ಅನನ್ಯಾ ಪಾಂಡೆ ಜೊತೆ ಬ್ರೇಕ್ ಅಪ್ ಮಾಡ್ಕೊಂಡ ಆದಿತ್ಯಾ ರಾಯ್ ತಾನು ಇಷ್ಟ ಪಡೋ ಹುಡುಗಿ ಬಗ್ಗೆ ಗುಟ್ಟು ಬಿಚ್ಚಿಟ್ರು!

First Published | Oct 28, 2024, 4:50 PM IST

ಅನನ್ಯಾ ಪಾಂಡೆ ಮತ್ತು ಆದಿತ್ಯ ರಾಯ್ ಕಪೂರ್ ಬ್ರೇಕ್ ಅಪ್ ಆಗಿರೋದು ಎಲ್ಲರಿಗೂ ಗೊತ್ತಿದೆ. ಇಬ್ಬರೂ ಕಳೆದ ಎರಡು ವರ್ಷಗಳಿಂದ ರಿಲೇಶನ್ ಶಿಪ್ ನಲ್ಲಿದ್ರು.ಇತ್ತೀಚೆಗಷ್ಟೇ ಅವರ ನಡುವೆ ಬ್ರೇಕ್ ಅಪ್ ಆಗಿದೆ. ಇದೀಗ ಆದಿತ್ಯಾ ಅವರು  ಕರೀನಾ ಕಪೂರ್ ಖಾನ್ ಅವರ ಪಾಡ್ಕಾಸ್ಟ್ ಶೋ ನಲ್ಲಿ ತಾವು ಇಷ್ಟಪಡುವ ಹುಡುಗಿಯ ಬಗ್ಗೆ ಹೇಳಿದ್ದಾರೆ. 
 

ಬಾಲಿವುಡ್ ಸೆಲೆಬ್ರಿಟಿಗಳಾದ ಆದಿತ್ಯ ರಾಯ್ ಕಪೂರ್ (Aditya Roy Kapur) ಮತ್ತು ಅನನ್ಯಾ ಪಾಂಡೆ ಅವರ ಲವ್ ಸ್ಟೋರಿ ಪ್ರಪಂಚಕ್ಕೆ ಗೊತ್ತಾಗಿತ್ತು. ಈ ಜೋಡಿ ಕಳೆದ ಎರಡು ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದರು. ಲವ್ ಬರ್ಡ್ಸ್ ಒಬ್ಬರನ್ನೊಬ್ಬರು ರಹಸ್ಯವಾಗಿ ಭೇಟಿಯಾಗುವುದಲ್ಲದೆ ವೆಕೇಶನ್ ಎಂಜಾಯ್ ಮಾಡೋದಕ್ಕೆ ವಿದೇಶಕ್ಕೂ ಜೊತೆಯಾಗಿ ಹೋಗುತ್ತಿದ್ದರು. ಇಬ್ಬರ ಇಂಟಿಮೆಟ್ ಕ್ಷಣಗಳ ಫೋಟೊ ಕೂಡ ಸೋಶಿಯಲ್ ಮೀಡೀಯಾದಲ್ಲಿ ವೈರಲ್ ಆಗಿತ್ತು. 
 

ಇಬ್ಬರ ನಡುವೆ ಸಾಕಷ್ಟು ವರ್ಷಗಳ ಅಂತರ ಇದ್ದರೂ ಕೂಡ, ಜನ ಇವರಿಬ್ಬರ ಜೋಡಿಯನ್ನು ಇಷ್ಟಪಟ್ಟಿದ್ದರು. ಆದರೆ ಈ ವರ್ಷದ ಆರಂಭದಲ್ಲಿ ಈ ಜೋಡಿ ಬೇರ್ಪಟ್ಟರು. ಬ್ರೇಕಪ್ ನಂತರ, ಅನನ್ಯಾ ಪಾಂಡೆ (Ananya Pandey) ತಮ್ಮ ಜೀವನದಲ್ಲಿ ಮುಂದೆ ಹೋಗೊದಕ್ಕೆ ಪ್ರಯತ್ನಿಸುತ್ತಿದ್ದಾರೆ, ಆದರೆ, ನಟ ತನ್ನ ಪ್ರೀತಿಯ ಜೀವನದಲ್ಲಿ ಗೋಡೆ ನಿರ್ಮಾಣ ಮಾಡಿಕೊಂಡಿದ್ದಾರೆ. ಆ ಮೂಲಕ ತಮಗೆ ಎಂತಹ ಹುಡುಗಿ ಬೇಕು ಅನ್ನೋದನ್ನ ಹೇಳಿದ್ದಾರೆ. 
 

