`ಆ ನಲುಗುರು` ಸಿನಿಮಾದಲ್ಲಿ ನಟಕಿರೀಟಿ ರಾಜೇಂದ್ರ ಪ್ರಸಾದ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಚಂದ್ರ ಸಿದ್ಧಾರ್ಥ್ ನಿರ್ದೇಶನ ಮಾಡಿದ್ದಾರೆ. ರಾಜೇಂದ್ರ ಪ್ರಸಾದ್ ಜೊತೆ ಆಮನಿ, ಕೋಟ ಶ್ರೀನಿವಾಸ ರಾವ್, ರಾಜಾ, ಶುಭಲೇಖ ಸುಧಾಕರ್ ಮುಂತಾದವರು ನಟಿಸಿದ್ದಾರೆ. 2004 ರಲ್ಲಿ ಬಿಡುಗಡೆಯಾದ ಈ ಚಿತ್ರ ಮೂರು ನಂದಿ ಪ್ರಶಸ್ತಿಗಳನ್ನು ಗೆದ್ದಿದೆ. ಅತ್ಯುತ್ತಮ ನಟ ಪ್ರಶಸ್ತಿ ರಾಜೇಂದ್ರ ಪ್ರಸಾದ್‌ಗೆ ಸಿಕ್ಕಿದೆ. ಕೋಟ ಶ್ರೀನಿವಾಸ ರಾವ್‌ಗೆ ಅತ್ಯುತ್ತಮ ಸಹಾಯಕ ನಟ ಪ್ರಶಸ್ತಿ ಸಿಕ್ಕಿದೆ. ಈ ಚಿತ್ರ ನಟಕಿರೀಟಿಯ ಟಾಪ್ ಸಿನಿಮಾಗಳಲ್ಲಿ ಒಂದು.