ನೆಟ್‌ಫ್ಲಿಕ್ಸ್
ಫಾಲ್ ಫಾರ್ ಮಿ (ಆಗಸ್ಟ್ 21) : ಲಿಲ್ಲಿ ತನ್ನ ತಂಗಿಯ ಮುಂದಿನ ಗಂಡನ ಮೇಲೆ ಸಂಶಯ ಪಡುತ್ತಾಳೆ. ಆಗ ಅವಳ ಜೀವನಕ್ಕೆ ಹೊಸ ವ್ಯಕ್ತಿ ಬರುತ್ತಾನೆ. ನಂತರ ಏನಾಗುತ್ತದೆ ಎಂಬುದೇ ಕಥೆ. ಸ್ವೆಂಜಾ ಜಂಗ್, ಥಿಯೋ ಟ್ರೆಪ್ಸ್ ನಟಿಸಿರುವ ಈ ಚಿತ್ರದಲ್ಲಿ ಹೆಚ್ಚಿನ ಪ್ರಮಾಣ ಪ್ರಣಯ ದೃಶ್ಯಗಳಿರುವುದರಿಂದ ಒಬ್ಬಂಟಿಯಾಗಿ ನೋಡಿದ್ರೆ ಒಳ್ಳೆಯದು.
ವೆಲ್ಕಮ್ ಟು ಸಡನ್ ಡೆತ್ (ಆಗಸ್ಟ್ 21) : ಮೈಕೆಲ್ ಜೈ ವೈಟ್ ನಟಿಸಿರುವ ಆಕ್ಷನ್ ಸಿನಿಮಾ ಆಗಸ್ಟ್ 21 ರಂದು ಬಿಡುಗಡೆಯಾಗುತ್ತಿದೆ.
ಅಬಾಂಡಂಟ್ ಮ್ಯಾನ್ (ಆಗಸ್ಟ್ 22) : ತನ್ನ ಅಣ್ಣ ಮಾಡಿದ ತಪ್ಪಿಗೆ ಜೈಲಿಗೆ ಹೋದ ವ್ಯಕ್ತಿಯ ಕಥೆ.
ಮಾರೀಸನ್ (ಆಗಸ್ಟ್ 22) : ವೇಲು, ಫಹಾದ್ ಫಾಸಿಲ್ ನಟಿಸಿರುವ ಹಾಸ್ಯಮಯ ಥ್ರಿಲ್ಲರ್ ಸಿನಿಮಾ.
ಹಾಸ್ಟೇಜ್ (ಆಗಸ್ಟ್ 21) : ಬ್ರಿಟನ್ ಪ್ರಧಾನ ಮಂತ್ರಿಯ ಪತಿ ಅಪಹರಣಕ್ಕೊಳಗಾಗುತ್ತಾನೆ. ಫ್ರಾನ್ಸ್ ಅಧ್ಯಕ್ಷರಿಗೆ ಬೆದರಿಕೆ ಬರುತ್ತದೆ. ಇದರಿಂದ ಇಬ್ಬರೂ ಯಾವ ರೀತಿಯ ಪರಿಸ್ಥಿತಿಯನ್ನು ಎದುರಿಸುತ್ತಾರೆ ಎಂಬುದೇ ಈ ಸರಣಿಯ ಕಥೆ.
ಜೀ 5
ಅಮರ್ ಪಾಸ್ (ಆಗಸ್ಟ್ 22) : ರಾಕಿ ಗುಲ್ಜಾರ್, ಸಿಬೋ ಪ್ರಸಾದ್ ಮುಖರ್ಜಿ ನಟಿಸಿರುವ ಕೌಟುಂಬಿಕ ಸಿನಿಮಾ ಮೇ ತಿಂಗಳಲ್ಲಿ ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಿತ್ತು. ಈಗ OTT ಯಲ್ಲಿ ಬಿಡುಗಡೆಯಾಗುತ್ತಿದೆ.
ಶೋಧ್ (ಆಗಸ್ಟ್ 22) : ಕಾಣೆಯಾದ ಹೆಂಡತಿಯನ್ನು ಹುಡುಕುವ ಗಂಡನ ಕಥೆ. ಈಗಾಗಲೇ ಸೋಶಿಯಲ್ ಮೀಡಯಾದಲ್ಲಿ ಸಂಚಲನವನ್ನು ಸೃಷ್ಟಿಸಿದೆ.