ಬಿಜೆಪಿಯಿಂದಾಗಿ 24 ಗಂಟೆಗಳಲ್ಲಿ ತನಗೆ ಮತ್ತು ತನ್ನ ಕುಟುಂಬಕ್ಕೆ ನಿಂದನೆ, ಅತ್ಯಾಚಾರ ಮತ್ತು ಕೊಲೆ ಬೆದರಿಕೆಯ 500 ಕ್ಕೂ ಹೆಚ್ಚು ಕರೆಗಳು ಬಂದಿದೆ ಎಂದು ನಟ ಸಿದ್ಧಾರ್ಥ್ ಟ್ವೀಟ್ ಮಾಡಿದ್ದಾರೆ.
ಬಿಜೆಪಿ ಐಟಿ ಸೆಲ್ ಮತ್ತು ಬಿಜೆಪಿ ತಮಿಳುನಾಡಿನ ಸದಸ್ಯರು ತನ್ನ ಫೋನ್ ನಂಬರ್ ಲೀಕ್ ಮಾಡಿದ್ದಾರೆ ಎಂದು ನಟ ತಮ್ಮ ಟ್ವೀಟ್ ನಲ್ಲಿ ತಿಳಿಸಿದ್ದಾರೆ.
ಬೆದರಿಕೆ ಒಡ್ಡಿದವರು ಬಿಜೆಪಿ ಬೆಂಬಲಿಗರೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂಬುದಕ್ಕೆ ಸಾಕ್ಷಿಯಾಗಿ ಎಲ್ಲಾ ನಂಬರ್ ದಾಖಲಿಸಿಕೊಂಡಿದ್ದು ವಾಟ್ಸಾಪ್ ಡಿಪಿ ಸ್ಕ್ರೀನ್‌ಶಾಟ್‌ಗಳನ್ನು ಸಹ ನಟ ಹೊಂದಿರುವುದಾಗಿ ಹೇಳಿದ್ದಾರೆ. ಇವುಗಳನ್ನು ಗ್ರೇಟರ್ ಚೆನ್ನೈ ಪೊಲೀಸರಿಗೆ ಹಸ್ತಾಂತರಿಸಲಾಗಿದೆ.
ಮುಂದಿನ ಟ್ವೀಟ್‌ನಲ್ಲಿ, ಗೀತಾ ವಸಂತ್ ಎಂಬ ಬಳಕೆದಾರರಿಂದ ಬಂದ ಫೇಸ್‌ಬುಕ್ ಕಾಮೆಂಟ್‌ಗಳ ಸ್ಕ್ರೀನ್‌ಶಾಟ್ ಅನ್ನು ಸಿದ್ಧಾರ್ಥ್ ಸೇರಿಸಿದ್ದಾರೆ.
ಇದರಲ್ಲಿ ನಟನ ವಿರುದ್ಧ ಕಮೆಂಟ್ ಬಾಕ್ಸ್‌ನಲ್ಲಿ ಚರ್ಚಿಸುವುದನ್ನು ಕಾಣಬಹುದಾಗಿದೆ.
ಈ ಸ್ಕ್ರೀನ್‌ಶಾಟ್ ಅನ್ನು ಪೋಸ್ಟ್ ಮಾಡಿದ ನಟ, “ಬಿಜೆಪಿ ತಮಿಳುನಾಡು ಸದಸ್ಯರು ನಿನ್ನೆ ನನ್ನ ಸಂಖ್ಯೆಯನ್ನು ಲೀಕ್ ಮಾಡಿದ್ದಾರೆ. ನನ್ನ ