ಸಲ್ಮಾನ್‌ಖಾನ್‌ ಪನ್ವೆಲ್ ಫಾರ್ಮ್‌ಹೌಸ್‌ ಜಿಮ್‌ನಲ್ಲಿ ಕಾಳಿಂಗ ಸರ್ಪ

First Published | Apr 21, 2020, 12:49 PM IST

ಮುಂಬೈನ ಅತ್ಯಂತ ದುಬಾರಿ ಆಸ್ತಿಗಳಲ್ಲಿ ಒಂದಾದ ಸೂಪರ್‌ಸ್ಟಾರ್‌ ಸಲ್ಮಾನ್ ಖಾನ್ ಅವರ ಪನ್ವೆಲ್ ಫಾರ್ಮ್ ಹೌಸ್ ಐಷಾರಾಮಿುಗೆ ಮತ್ತೊಂದು ಹೆಸರು. 150 ಎಕರೆ ಪ್ರದೇಶದಲ್ಲಿ ಹರಡಿರುವ  ಹಚ್ಚ ಹಸಿರಿನ ತೋಟದಮನೆ ಕಾಡಿಗೆ ಅಂಟಿಕೊಂಡಿದೆ. ಫ್ಯಾಮಿಲಿ ಜೊತೆ ಕಾಲ ಕಳೆಯಲು ಹೋದ ಸಲ್ಲು ಬಾಯಿ ಲಾಕ್‌ಡೌನ್‌ನಿಂದಾಗಿ ಅಲ್ಲೇ ಸಿಲುಕಿಕೊಂಡಿದ್ದಾರೆ. ಸಲ್ಮಾನ್ ಅವರ ಸಹೋದರಿ ಅರ್ಪಿತಾ, ಗಂಡ ಆಯುಷ್ ಶರ್ಮಾ ಮತ್ತು ಮಕ್ಕಳು ಸಹ ಜೊತೆ ಇದ್ದಾರೆ. ಕಾಲಕಾಲಕ್ಕೆ  ಇನ್ಸ್ಟಾಗ್ರಾಮ್‌ನಲ್ಲಿ ವೀಡಿಯೊಗಳು ಮತ್ತು ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ತಮ್ಮ ಅಭಿಮಾನಿಗಳಿಗೆ ಅಪ್‌ಡೇಟ್‌ ಮಾಡುತ್ತಿರುತ್ತಾರೆ. ಇತ್ತೀಚೆಗೆ ಸಲ್ಮಾನ್ ಅವರ ತೋಟದ ಮನೆಯಿಂದ ಶಾಕಿಂಗ್‌ ಸುದ್ದಿಯೊಂದು ಹೊರ ಬಿದ್ದಿದೆ.

ಮುಂಬೈನ ಅತ್ಯಂತ ದುಬಾರಿ ಆಸ್ತಿಗಳಲ್ಲಿ ಒಂದಾದ ಸೂಪರ್‌ಸ್ಟಾರ್‌ ಸಲ್ಮಾನ್ ಖಾನ್ ಅವರ ಪನ್ವೆಲ್ ಫಾರ್ಮ್ ಹೌಸ್ ಐಷಾರಾಮಿುಗೆ ಮತ್ತೊಂದು ಹೆಸರು.
ಸಲ್ಮಾನ್‌ನ ಪನ್ವೆಲ್ ಫಾರ್ಮ್‌ಹೌಸ್‌ನಲ್ಲಿ ನಿರ್ಮಿಸಲಾದ ಜಿಮ್‌ನಲ್ಲಿ ಕಿಂಗ್ ಕೋಬ್ರಾ ಪತ್ತೆಯಾಗಿದೆ. ಚಿರತೆಯು ತೋಟದ ಮನೆಯ ಸುತ್ತಲೂ ಕಂಡುಬಂದಿದೆ. ಈ ತೋಟದ ಮನೆ ಕಾಡಿನ ಮಧ್ಯದಲ್ಲಿದ್ದು,ಕಾಡು ಪ್ರಾಣಿಗಳು ಇಲ್ಲಿ ಸುತ್ತಾಡುತ್ತವೆ.
Tap to resize

