ಹಂಪಿಯ ಗತ ವೈಭವ ಸಾರುವ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ: ಏನಿದು ‘ತಂಬಾ’!

First Published Oct 28, 2024, 4:50 PM IST

ಹಂಪಿಯ ಗತವೈಭವವನ್ನು ಸಾರುವ ಕಥಾಹಂದರವುಳ್ಳ ಬಾಲಿವುಡ್‌ ಸಿನಿಮಾ ‘ತಂಬಾ’ಗೆ ರಶ್ಮಿಕಾ ಮಂದಣ್ಣ ನಾಯಕಿಯಾಗಿದ್ದಾರೆ. ಈ ಹಿಂದೆ ಈ ಸಿನಿಮಾಕ್ಕೆ ‘ವ್ಯಾಂಪೈರ್ಸ್ ಆಫ್ ವಿಜಯ ನಗರ’ ಎಂದು ಹೆಸರಿಡಲಾಗಿತ್ತು.

ಹಂಪಿಯ ಗತವೈಭವವನ್ನು ಸಾರುವ ಕಥಾಹಂದರವುಳ್ಳ ಬಾಲಿವುಡ್‌ ಸಿನಿಮಾ ‘ತಂಬಾ’ಗೆ ರಶ್ಮಿಕಾ ಮಂದಣ್ಣ ನಾಯಕಿಯಾಗಿದ್ದಾರೆ. ಇದು ‘ವ್ಯಾಂಪೈರ್’ ಮಾದರಿಯ ಹಾರರ್ ಕಾಮಿಡಿ ಸಿನಿಮಾ ಆಗಿದ್ದು, ಸಿನಿಮಾದಲ್ಲಿ ನವಾಜುದ್ಧೀನ್ ಸಿದ್ಧಿಕಿ ಮುಖ್ಯ ಪಾತ್ರದಲ್ಲಿದ್ದಾರೆ. ಆಯುಷ್ಮಾನ್ ಖುರಾನಾ ನಾಯಕ.

ಈ ಹಿಂದೆ ಈ ಸಿನಿಮಾಕ್ಕೆ ‘ವ್ಯಾಂಪೈರ್ಸ್ ಆಫ್ ವಿಜಯ ನಗರ’ ಎಂದು ಹೆಸರಿಡಲಾಗಿತ್ತು ಈಗ ಅದನ್ನು ಬದಲಿಸಿ ‘ತಂಬಾ’ ಎಂಬ ನಾಮಕರಣ ಮಾಡಲಾಗಿದೆ. ಇತ್ತೀಚೆಗೆ ಬಾಲಿವುಡ್​ನಲ್ಲಿ ಹಾರರ್ ಕಾಮಿಡಿ ಸಿನಿಮಾಗಳು ದೊಡ್ಡ ಸದ್ದು ಮಾಡುತ್ತಿವೆ. 

Latest Videos


‘ತಂಬಾ’ ಸಹ ಅದೇ ಜಾನರ್​ಗೆ ಸೇರಿದ ಸಿನಿಮಾ. ‘ಮುಂಜಿಯಾ’ ಸಿನಿಮಾ ಮೂಲಕ ದೊಡ್ಡ ಹಿಟ್ ನೀಡಿರುವ ನಿರ್ದೇಶಕ ಆದಿತ್ಯ ಸರ್ಪೊತೆದಾರ್ ಈ ಸಿನಿಮಾವನ್ನೂ ನಿರ್ದೇಶನ ಮಾಡುತ್ತಿದ್ದಾರೆ.

ರಾಷ್ಟ್ರೀಯ ಸೈಬರ್‌ ಕ್ರೈಮ್‌ ಕೇಂದ್ರಕ್ಕೆ ರಾಯಭಾರಿ: ಭಾರತೀಯ ಸೈಬರ್‌ ಅಪರಾಧ ಸಮನ್ವಯ ಕೇಂದ್ರದ ರಾಷ್ಟ್ರೀಯ ರಾಯಭಾರಿಯಾಗಿ ಕನ್ನಡತಿ, ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಅವರನ್ನು ಆರಿಸಲಾಗಿದೆ. ಈ ಕೇಂದ್ರವು, ಕೇಂದ್ರದ ಗೃಹ ಸಚಿವಾಲಯದಡಿ ಕಾರ್ಯನಿರ್ವಹಿಸುತ್ತದೆ. 

ವರ್ಷದ ಆರಂಭದಲ್ಲಿ ಜಾಲತಾಣದಲ್ಲಿ ತಮ್ಮ ಡೀಪ್‌ಫೇಕ್‌ ವಿಡಿಯೋನಿಂದ ಸುದ್ದಿಯಾಗಿದ್ದ ಮಂದಣ್ಣ ಈ ಬಗ್ಗೆ ಹರ್ಷ ವ್ಯಕ್ತಪಡಿಸಿದ್ದು, ‘ನಮ್ಮ ಆನ್‌ಲೈನ್‌ ಜಗತ್ತಿನ ರಕ್ಷಣೆಗೆ ಕಠಿಣ ಕ್ರಮ ಕೈಗೊಳ್ಳುವ ಸಮಯ ಬಂದಿದೆ. ಮುಂದಿನ ಪೀಳಿಗೆ ಮತ್ತು ನಮಗಾಗಿ ಸುರಕ್ಷಿತ ಜಾಲತಾಣ ನಿರ್ಮಾಣಕ್ಕೆ ಎಲ್ಲರೂ ಒಂದಾಗಬೇಕು. ರಾಯಭಾರಿಯಾಗಿ ಸಾಧ್ಯವಾದಷ್ಟು ಜಾಗೃತಿ ಮೂಡಿಸುತ್ತೇನೆ’ ಎಂದು ಹೇಳಿದ್ದಾರೆ.

click me!