ಮೂವರೊಂದಿಗೆ ಅಜಯ್ ದೇವಗನ್‌ ಡೇಟಿಂಗ್‌, ನಟನಿಗಾಗಿ ಸ್ಟಾರ್‌ ನಟಿಯರ ಕಿತ್ತಾಟ, ಕೊನೆಗೆ ಕಾಜಲ್‌ ಜತೆ ವಿವಾಹ

First Published | Nov 15, 2023, 2:46 PM IST

ಆತ ಬಾಲಿವುಡ್‌ ನ ಸೂಪರ್‌ ಹಿಟ್‌ ನಟ, ನಟಿಯರ ಜೀವನದಲ್ಲಿ ಆತನಿಗೆ ಪ್ರೇಮಾಂಕುರವಾಯ್ತು. ಈ ತ್ರಿಕೋನ ಪ್ರೇಮದಲ್ಲಿ ಕೊನೆಗೆ ನಟ ಓರ್ವ ನಟಿಯನ್ನು ಮಾತ್ರ ಮದುವೆಯಾಗಿ ಇಂದಿಗೂ ಸುಂದರ ದಾಂಪತ್ಯ ನಡೆಸುತ್ತಿದ್ದಾರೆ. ಯಾರು ಆ ನಟಿಯರು? ಯಾರು ನಟ ಇಲ್ಲಿದೆ ಸಂಪೂರ್ಣ ವಿವರ.
 

ಅಜಯ್ ದೇವಗನ್, ಕರಿಷ್ಮಾ ಕಪೂರ್ ಮತ್ತು ಕಾಜೋಲ್, ರವೀನಾ ಟಂಡನ್‌ 90 ರ ದಶಕದ ಸೂಪರ್‌ ಹಿಟ್‌ ನಟಿಯರಾಗಿದ್ದರು. ಈ ಮೂವರ ನಡುವಿನ ತ್ರಿಕೋನ ಪ್ರೇಮವು ಆ ದಿನಗಳಲ್ಲಿ ಬಹಳಷ್ಟು ಸುದ್ದಿಗಳನ್ನು ಮಾಡಿತು, ಆದರೆ ಅವರು ಎಂದಿಗೂ ಸಂಬಂಧವನ್ನು ಬಹಿರಂಗವಾಗಿ ಒಪ್ಪಿಕೊಳ್ಳಲಿಲ್ಲ. ಅದರಲ್ಲೂ ಕರಿಷ್ಮಾ ಕಪೂರ್ ಮತ್ತು ಅಜಯ್ ದೇವಗನ್ ತುಟಿ ಪಿಟಿಕ್‌ ಅಂದಿರಲಿಲ್ಲ. 

ಕರಿಷ್ಮಾ ಕಪೂರ್ ಮತ್ತು ಅಜಯ್ ದೇವಗನ್ ಮದುವೆಯಾಗುತ್ತಾರೆ ಎಂಬ ವದಂತಿಗಳು ಹರಡುತ್ತಿದ್ದ ಸಮಯವಿತ್ತು. ಫರೋಗ್ ಸಿದ್ದಿಕಿ ನಿರ್ದೇಶನದ ಜಿಗರ್ ಚಿತ್ರದ ಶೂಟಿಂಗ್ ವೇಳೆ ಅಜಯ್ ದೇವಗನ್ ಮತ್ತು ಕರಿಷ್ಮಾ ಕಪೂರ್ ಪರಸ್ಪರ ಹತ್ತಿರವಾದರು. ಮಾಧ್ಯಮ ವರದಿಗಳ ಪ್ರಕಾರ, ಅದಕ್ಕೂ ಮೊದಲು ಅಜಯ್ ದೇವಗನ್ ರವೀನಾ ಟಂಡನ್ ಜೊತೆ ಡೇಟಿಂಗ್ ಮಾಡುತ್ತಿದ್ದರು.
 

Tap to resize

ಆ ಸಮಯದಲ್ಲಿ ಅಜಯ್​ ದೇವಗನ್​ ಗಾಗಿ ನಟಿ ರವೀನಾ ಟಂಡನ್ ಮತ್ತು ಕರಿಷ್ಮಾ ಕಪೂರ್ ಜಗಳವಾಡಿಕೊಂಡಿದ್ದರು. ಸಂದರ್ಶನವೊಂದರಲ್ಲಿ ಈ ಬಗ್ಗೆ ಮಾತನಾಡಿದ್ದ ನಟಿ ರವೀನಾ ಟಂಡನ್‌ , ಕರಿಷ್ಮಾ ಕಪೂರ್ ಅವರ ಹೆಸರು ಹೇಳದೆ ಓರ್ವ ನಟಿ ನನ್ನನ್ನು 4 ಸಿನಿಮಾದಿಂದ ತೆಗೆದುಹಾಕುವಂತೆ ಮಾಡಿದ್ದಳು ಎಂದು ಆರೋಪಿಸಿದ್ದರು. 