ಕಿಂಗ್ ಕೋಬ್ರಾ ಇತ್ತೀಚೆಗೆ ಸಲ್ಮಾನ್ ಭಾಯ್ ಅವರ ಜಿಮ್‌ನಲ್ಲಿ ಕಾಣಿಸಿಕೊಂಡಿದೆ ಎಂದು ಅರ್ಪಿತಾ ಖಾನ್ ಅವರ ಪತಿ ಆಯುಷ್ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ. ತೋಟದ ಸುತ್ತಲೂ ಚಿರತೆಯೂ ಕಾಣಿಸಿಕೊಂಡಿತು. ಹಾಗೂ ಅನೇಕ ಕಾಡು ಪ್ರಾಣಿಗಳು ಸಹ ಇಲ್ಲಿಗೆ ಬರುತ್ತವೆ ಎಂದು ಹೇಳಿ ಕೊಂಡಿದ್ದಾರೆ
ನಾವು ಸಫಾರಿಯಲ್ಲಿ ಉಳಿದುಕೊಂಡಿದ್ದೇವೆ ಎಂದು ಅನಿಸುತ್ತಿದ್ದೆ. ನಾವು ಕೇವಲ ವಿಕೆಂಡ್‌ಗಾಗಿ ಬಂದವರು ಆದರೆ ಈಗ ಸುಮಾರು ಒಂದು ತಿಂಗಳು ಆಗಲಿದೆ, ನಾವು ಇಲ್ಲೇ ಇದ್ದೇವೆ ಎಂದು ಆಯುಷ್‌ ಹೇಳಿದ್ದಾರೆ.
ಇಲ್ಲಿ ತಮ್ಮ ಮಕ್ಕಳೊಂದಿಗೆ ಸಮಯ ಕಳೆಯುತ್ತಿರುವುದಾಗಿ ಹಾಗೂ ಮಗ ಅಹಿಲ್‌ ಜೊತೆ ಹಣ್ಣು, ತರಕಾರಿಗಳನ್ನು ಕೀಳುತ್ತಾ ಇಡೀ ಕುಟುಂಬ ಒಟ್ಟಿಗೆ ಸಂತೋಷವಾಗಿ ಇದ್ದೇವೆ ಎಂದಿದ್ದಾರೆ ಅರ್ಪಿತಾಳ ಪತಿ ಆಯುಷ್.‌
ಮಕ್ಕಳು ಇರುವುದರಿಂದ ಹೀಗೆ ಕಿಂಗ್‌ ಕೋಬ್ರಾ ಮತ್ತು ಕಾಡು ಪ್ರಾಣಿಗಳು ಕಾಣಿಸಿಕೊಳ್ಳುವುದು ಸಲ್ಮಾನ್‌ರ ಚಿಂತೆಗೆ ಕಾರಣವಾಗಿದೆ ಅಂತೆ.
ಕೆಲವು ದಿನಗಳ ಹಿಂದೆ ಸಲ್ಮಾನ್ ತನ್ನ ಕುದುರೆಯೊಂದಿಗೆ ಆಹಾರ ನೀಡುವ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಈ ವೀಡಿಯೊದಲ್ಲಿ ಸಲ್ಮಾನ್ ತನ್ನ ಕುದುರೆಗೆ ಎಲೆಗಳನ್ನು ನೀಡುತ್ತಿದ್ದರು.ಅವರು ಸಹ ಎಲೆಗಳನ್ನು ತಿನ್ನುತ್ತಿದ್ದರು.
ತಂದೆ ಸಲೀಮ್ ಖಾನ್, ತಾಯಿ ಸಲ್ಮಾ ಖಾನ್ ಮತ್ತು ಹೆಲೆನ್ ಅವರೊಂದಿಗೆ ಸಲ್ಮಾನ್ ಖಾನ್.
ಒಂದು ತಿಂಗಳಿನಿಂದ ತನ್ನ ಹೆತ್ತವರನ್ನು ಭೇಟಿ ಮಾಡಿಲ್ಲ. ವೀಡಿಯೊವನ್ನು ಹಂಚಿಕೊಳ್ಳುವ ಮೂಲಕ ಪೋಷಕರ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು ಸೂಪರ್‌ ಸ್ಟಾರ್‌.
ಅನೇಕ ವೀಡಿಯೊಗಳು ಮತ್ತು ಫೋಟೋಗಳ ಮೂಲಕ ಮನೆಯಲ್ಲಿರಲು ಜನರಿಗೆ ಸಲಹೆ ನೀಡುತ್ತಲೇ ಇರುತ್ತಾರೆ ಸಲ್ಲು ಭಾಯ್‌. ಹಾಗೇ ಸೋಶಿಯಲ್‌ ಮಿಡೀಯಾ ಮೂಲಕ ಆಗುಹೋಗುಗಳಿಗೆಪ್ರತಿಕ್ರಿಯೆಯನ್ನು ನೀಡುತ್ತಾ ಫಾರ್ಮ್‌ ಹೌಸ್‌ನಿಂದಲೇ ಹೊರ ಜಗತ್ತಿನೊಂದಿಗೆ ಕನೆಕ್ಟ್‌ ಆಗಿದ್ದಾರೆ ಬಾಲಿವುಡ್‌ ಸ್ಟಾರ್.

Latest Videos

click me!