ಆಯೇಷಾ ಟಾಕಿಯಾ ಮಾಜಿ ನಟಿ, ಅವರು ಟಾರ್ಜಾನ್: ದಿ ವಂಡರ್ ಕಾರ್ ಮೂಲಕ ಚಲನಚಿತ್ರಕ್ಕೆ ಪಾದಾರ್ಪಣೆ ಮಾಡಿದರು, ಇದಕ್ಕಾಗಿ ಅವರು 2004 ರಲ್ಲಿ ಫಿಲ್ಮ್‌ಫೇರ್ ಅತ್ಯುತ್ತಮ ಚೊಚ್ಚಲ ಪ್ರಶಸ್ತಿ ಗೆದ್ದರು.
ಆಯೇಷಾ 2009 ರಲ್ಲಿ ವಾಂಟೆಡ್ ಚಿತ್ರದಲ್ಲಿ ಸಲ್ಮಾನ್ ಖಾನ್ ಜೊತೆ ಕೆಲಸ ಮಾಡಿದ್ದರು. ಈ ಚಿತ್ರ ಸೂಪರ್ ಹಿಟ್ ಎಂದು ಸಾಬೀತಾಯಿತು. ಆ ಸಮಯದಲ್ಲಿ ಅದು 93 ಕೋಟಿ ರೂ. ಗಳಿಸಿತ್ತು.
ಇದಕ್ಕೂ ಮೊದಲು, 2006ರಲ್ಲಿ,ಅಯೇಷಾ ಟಾಕಿಯಾ ಅವರು ಪ್ರಸಿದ್ಧ ಚಲನಚಿತ್ರ ಡೋರ್‌ನ ಭಾಗವಾಗಿದ್ದರು. ಈ ಚಿತ್ರದಲ್ಲಿನ ಅದ್ಭುತ ಅಭಿನಯದ ಮೂಲಕ ಅವರು ಎಲ್ಲರ ಗಮನ ಸೆಳೆದರು.
ಆಯೇಷಾ ಬಾಲಿವುಡ್‌ನ ಅತ್ಯಂತ ಸುಂದರ ನಟಿಯರಲ್ಲಿ ಒಬ್ಬರಾಗಿದ್ದರು. ವೃತ್ತಿಜೀವನದ (Career) ಉತ್ತುಂಗದಲ್ಲಿದ್ದಾಗ, ಅವರು ಮದುವೆಯಾಗಿ ಸಿನಿಮಾಕ್ಕೆ ವಿದಾಯ ಹೇಳಿ ಮನೆಯಲ್ಲಿ ನೆಲೆಸಿದರು.
ಆಯೇಷಾ 2009 ರಲ್ಲಿ ರಾಜಕೀಯ ಉದ್ಯಮಿ ಅಬು ಅಜ್ಮಿ ಅವರ ಮಗ ಫರ್ಹಾನ್ ಅಜ್ಮಿ ಅವರನ್ನು ವಿವಾಹವಾದರು. ಅದೇ ವರ್ಷದಲ್ಲಿ ಅವರ ವಾಂಟೆಡ್ ಚಿತ್ರವೂ ಬಿಡುಗಡೆಯಾಯಿತು. ಆಗ ಅವರ ವಯಸ್ಸು ಕೇವಲ 23 ವರ್ಷ.
ಆಯೇಷಾ ಮತ್ತು ಫರ್ಹಾನ್ 2005 ರಲ್ಲಿ ಭೇಟಿಯಾದರು. ಇಬ್ಬರೂ ಸುಮಾರು 4 ವರ್ಷಗಳ ಕಾಲ ಸಂಬಂಧದಲ್ಲಿದ್ದರು, ನಂತರ 2009 ರಲ್ಲಿ ವಿವಾಹವಾದರು .
ಫರ್ಹಾನ್ ಅಜ್ಮಿಯನ್ನು ಮದುವೆಯಾದ ನಂತರ, ಆಯೇಶಾ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡರು ಮತ್ತು ಅಜ್ಮಿಯನ್ನು ತನ್ನ ಹೆಸರಿಗೆ ಸೇರಿಸಿ ಕೊಂಡರು.