Balayya Movies: ಒಂದೂರಿನಲ್ಲಿ 1100 ದಿನಗಳ ಕಾಲ ಪ್ರದರ್ಶನ ಕಂಡಿದ್ದ ಬಾಲಯ್ಯನ ಸಿನಿಮಾ ಯಾವುದು?

Published : Aug 07, 2025, 05:25 PM IST

ಬಾಲಯ್ಯ ಬಾಬು ಅಂದ್ರೆ ಮಾಸ್ ಫಾಲೋಯಿಂಗ್. ಆಕ್ಷನ್ ಸೀನ್ಸ್, ಪವರ್‌ಫುಲ್ ಡೈಲಾಗ್ಸ್‌ಗಳಿಂದ ಅಭಿಮಾನಿಗಳ ಹುಚ್ಚೆಬ್ಬಿಸೋದ್ರಲ್ಲಿ ಬಾಲಯ್ಯ ಸ್ಟೈಲ್ ಸೂಪರ್. ಅದಕ್ಕೇ ಮಾಸ್ ಜನ ಬಾಲಕೃಷ್ಣ ಅಂದ್ರೆ ಪಂಚಪ್ರಾಣ. ಅವರ ಸಿನಿಮಾಗಳಿಗೆ ಸಿಕ್ಕಾಪಟ್ಟೆ ರೆಸ್ಪಾನ್ಸ್ ಬರೋದಕ್ಕೂ ಇದೇ ಕಾರಣ.  

PREV
15

ನಂದಮೂರಿ ಬಾಲಕೃಷ್ಣ ಸಿನಿಮಾಗಳು ರಿಲೀಸ್ ಆದ ದಿನ ಅಭಿಮಾನಿಗಳಿಗೆಲ್ಲ ಹಬ್ಬದ ದಿನ. ಅಭಿಮಾನಿಗಳಲ್ಲಿ ಅವರಿಗಿರುವ ಅದ್ಭುತ ಫಾಲೋಯಿಂಗ್ ನಿಂದಾಗಿ ಹಲವು ಸಿನಿಮಾಗಳು 100 ದಿನಗಳಿಗೂ ಹೆಚ್ಚು ಕಾಲ ಚಿತ್ರಮಂದಿರಗಳಲ್ಲಿ ಸದ್ದು ಮಾಡ್ತಿತ್ತು. ಆದ್ರೆ, ಒಂದು ಊರಲ್ಲಿ ಮಾತ್ರ ಬಾಲಯ್ಯ ನಟಿಸಿದ ಸಿನಿಮಾ 400 ದಿನಗಳಿಗೂ ಹೆಚ್ಚು ಕಾಲ ಪ್ರದರ್ಶನ ಕಂಡಿದೆ.

25

ಕಡಪ, ಕರ್ನೂಲ್ ಜಿಲ್ಲೆಗಳಲ್ಲಿ 'ಲೆಜೆಂಡ್' ಸಿನಿಮಾಗೆ ಯಾರೂ ಊಹಿಸದ ರೀತಿಯಲ್ಲಿ ರೆಸ್ಪಾನ್ಸ್ ಸಿಕ್ಕಿತು. ಕಡಪ ಜಿಲ್ಲೆಯ ಒಂದು ಚಿತ್ರಮಂದಿರದಲ್ಲಿ ಈ ಸಿನಿಮಾ 1100 ದಿನಗಳಿಗೂ ಹೆಚ್ಚು ಕಾಲ ಪ್ರದರ್ಶನ ಕಂಡಿತು. ಕರ್ನೂಲ್ ಜಿಲ್ಲೆಯ ಎಮ್ಮಿಗನೂರು ಪಟ್ಟಣದಲ್ಲಿ 421 ದಿನಗಳ ಕಾಲ ಪ್ರದರ್ಶನ ಕಂಡಿತು.

35

ಬಾಲಕೃಷ್ಣ ಅವರ 50 ವರ್ಷಗಳ ವೃತ್ತಿಜೀವನದಲ್ಲಿ ಹಲವು ಅದ್ಭುತಗಳನ್ನು ಮಾಡಿದ್ದಾರೆ. 1986ರಲ್ಲಿ ಆರು ಬ್ಲಾಕ್‌ಬಸ್ಟರ್ ಹಿಟ್ ಸಿನಿಮಾಗಳು ಬಿಡುಗಡೆಯಾಗಿ ಪ್ರೇಕ್ಷಕರನ್ನು ರಂಜಿಸಿದವು.

45

ಬಾಲಕೃಷ್ಣ ಈಗ ಮತ್ತೊಂದು ದಾಖಲೆಗಾಗಿ ಪ್ರಯತ್ನಿಸುತ್ತಿದ್ದಾರೆ. ಈಗಾಗಲೇ ಸತತ ನಾಲ್ಕು ಹಿಟ್‌ಗಳನ್ನು ನೀಡಿದ್ದಾರೆ. ಬೋಯಪಾಟಿ ನಿರ್ದೇಶನದ 'ಅಖಂಡ 2' ಸಿನಿಮಾ ಮೂಲಕ ಡಬಲ್ ಹ್ಯಾಟ್ರಿಕ್ ಹಿಟ್ ಸಾಧಿಸುವತ್ತ ದಾಪುಗಾಲು ಹಾಕಿದ್ದಾರೆ.

55

ಇತ್ತೀಚಿನ ದಿನಗಳಲ್ಲಿ ಬಾಲಕೃಷ್ಣ ಸಿನಿಮಾದ ಆಕ್ಷನ್‌ ಸೀನ್‌ಗಳು, ಲಾಜಿಕ್‌ ಇಲ್ಲದ ದೃಶ್ಯಗಳು ಸಿಕ್ಕಾಪಟ್ಟೆ ಟ್ರೋಲ್‌ ಕೂಡ ಆಗುತ್ತವೆ. 

Read more Photos on
click me!

Recommended Stories