Tap to resize

ಆದಿತ್ಯ ರಾಯ್ ಕಪೂರ್ ಇತ್ತೀಚೆಗೆ ಕರೀನಾ ಕಪೂರ್ ಖಾನ್ (Kareen Kapoor Khan) ಅವರ ಪಾಡ್ಕಾಸ್ಟ್ ಶೋ 'ವಾಟ್ ವುಮೆನ್ ವಾಂಟ್' ಸೀಸನ್ 5 ರಲ್ಲಿ ಭಾಗವಾಗಿದ್ದರು, ಅಲ್ಲಿ ಅವರು ತಮ್ಮ ರಿಲೇಶನ್ ಶಿಪ್  ಬಗ್ಗೆ ಸಾಕಷ್ಟು ಮಾತನಾಡಿದರು. ಅಷ್ಟೇ ಅಲ್ಲದೇ ತಾವೀಗ್ ಸಿಂಗಲ್ ಆಗಿದ್ದು, ಎಂಜಾಯ್ ಮಾಡ್ತಿರೋದಾಗಿ ತಿಳಿಸಿದ್ದರು.  ಅಷ್ಟೇ ಅಲ್ಲ, ಈ ಸಮಯದಲ್ಲಿ ಅವರು ಯಾವ ರೀತಿಯ ಹುಡುಗಿಯರನ್ನು ಇಷ್ಟಪಡುತ್ತಾರೆ ಅನ್ನೋದನ್ನು ಹೇಳಿದ್ದಾರೆ. ಇಲ್ಲಿದೆ ನೋಡಿ, ನಟ ಆದಿತ್ಯ ರಾಯ್ ಕಪೂರ್ ಇಷ್ಟಪಡುವಂತಹ ಹುಡುಗಿಯ ಗುಣಗಳ ಬಗ್ಗೆ ಮಾಹಿತಿ. 
 

ಹಾಸ್ಯ ಪ್ರಜ್ಞೆ (Sense of humour)
ಆದಿತ್ಯ ರಾಯ್ ಕಪೂರ್ ಒಬ್ಬ ತಾವು ಇಷ್ಟ ಪಡುವ ಹುಡುಗಿ ಹೇಗಿರಬೇಕು ಅನ್ನೋದನ್ನ ಹೇಳುತ್ತಾ,  ಹುಡುಗಿಯ ಸೆನ್ಸ್ ಆಫ್ ಹ್ಯೂಮರ್ ಚೆನ್ನಾಗಿರಬೇಕು, ಅವರ ಹಾಸ್ಯ ಇನ್ನೊಬ್ಬರ ಮುಖದಲ್ಲಿ ನಗುವನ್ನು ತರಿಸುವಂತಿರಬೇಕು ಎಂದಿದ್ದಾರೆ.  ಅಷ್ಟೇ ಅಲ್ಲ ಹುಡುಗರು ಬುದ್ದಿವಂತ ಹುಡುಗಿಯ ಕಡೆಗೆ ಹೆಚ್ಚು ಆಕರ್ಷಿತರಾಗ್ತಾರೆ ಅಂತಾನು ಹೇಳಿದ್ದಾರೆ.

