ಆಲಿಯಾರ ನಿವ್ವಳ ಮೌಲ್ಯ ಸುಮಾರು 72 ಕೋಟಿ ರೂ.
ಆಲಿಯಾ ಪ್ರತಿ ಚಲನಚಿತ್ರಕ್ಕೆ 4-5 ಕೋಟಿ ರೂ. ಮತ್ತು ಪ್ರತಿ ಬ್ರಾಂಡ್ ಅನುಮೋದನೆಗೆ ಸುಮಾರು 1 ಕೋಟಿ ರೂ ಹಾಗೂ ಈವೆಂಟ್‌ಗೆ 20 ರಿಂದ 30 ಲಕ್ಷ ರೂ ಚಾರ್ಜ್ ಮಾಡುತ್ತಾರೆ.
ಬ್ರಾಂಡೆಡ್ ಬ್ಯಾಗ್‌ಗಳು:ಶನೆಲ್‌ನಿಂದ ಲೂಯಿ ವಿಟಾನ್‌ನಿಂದ ಗುಸ್ಸಿವರೆಗೆ ಪ್ರಾಡಾವರೆಗೆ, ಈ ನಟಿ ದುಬಾರಿ ಹ್ಯಾಂಡ್ ಬ್ಯಾಗ್‌ಗಳ ಅದ್ಭುತ ಕಲೆಕ್ಷನ್ ಹೊಂದಿದ್ದಾರೆ. ಆಲಿಯಾ ಅನೇಕ ಈವೆಂಟ್, ಪಾರ್ಟಿಗಳಲ್ಲಿ ಮತ್ತು ವಿಶೇಷವಾಗಿ ಏರ್‌ಪೋರ್ಟ್‌ನಲ್ಲಿ ದುಬಾರಿ ಹ್ಯಾಂಡ್‌ಬ್ಯಾಗ್‌ಗಳನ್ನು ಹಿಡಿದಿರುವುದು ಕಂಡುಬರುತ್ತದೆ.
ಬಾಲೆನ್ಸಿಯಾಗಾ ಮತ್ತು ಸೇಂಟ್ ಲಾರೆಂಟ್‌ನಂತಹ ಬ್ರಾಂಡ್‌ಬ್ಯಾಗ್‌ಗಳ ಬೆಲೆ 1.5 ಲಕ್ಷ ರೂ.ಗಿಂತ ಹೆಚ್ಚಿದೆ.
ಕಾರುಗಳು:ಗಲ್ಲಿ ಬಾಯ್ ಸ್ಟಾರ್ ಹೊಸ ಆಡಿ ಕ್ಯೂ 7, ಆಡಿ ಕ್ಯೂ 5, ಆಡಿ ಎ 6, ಬಿಎಂಡಬ್ಲ್ಯು 7 ಸಿರಿಸ್‌ನ ಲ್ಯಾಂಡ್ ರೋವರ್ ರೇಂಜ್ ರೋವರ್ ಅನ್ನು ಹೊಂದಿದ್ದಾರೆ. ರೇಂಜ್ ರೋವರ್ ವೋಗ್ ಬೆಲೆ 1.88 ಕೋಟಿ ರೂ ಮತ್ತು ಬಿಎಂಡಬ್ಲ್ಯು 7 ಸಿರಿಸ್ ಬೆಲೆ 1.37 ಕೋಟಿ.
ಲಂಡನ್‌ನಲ್ಲಿ ಮನೆ:28ನೇ ವಯಸ್ಸಿನಲ್ಲಿ, ಆಲಿಯಾ ಭಟ್ಲಂಡನ್‌ನಲ್ಲಿ ಮನೆ ಹೊಂದಿದ್ದಾರೆ. ಎಟಿಮ್ಸ್ ಪನಾಚೆ ಜೊತೆ ಸಂದರ್ಶನದಲ್ಲಿ, ನಟಿ ತಾನು ಯಾವಾಗಲೂ ಲಂಡನ್‌ನಲ್ಲಿ ಜಾಗ ಪಡೆಯಲು ಬಯಸಿದ್ದೆ ಎಂದು ಒಪ್ಪಿಕೊಂಡಿದ್ದಾರೆ.
2018ರಲ್ಲಿ ಲಂಡನ್‌ನ ಕೋವೆಂಟ್ ಗಾರ್ಡನ್‌ನಲ್ಲಿ ಸುಂದರವಾದ ಮನೆಯನ್ನು ಖರೀದಿಸಿ, ಆಕೆ ತನ್ನ ಆಸೆಯನ್ನು ಈಡೇರಿಸಿಕೊಂಡಿದ್ದಾರೆ. ಆ ಪ್ರದೇಶದ ಆಸ್ತಿಗಳ ಆರಂಭಿಕ ಬೆಲೆ 16 ಕೋಟಿ ರೂ.
ಮುಂಬೈನಲ್ಲಿಸ್ಟೈಲಿಶ್ ಅಪಾರ್ಟ್ಮೆಂಟ್:ನಟಿ ಮುಂಬೈನ ಜುಹುನಲ್ಲಿ 2,300 ಚದರ ಅಡಿಗಳ ಐಷಾರಾಮಿ ಅಪಾರ್ಟ್ಮೆಂಟ್ ಹೊಂದಿದ್ದಾರೆ. ಇದರ ಬೆಲೆ 13.11 ಕೋಟಿ ರೂ. ಅವರ ಬಾಯ್ ಫ್ರೆಂಡ್ ರಣಬೀರ್ ಕಪೂರ್ ಸಹ ಅದೇ ಕಾಂಪ್ಲೆಕ್ಸ್‌ನಲ್ಲಿ 32 ಕೋಟಿ ಬೆಲೆಯ ಅಪಾರ್ಟ್ಮೆಂಟ್ ಹೊಂದಿದ್ದಾರೆ ಎಂದು ಪಿಂಕ್ವಿಲ್ಲಾ ವರದಿ ಹೇಳುತ್ತದೆ.
ಲಕ್ಷುರಿಯಸ್ ವ್ಯಾನಿಟಿ ವ್ಯಾನ್:ಆಲಿಯಾರ ವ್ಯಾನಿಟಿ ವ್ಯಾನ್ ಅನ್ನು ದೇಶದ ಅತ್ಯಂತ ದುಬಾರಿ ಒಳಾಂಗಣ ವಿನ್ಯಾಸಗಾರರಲ್ಲಿ ಒಬ್ಬರಾದ ಶಾರುಖ್ ಖಾನ್ ಪತ್ನಿ ಗೌರಿ ಖಾನ್ ಡಿಸೈನ್ ಮಾಡಿದ್ದಾರೆ.
ಆಲಿಯಾರ ಲವ್, ನಟ ರಣಬೀರ್ ಬಾಲಿವುಡ್‌ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರಲ್ಲಿ ಒಬ್ಬರು. ಸಿಎಕೆನೋಲೆಡ್ಜ್.ಕಾಮ್ ಪ್ರಕಾರ, ರಣಬೀರ್ ಅವರ ನಿವ್ವಳ ಮೌಲ್ಯ ಅಂದಾಜು 322 ಕೋಟಿ ರೂ.ಆಲಿಯಾ ಮತ್ತು ರಣಬೀರ್ ಕಳೆದ ಕೆಲವು ವರ್ಷಗಳಿಂದ ಪ್ರೀತಿಸುತ್ತಿದ್ದು ಶೀಘ್ರದಲ್ಲೇ ವಿವಾಹವಾಗಲಿದ್ದಾರೆ.