೆ ಇದಾಗಿದೆ.

Read more Photos on
click me!

Recommended Stories