ಕನ್ನಡ ನಿರ್ದೇಶಕನೊಂದಿಗೆ ಅನುಷ್ಕಾ ಶೆಟ್ಟಿ ಮದ್ವೆ? ಈ ಕ್ರಿಕೆಟಿಗನ ಮೇಲೆ ಬಾಹುಬಲಿ ನಟಿ ಲವ್ವಲ್ಲಿ ಬಿದ್ದಿದ್ದರಂತೆ!

First Published | May 28, 2024, 11:27 AM IST

ಈ ಬಾಹುಬಲಿ ನಟಿ ಅನುಷ್ಕಾ ಶೆಟ್ಟಿಗೆ  ನೆಟ್ಟಿಗರು ಆಗಾಗ ಮದ್ವೆ ಮಾಡಿಸುತ್ತಲೇ ಇರುತ್ತಾರೆ. ಅದರಲ್ಲೂ ಈಗಾಗಲೇ ಸುಮಾರು ಸಾರಿ ಬಾಹುಬಲಿ ಸಹ ನಟ ಪ್ರಭಾಸ್ ಜೊತೆ ಮದ್ವೆ ಮಾಡಿಸಿಯಾಗಿದೆ. ಇದೀಗ ಹೊಸತು ಎಂಬಂತೆ ಕನ್ನಡದ 42ರ ನಿರ್ದೇಶಕನೊಂದಿಗೆ ಈ ನಟಿಯ ಮದ್ವೆ ಎಂಬ ಸುದ್ದಿ ಹರಿದಾಡುತ್ತಿದ್ದು, ಅವರೋ, ಇವರೋ ಎಂಬ ಚರ್ಚೆ ಜೋರಾಗಿಯೇ ನಡೆಯುತ್ತಿದೆ. ಈ ನಡುವೆಯೇ ಅನುಷ್ಕಾ ಒಮ್ಮೆ ಭಾರತೀಯ ಕ್ರಿಕೆಟಿಗನ ಮೇಲೆ ಕ್ರಶ್ ಇತ್ತು ಅಂತ ಹೇಳಿದ್ದು, ಇದೀಗ ಮತ್ತೆ ವೈರಲ್ ಆಗಿದೆ. ಅಷ್ಟುಕ್ಕೂ ಯಾರು ಆ ಕ್ರಿಕೆಟಿಗ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ

ಒಂದೆಡೆ ಐಪಿಎಲ್ 2024ಗೆ ಅಂತ್ಯ ಹಾಡಿದ್ದು, ಕೆಕೆಆರ್ ಟ್ರೋಫಿ ಗೆದ್ದು ಬೀಗುತ್ತಿದೆ. ಇದೇ ಸಮಯದಲ್ಲಿ ಭಾರತೀಯ ಕ್ರಿಕೆಟ್ ತಂಡ ಟಿ20 ವಿಶ್ವಕಪ್ ಆಡಲು ಅಮೆರಿಕಕ್ಕೆ ತೆರಳಿದ್ದು, ಕ್ರಿಕೆಟ್ ಪ್ರೇಮಿಗಳು ಇನ್ನೊಂದು ಹಬ್ಬವನ್ನು ಕಣ್ತುಂಬಿಕೊಳ್ಳಲು ಉತ್ಸುಕರಾಗಿದ್ದಾರೆ.

ಈ ನಡುವೆ ಭಾರತೀಯ ಕ್ರಿಕೆಟ್ ಕೋಚ್ ರಾಹುಲ್ ದ್ರಾವಿಡ್ ಅವಧಿ ಮುಗಿಯುತ್ತಿದ್ದು, ಇನ್ನಾರು ಈ ಸ್ಥಾನ ತುಂಬ ಬಲ್ಲರು ಎಂಬ ಚರ್ಚೆಯೂ ಬಿರುಸಿನಿಂದ ಸಾಗುತ್ತಿದೆ.

Tap to resize

ಕೋಲ್ಕತಾ ನೈಟ್ ರೈಡರ್ಸ್ ಈ ಬಾರಿ ಐಪಿಎಲ್ ಗೆದ್ದಿರುವ ಕಾರಣ, ಈ ತಂಡದ ಮೆಂಟರ್ ಗೌತಮ್ ಗಂಭೀರ್ ಭಾರತೀಯ ಕ್ರಿಕೆಟ್ ತಂಡ ನೂತನ ಕೋಚ್ ಆಗಬಹುದೆಂಬ ಚರ್ಚೆಯೂ ನಡೆಯುತ್ತಿದೆ.

ಈ ನಡುವೆಯೇ ದಕ್ಷಿಣ ಭಾರತೀಯ ನಟಿ ಅನುಷ್ಕಾ ಶರ್ಮಾ ಅವರ ಕ್ರಶ್ ಮೇಲಿನ ಹಳೆಯ ಸುದ್ದಿಯೊಂದು ಮತ್ತೆ ಮುನ್ನೆಲೆಗೆ ಬಂದಿದ್ದು, ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. 