ಆಕೆ  ತನ್ನ ಇನ್‌ಫ್ಲುಯೆನ್ಸ್ ಬಳಸಿ ನನಗೆ ನಾಲ್ಕು ಸಿನಿಮಾ ಸಿಗದ ಹಾಗೆ ಮಾಡಿದ್ದಳು ಎಂದು ಆರೋಪಿಸಿದ್ದರು. ನಾನು ಆಕೆಯ ಜೊತೆ ಒಂದು ಸಿನಿಮಾ ಮಾಡಬೇಕಾಗಿ ಬಂತು. ಆ ನಟಿ ನಿರ್ಮಾಪಕರಿಗೂ, ಹೀರೋಗೂ ಕ್ಲೋಸ್ ಆಗಿದ್ದರು. ಈ ತರ ಎಲ್ಲ ಆಗತ್ತೆ, ಆದರೆ ನನ್ನ ಹತ್ರ ಈ ರೀತಿ ಆಟ ಆಡೋಕೆ ಆಗಲ್ಲ ಎಂದು ರವೀನಾ ಹೇಳಿದ್ದರು. ಇಂದಿಗೂ ಇವರಿಬ್ಬರ ನಡುವೆ ಮಾತುಕತೆ ಇಲ್ಲ.

ಜಿಗರ್ ನಂತರ, ಅಜಯ್ ದೇವಗನ್ ಮತ್ತು ಕರಿಷ್ಮಾ ಕಪೂರ್ ಅವರು ಸುಹಾಗ್, ಧನ್ವಾನ್ ಮತ್ತು ಸರ್ಗಮ್ ಚಿತ್ರಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡರು. ಒಟ್ಟಿಗೇ ಸಿನಿಮಾ ಮಾಡುವಾಗ ಇಬ್ಬರೂ ಒಂದಷ್ಟು ಸಮಯ ಕಳೆದು ಹತ್ತಿರವಾದರು. 

ಆದರೆ, ಕಾಜೋಲ್ 1995 ರ ಹುಲ್ಚುಲ್ ಚಿತ್ರದ ಮೂಲಕ ಅಜಯ್ ದೇವಗನ್ ಅವರ ಜೀವನವನ್ನು ಪ್ರವೇಶಿಸಿದರು. ಕಾಜೋಲ್ ಅಜಯ್ ದೇವಗನ್ ಅವರನ್ನು ಭೇಟಿಯಾದಾಗ, ಅವರ ಬಬ್ಲಿ ಸ್ವಭಾವಕ್ಕೆ ಆಕರ್ಷಿತರಾದರು ಮತ್ತು ಇಬ್ಬರೂ ಸ್ನೇಹ ಬೆಳೆಸಿದರು. 
 

ಆ ದಿನಗಳಲ್ಲಿ, ಕಾಜೋಲ್ ತನ್ನ ಸ್ನೇಹಿತ ಕಾರ್ತಿಕ್ ಮೆಹ್ತಾ ಜೊತೆ ಡೇಟಿಂಗ್ ಮಾಡುತ್ತಿದ್ದಳು ಎಂದು ವರದಿಯಾಗಿದೆ ಆದರೆ ಅವರ ನಡುವೆ ವಿಷಯಗಳು ಅಷ್ಟು ಉತ್ತಮವಾಗಿಲ್ಲ. ಅಜಯ್ ದೇವಗನ್ ಮತ್ತು ಕಾಜೋಲ್ ಉತ್ತಮ ಸ್ನೇಹಿತರಾಗಿದ್ದರಿಂದ ತಮ್ಮ ಸಮಸ್ಯೆಗಳನ್ನು ಚರ್ಚಿಸುತ್ತಿದ್ದರು ಮತ್ತು ಒಟ್ಟಿಗೆ ಸಾಕಷ್ಟು ಸಮಯ ಕಳೆಯುತ್ತಿದ್ದರು.

ಇದು ಅವರ ಸಂಬಂಧವನ್ನು ಬಲಪಡಿಸಿತು ಮತ್ತು ಇಬ್ಬರೂ ಹತ್ತಿರವಾದರು. ಮಾಧ್ಯಮ ವರದಿಗಳ ಪ್ರಕಾರ, ಒಮ್ಮೆ ಕಾಜೋಲ್ ಮತ್ತು ಅಜಯ್ ಒಟ್ಟಿಗೆ ಕುಳಿತಿದ್ದಾಗ ಕರಿಷ್ಮಾ ಕಪೂರ್‌ನಿಂದ ಅಜಯ್‌ಗೆ ಕರೆ ಬಂದಿತು ಮತ್ತು ಹಿಂದಿನಿಂದ ಬಂದ ಸ್ತ್ರೀ ಧ್ವನಿಯನ್ನು ಕೇಳಿ ಕೋಪಗೊಂಡಳು. 

ಅಜಯ್ ದೇವಗನ್ ಕೂಡ ನಂತರ ಕಾಜೋಲ್ ಜೊತೆಗಿನ ಸಂಬಂಧವನ್ನು ಒಪ್ಪಿಕೊಂಡರು ಮತ್ತು ಹೀಗಾಗಿ ಕರಿಷ್ಮಾ ಅವರ ಜೀವನದಿಂದ ಹೊರಬಂದರು. ಫೆಬ್ರವರಿ 1999 ರಲ್ಲಿ, ಅಜಯ್ ದೇವಗನ್ ಮತ್ತು ಕಾಜೋಲ್ ವಿವಾಹವಾದರು. 

ಅಜಯ್ ದೇವಗನ್ ಮತ್ತು ಕಾಜೋಲ್ ಮದುವೆಯಾಗಿ 20 ವರ್ಷ ಕಳೆದಿದ್ದು,  ನೈಸಾ ದೇವಗನ್ ಮತ್ತು ಯುಗ್ ದೇವಗನ್  ಎಂಬ  ಇಬ್ಬರು ಮಕ್ಕಳಿದ್ದಾರೆ.

Latest Videos

click me!