ಅಥಿಯಾ ಶೆಟ್ಟಿ ಅವರ ಮತ್ತು ಕೆ.ಎಲ್. ರಾಹುಲ್ ಫೋಟೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡು "Happy birthday,my person"ಎಂದು ವಿಶ್ ಜೊತೆಯಲ್ಲಿ ಹಾರ್ಟ್ ಎಮೋಜಿಯನ್ನು ಸಹ ಹಾಕಿದ್ದರು. ಕೆ.ಎಲ್ ರಾಹುಲ್ ಕೂಡ ಈ ಪೋಸ್ಟ್‌ಗೆ ಹಾರ್ಟ್ ಎಮೋಜಿ ಮೂಲಕ ಪ್ರತಿಕ್ರಿಯಿಸಿದ್ದಾರೆ.
undefined
'ಇದು ನಿಜವಾಗಿಯೂ ನಿಮ್ಮಿಬ್ಬರ ಸುಂದರವಾದ ಫೋಟೋ. ಜನ್ಮದಿನದ ಶುಭಾಶಯಗಳು ಕೆ.ಎಲ್.ರಾಹುಲ್.' ಎಂದು ವಿ.ಜೆ ಮತ್ತು ನಟಿ ಸೋಫಿ ಚೌಧರಿ ಕೂಡ ಈ ಫೋಟೋಗೆ ಕಾಮೆಂಟ್ ಮಾಡಿದ್ದಾರೆ.
undefined
ಅಂದಹಾಗೆ, ಅಥಿಯಾ ರಾಹುಲ್ ಅವರ ಫೋಟೋ ಹಂಚಿಕೊಂಡಿರುವುದು ಇದೇ ಮೊದಲಲ್ಲ. ಆದರೆ ಈ ಬಾರಿ ಪೋಟೋಗೆ ನೀಡಿರುವ ಕ್ಯಾಪ್ಷನ್ ಸ್ಪೆಷಲ್.
undefined
ಇದಕ್ಕೂ ಮುನ್ನ ಕೆ.ಎಲ್.ರಾಹುಲ್ ಸ್ವತಃ ಅಥಿಯಾ ಅವರೊಂದಿಗೆ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಇಬ್ಬರೂ ಇನ್ನೂ ಸಂಬಂಧವನ್ನು ಅಧಿಕೃತವಾಗಿ ಒಪ್ಪಿಕೊಂಡಿಲ್ಲವಾದರೂ, ಅಥಿಯಾ ಅವರ ಪೋಸ್ಟ್ ಮತ್ತು ರಾಹುಲ್ ಕಾಮೆಂಟ್ ಸಾಕ್ಷಿಯಾಗಿದೆ.
undefined
2020ರ ಹೊಸ ವರ್ಷವನ್ನು ಥಾಯ್ಲೆಂಡ್‌ನಲ್ಲಿ ಆಚರಿಸಿದ್ದರು ರಾಹುಲ್-ಅಥಿಯಾ. ಅಂದಿನಿಂದ ಅವರ ಸಂಬಂಧ ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಲೇ ಇದೆ.
undefined
'ಈಗ ಸಮಯ ಬದಲಾಗಿದೆ. ಮಕ್ಕಳ ಆಯ್ಕೆ ನನಗೆ ತಿಳಿದಿದೆ' ಎಂದು ಸಂದರ್ಶನವೊಂದರಲ್ಲಿ ಮಗಳ ಸಂಬಂಧದ ಬಗ್ಗೆ ಸುನಿಲ್ ಶೆಟ್ಟಿಯನ್ನು ಕೇಳಿದಾಗ ಉತ್ತರಿಸುವ ಮೂಲಕ ಮಗಳ ಲವ್ ಲೈಫ್ ಬಗ್ಗೆ ಹಿಂಟ್ ನೀಡಿದ್ದರು.
undefined
ಅಥಿಯಾ ಅವರ ಕುಟುಂಬಕ್ಕೂರಾಹುಲ್ ಫೇವರೇಟ್. ತಂದೆ ಸುನಿಲ್ ಶೆಟ್ಟಿ, ತಾಯಿ ಮಾನಾ ಮತ್ತು ಸಹೋದರ ಅಹಾನ್ ರಾಹುಲ್ ಅವರನ್ನು ತುಂಬಾ ಇಷ್ಟಪಡುತ್ತಾರೆ ಹಾಗೂ ಈ ಕ್ರಿಕೆಟಿಗನನ್ನು ಸಪೋರ್ಟ್ ಮಾಡುತ್ತಾರೆ.
undefined
1992ರ ನವೆಂಬರ್ 5 ರಂದು ಮುಂಬೈಯಲ್ಲಿ ಜನಿಸಿದ ಅಥಿಯಾ 2015 ರ ಚಲನಚಿತ್ರ 'ಹೀರೋ' ಮೂಲಕ ಚಿತ್ರಕ್ಕೆ ಪಾದಾರ್ಪಣೆ ಮಾಡಿದರು.ಬಾಲ್ಯದಿಂದಲೂ ನಟಿಯಾಗಬೇಕೆಂಬ ಕನಸು ಕಂಡಿದ್ದ ಅಥಿಯಾ, ಮೂರು ವರ್ಷದವಳಿದ್ದಾಗ ಕನ್ನಡಿಯ ಮುಂದೆ ನಟಿಸಿ ನೃತ್ಯ ಮಾಡುತ್ತಿದ್ದಳಂತೆ. ಶಾಲೆಯ ನಂತರ ರಂಗಭೂಮಿಗೆ ಸೇರಿದಳು.
undefined
ಬಿ-ಟೌನಲ್ಲಿ ಆಥಿಯಾಗೆ 'Attu Pattu'ಎಂಬ ನಿಕ್ ನೇಮ್ ಇದದೆ.
undefined
ಎಪ್ರಿಲ್ 18,1992ರಲ್ಲಿ ಹುಟ್ಟಿದ ಟೀಮ್ ಇಂಡಿಯಾದ ಸ್ಟಾರ್ ಆಟಗಾರ ರಾಹುಲ್ ಮೂಲ ಮಂಗಳೂರು.
undefined