ತಮ್ಮ ಮಾತುಗಳಿಗೆ ಬದ್ಧವಾಗಿರುವ ಹುಡುಗಿ
ಆದಿತ್ಯ ರಾಯ್ ಕಪೂರ್ ಇಷ್ಟಪಡುವ ಮತ್ತೊಂದು ಕ್ವಾಲಿಟಿ ಅಂದ್ರೆ ಸಂಬಂಧದಲ್ಲಿ ಪ್ರಾಮಾಣಿಕವಾಗಿರುವ ಹಾಗೂ ತಮ್ಮ ಮಾತಿಗೆ ಬದ್ಧರಾಗಿರುವ ಹುಡುಗಿ ಇಷ್ಟ ಎಂದಿದ್ದಾರೆ.  ಹೆಚ್ಚಿನ ಹುಡುಗರು ಇಷ್ಟಪಡೋದು ಪ್ರಬುದ್ಧವಾಗಿ ಆಲೋಚನೆ ಮಾಡುವ ಹುಡುಗಿಯನ್ನೆ. ಮೆಚ್ಯೂರಿಟಿ ಇಲ್ಲದ ಹುಡುಗಿಯರು ಆರಂಭದಲ್ಲಿ ಇಷ್ಟವಾಗ್ತಾರೆ, ಆದರೆ ಸಮಯ ಕಳೆದಂತೆ ಅದು ಕಿರಿ ಕಿರಿ ಎನಿಸುತ್ತೆ.  ದಿನವಿಡೀ ಮಕ್ಕಳಂತೆ ಆಡುವ, ಆಳುವ ಹುಡುಗಿ ಅಂದ್ರೆ ಯಾವ ಹುಡುಗರೂ ಸಹ ಇಷ್ಟ ಪಡೋದಿಲ್ಲ. 

ತನ್ನನ್ನು ತಾನು ಗೌರವಿಸುವ ಹುಡುಗಿ
ಮಹಿಳೆಯರು ಹಿಂದೆ ಸರಿಯುವ ಅಭ್ಯಾಸವನ್ನು ಹೊಂದಿದ್ದಾರೆ ಇದು ಸರಿಯಲ್ಲ.  ನೀವು ನಿಮ್ಮನ್ನು ಗೌರವಿಸಿದರೆ, ಇತರರು ನಿಮ್ಮನ್ನು ಗೌರವಿಸುತ್ತಾರೆ. ನಿಮ್ಮ ಮನಸ್ಸಿನಲ್ಲಿರುವ ವಿಷಯಗಳ ಕೆಟ್ಟದಾಗಿ ಮಾತನಾಡಿದರೆ, ನಿಮ್ಮ ಎದುರಿಗಿರುವ ವ್ಯಕ್ತಿ ಕೂಡ ಅದನ್ನು ಇಷ್ಟ ಪಡೋದಿಲ್ಲ. ಮತ್ತೊಂದೆಡೆ, ನಿಮ್ಮ ಮಾತನ್ನು ಹೇಗೆ ಉಳಿಸಿಕೊಳ್ಳಬೇಕೆಂದು ನಿಮಗೆ ತಿಳಿದಿದ್ದರೆ, ಅದು ನಿಮ್ಮ ಸಂಬಂಧವನ್ನು ಸುಧಾರಿಸುವುದಲ್ಲದೆ, ನಿಮ್ಮ ಸಂಗಾತಿ ಕೂಡ ನಿಮ್ಮನ್ನ ಅರ್ಥ ಮಾಡಿಕೊಳ್ತಾರೆ. 

ಪ್ರಾಮಾಣಿಕರಾಗಿರುವ ಹುಡುಗಿ
ಅದು ಹುಡುಗ ಅಥವಾ ಹುಡುಗಿಯಾಗಿರಲಿ, ಪ್ರತಿಯೊಬ್ಬರೂ ಸಂಬಂಧದ ಬಗ್ಗೆ ಸಂಪೂರ್ಣವಾಗಿ ಪ್ರಾಮಾಣಿಕವಾಗಿರುವ ಸಂಗಾತಿಯನ್ನು ಬಯಸುತ್ತಾರೆ. ಹುಡುಗರ ವಿಷಯಕ್ಕೆ ಬಂದಾಗ, ಅವರು ತಾನು ಪ್ರೀತಿಸಿದ ಹುಡುಗಿಯೊಂದಿಗೆ ಜೀವನದಲ್ಲಿ ಸೆಟಲ್ ಆಗೋದಕ್ಕೆ ಇಷ್ಟಪಡುತ್ತಾರೆ, ತಮ್ಮ ಸಂಬಂಧವನ್ನು ಅಗ್ರಸ್ಥಾನದಲ್ಲಿರಿಸುವುದಲ್ಲದೆ ಕುಟುಂಬದ ಮೌಲ್ಯಗಳನ್ನು ಅರ್ಥಮಾಡಿಕೊಳ್ಳುತ್ತಾರೆ. ಹಾಗಾಗಿ ಸಂಬಂಧದಲ್ಲಿ ಪ್ರಾಮಾಣಿಕರಾಗಿರೋದು ಮುಖ್ಯ. 

Latest Videos

click me!