ಸ್ಟಾರ್ ಡೈರೆಕ್ಟರ್ ಪೂರಿ ಜಗನ್ನಾಥ್ ಬಹುತೇಕ ಎಲ್ಲಾ ಸ್ಟಾರ್ ನಟರ ಜೊತೆ ಸಿನಿಮಾ ಮಾಡಿದ್ದಾರೆ. ಮಹೇಶ್ ಬಾಬು, ಪವನ್ ಕಲ್ಯಾಣ್, ಜೂ.ಎನ್‌ಟಿಆರ್, ಅಲ್ಲು ಅರ್ಜುನ್, ರಾಮ್ ಚರಣ್ ಇವರೆಲ್ಲರ ಜೊತೆ ಸೂಪರ್ ಹಿಟ್ ಸಿನಿಮಾಗಳನ್ನ ಕೊಟ್ಟಿದ್ದಾರೆ. ಪೂರಿ ಜಗನ್ನಾಥ್ ಸಿನಿಮಾಗಳಲ್ಲಿ ಹೀರೋ ಪಾತ್ರಗಳು ತುಂಬಾ ವಿಭಿನ್ನವಾಗಿರುತ್ತವೆ. ಅದಕ್ಕೇ ಸ್ಟಾರ್ ನಟರು ಪೂರಿ ಜಗನ್ನಾಥ್ ಜೊತೆ ಸಿನಿಮಾ ಮಾಡೋಕೆ ಇಷ್ಟ ಪಡ್ತಾರೆ. ಪೂರಿ ಜಗನ್ನಾಥ್ ಬದ್ರಿ, ಇಡಿಯಟ್, ಪೋಕಿರಿ, ದೇಶಮುದುರು, ಚಿರುತ, ಟೆಂಪರ್ ನಂತಹ ಸೂಪರ್ ಹಿಟ್ ಸಿನಿಮಾಗಳನ್ನ ಕೊಟ್ಟಿದ್ದಾರೆ.