ಅಮರನ್‌: ಭಾರತೀಯ ಸೇನೆಯ ಡೇರಿಂಗ್ ಹೀರೋ ಮೇಜರ್ ಮುಕುಂದ್ ತ್ಯಾಗದ ಕತೆ ಇದು

Published : Oct 28, 2024, 04:12 PM ISTUpdated : Oct 28, 2024, 04:15 PM IST

ಸಾಯಿ ಪಲ್ಲವಿ ಹಾಗೂ ಶಿವಕಾರ್ತಿಕೇಯನ್ ಜೊತೆಯಾಗಿ ನಟಿಸಿರೋ 'ಅಮರನ್' ಸಿನಿಮಾ ಇದೇ ಆಕ್ಟೋಬರ್‌ 31ರಂದು ಬಿಡುಗಡೆಯಾಗಲಿದೆ.  ಇದು ಭಾರತೀಯ ಸೇನೆಯ ಡೇರಿಂಗ್‌ ಹೀರೋ ಮೇಜರ್ ಮುಕುಂದ್ ವರದರಾಜನ್ ಅವರ ಜೀವನ ಕಥೆ ಆಧರಿಸಿದೆ. ಅವರ ಹಿನ್ನೆಲೆ ಏನು ಇಲ್ಲಿದೆ ಡಿಟೇಲ್

PREV
15
ಅಮರನ್‌: ಭಾರತೀಯ ಸೇನೆಯ ಡೇರಿಂಗ್ ಹೀರೋ ಮೇಜರ್ ಮುಕುಂದ್ ತ್ಯಾಗದ ಕತೆ ಇದು

ಅಮರ ಅಂದ್ರೆ ಸಾವಿಲ್ಲದವನು. ಯಾರು ಆ ನಿಜವಾದ ಅಮರನ್ ಅಂತ ಈ ಲೇಖನದಲ್ಲಿ ನೋಡೋಣ. 2014ರ ಏಪ್ರಿಲ್ 25ರ ಸಂಜೆ 5 ಗಂಟೆಗೆ ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಉಗ್ರರು ಅಡಗಿ ಕೂತಿರೋದು ಸೇನೆಗೆ ತಿಳಿಯಿತು. ಜನ ವಾಸ ಮಾಡ್ತಿರೋ ಪ್ರದೇಶ ಆಗಿದ್ದರಿಂದ, ತುಂಬಾ ಎಚ್ಚರಿಕೆಯಿಂದ ಆಪರೇಷನ್ ಮಾಡಬೇಕಿತ್ತು. ಒಬ್ಬ ತಮಿಳುನಾಡಿನ ಮೇಜರ್ ನೇತೃತ್ವದಲ್ಲಿ 44 ಯೋಧರಿದ್ದ ರಾಷ್ಟ್ರೀಯ ರೈಫಲ್ಸ್ ಪಡೆ ಅಲ್ಲಿಗೆ ಹೋಯ್ತು.

ಭಾರತೀಯ ಸೇನೆ ತಮ್ಮ ಹತ್ತಿರ ಬರ್ತಿರೋದನ್ನ ತಿಳಿದ ಉಗ್ರರು ಗುಂಡು ಹಾರಿಸಲು ಶುರು ಮಾಡಿದ್ರು. ಆದ್ರೆ ಭಾರತೀಯ ಸೇನೆಯಿಂದ ಒಂದೂ ಗುಂಡು ಹೊರಬರಲಿಲ್ಲ. ಮೇಜರ್ ತುಂಬಾ ತಾಳ್ಮೆಯಿಂದ ಕಾಯ್ತಿದ್ರು. ಕತ್ತಲಾಗೋ ಮುಂಚೆ ಆಪರೇಷನ್ ಮುಗಿಸಬೇಕಿತ್ತು. ಇಲ್ಲಾಂದ್ರೆ ಉಗ್ರರು ತಪ್ಪಿಸಿಕೊಳ್ಳೋ ಸಾಧ್ಯತೆ ಇತ್ತು. ಹಾಗಾಗಿ ಮೇಜರ್ ತೆವಳಿಕೊಂಡು ಹೋಗಿ ಉಗ್ರರಿದ್ದ ಮನೆಯ ಹತ್ತಿರ ತಲುಪಿದ್ರು. ಮುಂದಿನ ಕ್ಷಣ, ಆದೇಶ ಬಂದ ಕೂಡ್ಲೇ ಉಗ್ರರ ಮೇಲೆ ಗುಂಡಿನ ಮಳೆ ಸುರಿಯಿತು. ಆ ಪ್ರದೇಶವೇ ಯುದ್ಧಭೂಮಿ ಆಗಿಹೋಯ್ತು.

