ಇದೀಗ ನಟ ಫಹಾದ್ ಫಾಸಿಲ್ ತಾವು ಅಟೆನ್ಷನ್ ಡೆಫಿಸಿಟ್/ ಹೈಪರ್ ಆಕ್ಟಿವಿಟಿ ಡಿಸಾರ್ಡರ್ (ಎಡಿಎಚ್‌ಡಿ) ಸಮಸ್ಯೆಯಿಂದ ಬಳಲುತ್ತಿರುವುದಾಗಿ ಹೇಳಿದ್ದಾರೆ. 41 ವಯಸ್ಸಿನಲ್ಲಿ ನನಗೆ ಈ ಸಮಸ್ಯೆ ಇರುವುದು ಗೊತ್ತಾಯಿತು ಎಂದು ಅವರು ಹೇಳಿದ್ದಾರೆ.
ADHD ಎಂಬುದು ನ್ಯೂರೊ ಡೆವಲಪ್‌ಮೆಂಟಲ್ ಡಿಸಾರ್ಡರ್ ಆಗಿದ್ದು, ಗಮನ ನಿಯಂತ್ರಣ, ನಡವಳಿಕೆ ಮತ್ತು ಉದ್ವೇಗದ ನಿಯಂತ್ರಣ ಮಾಡುವ ಮಿದುಳಿನ ಸಾಮರ್ಥ್ಯದ ಮೇಲೆ ಪರಿಣಾಮ ಬೀರುತ್ತದೆ. ಮಕ್ಕಳಲ್ಲಿ ಸಾಮಾನ್ಯವಾಗಿರುವ ಈ ಸಮಸ್ಯೆ ವಯಸ್ಕರಲ್ಲೂ ಪರಿಣಾಮ ಬೀರುತ್ತದೆ ಎಂದು ಅವರು ಹೇಳಿದ್ದಾರೆ.
ಇತ್ತೀಚೆಗೆ ಕೊತ್ತಮಂಗಲಂನಲ್ಲಿ ಪೀಸ್ ವ್ಯಾಲಿ ಚಿಲ್ಮನ್ಸ್ ವಿಲೇಜ್ ಉದ್ಘಾಟನೆ ಮಾಡಿ ಮಾತನಾಡಿರುವ ಅವರು, ಚಿಲ್ಟನ್ಸ್ ವಿಲೇಜ್‌ನಲ್ಲಿ ಸುತ್ತಾಡುತ್ತಾ ಎಡಿಎಚ್‌ಡಿ ಸಮಸ್ಯೆಯನ್ನು ಗುಣಪಡಿಸಬಹುದೇ? ಎಂದು ವೈದ್ಯರನ್ನು ಪ್ರಶ್ನಿಸಿದ್ದಾರೆ.
'ಚಿಕ್ಕ ವಯಸ್ಸಿನಲ್ಲೇ ಈ ಸಮಸ್ಯೆ ಇರುವುದು ಪತ್ತೆ ಮಾಡಿದರೆ ಸುಲಭವಾಗಿ ಗುಣಪಡಿಸಬಹುದು ಎಂದು ವೈದ್ಯರು ಹೇಳಿದ್ದಾರೆ. 41ನೇ ವಯಸ್ಸಿನಲ್ಲಿ ಎಡಿಎಚ್‌ಡಿ ಸಮಸ್ಯೆ ಪತ್ತೆಯಾದರೆ ಗುಣಪಡಿಸಬಹುದೇ ಎಂದು ಕೇಳಿದೆ ಇತ್ತೀಚೆಗೆ ಪರೀಕ್ಷೆ ವೇಳೆ ನನಗೆ ಎಡಿಎಚ್‌ಡಿ ಸಮಸ್ಯೆ ಇರುವುದು ಪತ್ತೆಯಾಗಿದೆ ಎಂದು ಅವರು ಹೇಳಿದ್ದಾರೆ.
ಫಹಾದ್ ಫಾಸಿಲ್ ಅವರು ಮೊದಲಿನಿಂದಲೂ ಮಲಯಾಳಂ ಸಿನಿಮಾಗಳಲ್ಲಿ ನಟಿಸುತ್ತಾ ಬಂದಿದ್ದಾರೆ. ಇದಲ್ಲದೆ, ಪರಭಾಷೆಯ ‘ಸೂಪರ್ ಡಿಲಕ್ಸ್’, ‘ವಿಕ್ರಮ್’, ‘ಪುಷ್ಪ’ ಚಿತ್ರಗಳಲ್ಲಿ ಅವರು ಬಣ್ಣ ಹಚ್ಚಿದ್ದಾರೆ.
ಏಪ್ರಿಲ್ 11ರಂದು ತೆರೆಕಂಡ ಅವರು ಅಭಿನಯಿಸಿರುವ 'ಆವೇಶಂ' ಚಿತ್ರ ವಿಮರ್ಶಕರಿಂದ ಉತ್ತಮ ಪ್ರತಿಕ್ರಿಯೆ ಪಡೆದಿದೆ. ಚಿತ್ರದ ನಿರ್ದೇಶನ, ಸಿನಿಮಾಟೋಗ್ರಫಿ, ಸಂಗೀತ, ತಾಂತ್ರಿಕತೆ, ಅದ್ಭುತ ನಟನೆ, ಅದರಲ್ಲೂ ಫಹಾದ್ ಫಾಸಿಲ್ ನಟನೆಗೆ ಮೆಚ್ಚುಗೆ ವ್ಯಕ್ತವಾಗಿದೆ.