ಅದೆಲ್ಲಿಯ ಕ್ರಿಕೆಟ್, ಭಾರತೀಯ ತಂಡದ ಕೋಚ್ ದ್ರಾವಿಡ್, ಇನ್ನೆಲ್ಲಿಯ ಅನುಷ್ಕಾ ಶೆಟ್ಟಿ ಅಂತ ಆಶ್ಚರ್ಯವಾಗಿರಬಹುದು ಅಲ್ವಾ? ಕರ್ನಾಟಕದ ನಂಟಿರೋ ನಟಿಗೆ ಕರುನಾಡ ಕ್ರಿಕೆಟಿಗನ ಮೇಲಿತ್ತಂತೆ ಕ್ರಶ್.

ಹೌದು. ಕ್ರಿಕೆಟಿಗ ರಾಹುಲ್ ದ್ರಾವಿಡ್ ಮೇಲೆ ಶೆಟ್ಟಿಗೆ ವಿಪರೀತ ಕ್ರಶ್ ಇತ್ತಂತೆ. ಬರ್ತಾ ಬರ್ತಾ ಅದು ಲವ್ ಆಗಿ ಕನ್ವರ್ಟ್ ಆಗಿದ್ದು, ಅವರನ್ನೇ ಮದುವೆಯಾಗಬೇಕೆಂದು ಬಯಸಿದ್ದಾಗಿ ಅನುಷ್ಕಾ ಶೆಟ್ಟಿ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ. 
 

ಅಷ್ಟಕ್ಕೂ ಕ್ರಿಕೆಟ್ ಜಗತ್ತು ಹಾಗೂ ಸಿನಿಮಾ ರಂಗಕ್ಕೂ ಬಿಡಿಸಲಾಗದ ನಂಟಿದೆ. ಪಟೌಡಿಯಿಂದ ಹಿಡಿದು, ಕೊಹ್ಲಿಯವರೆಗೂ ಬಾಲಿವುಡ್ ನಟಿಯರನ್ನೇ ಮದುವೆಯಾಗಿದ್ದು. ಈ ಲಿಸ್ಟ್‌ಗೆ ಇತ್ತೀಚೆಗೆ ಸುನಿಲ್ ಶೆಟ್ಟಿ ಮಗಳ ಕೈ ಹಿಡಿದ ಕೆ.ಎಲ್. ರಾಹುಲ್ ಸಹ ಸೇರ್ಪಡೆಯಾಗಿದ್ದಾರೆ.

ಒಂದು ಕಾಲದಲ್ಲಿ ಧೋನಿ, ದೀಪಿಕಾ ಪಡುಕೋಣೆ ಜೊತೆ ಡೇಟಿಂಗ್ ಮಾಡುತ್ತಿದ್ದು, ಇದೇ ಪಟ್ಟಿಗೆ ಯುವರಾಜ್ ಸಿಂಗ್ ಸಹ ಸೇರುತ್ತಾರೆ. ಆದರೆ, ಎಲ್ಲವೂ ಸರಿಯಾಗದೇ ಬೇರೆಯಾಗಿದ್ದು ಮಾತ್ರ ಇತಿಹಾಸ.

ತಮ್ಮ ಸರಳತೆ, ಸಹನೆಯಿಂದಲೇ ಎಲ್ಲರ ಅಚ್ಚು ಮೆಚ್ಚಾಗಿದ್ದ ರಾಹುಲ್ ದ್ರಾವಿಡ್ ಕ್ರಿಕೆಟ್ ಜಗತ್ತಿನಲ್ಲಿ ಮಾಡಿರುವ ಸಾಧನೆ ಒಂದೆರಡಲ್ಲ. ಟೆಸ್ಟ್ ಕ್ರಿಕೆಟಿನಲ್ಲಿ ಅವರನ್ನು ಮೀರಿಸುವ ಆಟಗಾರರೇ ಇಲ್ಲವೆನ್ನಬಹುದು.

ರಾಹುಲ್ ದ್ರಾವಿಡ್ ಮಾರ್ಗದರ್ಶನದಲ್ಲಿ ಟೀಂ ಇಂಡಿಯಾ ಕಳೆದ ವರ್ಷದ ಕೊನೆಯಲ್ಲಿ ಭಾರತದಲ್ಲೇ ನಡೆದ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಫೈನಲ್‌ಗೇರಿ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು.

ಇನ್ನು ರಾಹುಲ್ ದ್ರಾವಿಡ್ ಮಾರ್ಗದರ್ಶನದಲ್ಲಿ ಐಸಿಸಿ ಟ್ರೋಫಿ ಗೆಲ್ಲಲು ಇದೀಗ ಕೊನೆಯ ಅವಕಾಶ ಮುಂದಿದೆ. ಅಮೆರಿಕ ಹಾಗೂ ವೆಸ್ಟ್ ಇಂಡೀಸ್‌ನಲ್ಲಿ ಜೂನ್ 01ರಿಂದ ಐಸಿಸಿ ಟಿ20 ವಿಶ್ವಕಪ್ ಟೂರ್ನಿ ಆರಂಭವಾಗಲಿದ್ದು, ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ದಶಕದ ಬಳಿಕ ಐಸಿಸಿ ಟ್ರೋಫಿ ಬರ ನೀಗಿಸಿಕೊಳ್ಳುತ್ತಾ ಎನ್ನುವುದನ್ನು ಕಾದು ನೊಡಬೇಕಿದೆ.

Latest Videos

click me!