25
ಪತ್ನಿ ಜೊತೆ ಮುಕುಂದ್ ವರದರಾಜನ್

ಮೇಜರ್ ಮುಕುಂದ್ ಗ್ರೆನೇಡ್ ಎಸೆದು ಮೊದಲ ಉಗ್ರನನ್ನ ಕೊಂದ್ರು. ಉಳಿದ ಇಬ್ಬರನ್ನ ಹಣಿಯಲು ಹೋಗುವಾಗ, ಮೇಜರ್ ಗೆಳೆಯ ವಿಕ್ರಮ್ ಸಿಂಗ್ ಗೆ ಗುಂಡು ತಗುಲಿ ಬಿದ್ದ. ಗೆಳೆಯನ ಸಾವು ನೋಡಿ ಆಕ್ರೋಶಗೊಂಡ ಮುಕುಂದ್ ಉಳಿದ ಉಗ್ರರನ್ನ ಹಣಿಯಲು ಮುಂದೆ ಸಾಗಿ ಇನ್ನೊಬ್ಬ ಉಗ್ರನನ್ನ ಕೊಂದ್ರು.

ಇನ್ನೂ ಒಬ್ಬ ಉಗ್ರ ಉಳಿದಿದ್ದ. ಸಂಜೆ 6 ಗಂಟೆ ಆಗ್ತಿತ್ತು. ಉಗ್ರನ ಗುಂಡಿನ ಶಬ್ದ ಬಂದ ಕಡೆಗೆ ಹೋದ ಮೇಜರ್, ಮುಂದಿನ ಕ್ಷಣ ಅವನ ತಲೆಗೆ ಗುರಿ ಇಟ್ಟು ಗುಂಡು ಹಾರಿಸಿದ್ರು. ಕೊನೆಯ ಉಗ್ರನೂ ಸತ್ತು ಹೋದ. ಆಪರೇಷನ್ ಯಶಸ್ವಿ ಆಯ್ತು. ಸಹ ಯೋಧರು ಮೇಜರ್ ಮುಕುಂದ್ ಸ್ವಾಗತಿಸಲು ಕಾಯ್ತಿದ್ರು. ಆದ್ರೆ ಮೇಜರ್ ಅಲ್ಲಿ ಬಂದು ಮಂಡಿ ಊರಿ ಕುಸಿದು ಬಿದ್ದರು.

 

35
ಚೊಚ್ಚಲ ಮಗು ಜೊತೆ ಮುಕುಂದ್ ವರದರಾಜನ್

ಉಗ್ರರ ಜೊತೆ ಹೋರಾಡುವ ವೇಳೆ ಮೇಜರ್ ಮುಕುಂದ್ ಅವರಿಗೆ ಮೂರು ಕಡೆ ಗುಂಡು ತಗುಲಿತ್ತು. ಕಾರ್ಯಾಚರಣೆ ಯಶಸ್ವಿಯಾದ ನಂತರ ಸಹ ಯೋಧರು ಅವರನ್ನ ಆಸ್ಪತ್ರೆಗೆ ಕರ್ಕೊಂಡು ಹೋದ್ರು. ಆದ್ರೆ ದಾರಿ ಮಧ್ಯದಲ್ಲೇ  ಮುಕುಂದ್ ಕೊನೆಯುಸಿರೆಳೆದರು. ದೇಶಕ್ಕಾಗಿ ಪ್ರಾಣ ಕೊಟ್ಟ ಈ ಯೋಧ ಯೋಧ ಮುಕುಂದ್ ವರದರಾಜನ್ ಮೂಲತಃ  ತಮಿಳುನಾಡಿನವರು. ಅವರ ಜೀವನ ಕಥೆಯನ್ನೇ ಈಗ 'ಅಮರನ್' ಹೆಸರಿನಲ್ಲಿ ಸಿನಿಮಾ ಮಾಡಲಾಗಿದೆ.

1983ರ ಏಪ್ರಿಲ್ 12ರಂದು ಕೇರಳದ ಕೋಝಿಕ್ಕೋಡ್‌ನಲ್ಲಿ ವರದರಾಜನ್ ಮತ್ತು ಗೀತಾ ದಂಪತಿ ಮಗನಾಗಿ ಜನಿಸಿದ ಮುಕುಂದ್. ಕೇರಳದಲ್ಲಿ ಹುಟ್ಟಿದ್ರೂ, ಶಾಲಾ-ಕಾಲೇಜು ಶಿಕ್ಷಣ ಪಡೆದಿದ್ದು ಚೆನ್ನೈನಲ್ಲಿ. 2006ರಲ್ಲಿ ಸೇನೆಗೆ ಲೆಫ್ಟಿನೆಂಟ್ ಆಗಿ ಸೇರಿದ ಮುಕುಂದ್, 2008ರಲ್ಲಿ ಕ್ಯಾಪ್ಟನ್ ಆದ್ರು. 2009ರಲ್ಲಿ ಗೆಳತಿ ಇಂದು ರೆಬೆಕ್ಕಾ ವರ್ಗೀಸ್‌ರನ್ನ ಮದುವೆ ಆದ್ರು.

45
ವೀರ ಮೇಜರ್ ಮುಕುಂದ್ ವರದರಾಜನ್

2011ರಲ್ಲಿ ಮುಕುಂದ್ ದಂಪತಿಗೆ ಅಶ್ರಿಯಾ ಎಂಬ ಮಗಳು ಹುಟ್ಟಿದಳು. 2012ರಲ್ಲಿ ಜಮ್ಮು ಕಾಶ್ಮೀರದ ಶೋಪಿಯಾನ್‌ಗೆ ಮೇಜರ್ ಆಗಿ ನೇಮಕ ಆದ ಮುಕುಂದ. ಅಲ್ಲಿ ಒಂದು ಮುಖ್ಯವಾದ ಆಪರೇಷನ್ ಯಶಸ್ವಿಗೊಳಿಸಿದ್ರು.

12013ರ ರ ಜೂನ್ 5ರಂದು ಕಾಶ್ಮೀರದ ಯಾಂಚ್ ಪುಕರ್ ನಲ್ಲಿ ಅಡಗಿದ್ದ ಉಗ್ರರನ್ನ ಮೇಜರ್ ಮುಕುಂದ್ ನೇತೃತ್ವದ 44 ಯೋಧರ ತಂಡ ಸುತ್ತುವರೆದಿತ್ತು. ಉಗ್ರರು ಗುಂಡು ಹಾರಿಸಿದ್ರೂ, ಅವರ ಗುಂಡು ಮುಗಿಯುವವರೆಗೂ ಕಾಯ್ದ ಮುಕುಂದ್, ನಂತರ ತಮ್ಮ ತಂಡದ ಜೊತೆ ಹೋಗಿ ಉಗ್ರರನ್ನ ಹಣಿದ್ರು. ಆಪರೇಷನ್ ಯಶಸ್ವಿ ಆಯ್ತು. ಮೇಜರ್ ಮುಕುಂದ್ ಅವರ ಚಾಣಾಕ್ಷತನದಿಂದ ಆಪರೇಷನ್ ಗೆಲುವು ಕಂಡಿತು.

55
'ಅಮರನ್' ಸಿನಿಮಾ

ಬುದ್ಧಿವಂತ ಮುಕುಂದ್

ಈ ದಾಳಿಯಲ್ಲಿ ಮೇಜರ್ ಮುಕುಂದ್ ಕೆಲವು ಮುಖ್ಯ ವಸ್ತುಗಳನ್ನ ವಶಪಡಿಸಿಕೊಂಡಿದ್ರು. ಅದರಿಂದ ಶೋಪಿಯಾನ್ ಜಿಲ್ಲೆಯಲ್ಲಿ ಉಗ್ರರು ಅಡಗಿ ಕೂತಿರೋದು ತಿಳಿದು ಬಂತು. ಮುಂದಿನ ವರ್ಷ ನಡೆದ ದಾಳಿಯಲ್ಲಿ ಮೇಜರ್ ಮುಕುಂದ್ ವೀರಮರಣ ಹೊಂದಿದ್ರು.

ಮೇಜರ್ ಮುಕುಂದ್ ಅವರ ಪಾರ್ಥಿವ ಶರೀರವನ್ನ ಚೆನ್ನೈಗೆ ತಂದು, ಪೂರ್ಣ ಸೇನಾ ಗೌರವಗಳೊಂದಿಗೆ ಅಂತ್ಯಕ್ರಿಯೆ ಮಾಡಲಾಯಿತು. ಅವರಿಗೆ ಮರಣೋತ್ತರ ಅಶೋಕ ಚಕ್ರ ಪ್ರಶಸ್ತಿ ನೀಡಲಾಯಿತು. 2015ರ ಗಣರಾಜ್ಯೋತ್ಸವದಂದು ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ಮೇಜರ್ ಮುಕುಂದ್ ಪತ್ನಿ ಇಂದು ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದ್ರು.

ಮೇಜರ್ ಮುಕುಂದ್ ವರದರಾಜನ್ ಜೀವನ ಆಧರಿಸಿ 'ಅಮರನ್' ಸಿನಿಮಾ ಮಾಡಿದ್ದಾರೆ. ಶಿವಕಾರ್ತಿಕೇಯನ್ ಮುಕುಂದ್ ಪಾತ್ರದಲ್ಲಿ, ಸಾಯಿ ಪಲ್ಲವಿ ಇಂದು ಪಾತ್ರದಲ್ಲಿ ನಟಿಸಿದ್ದಾರೆ. ಕಮಲ್ ಹಾಸನ್ ನಿರ್ಮಾಣದ ಈ ಚಿತ್ರಕ್ಕೆ ರಾಜ್ ಕುಮಾರ್ ಪೆರಿಯಸಾಮಿ ನಿರ್ದೇಶನ, ಜಿ.ವಿ.ಪ್ರಕಾಶ್ ಕುಮಾರ್ ಸಂಗೀತ ನೀಡಿದ್ದಾರೆ. ಅಕ್ಟೋಬರ್ 31ರಂದು ದೀಪಾವಳಿ ಹಬ್ಬಕ್ಕೆ ಸಿನಿಮಾ ಬಿಡುಗಡೆ ಆಗ್ತಿದೆ.

 

Read more Photos on
click me!

Recommended Stories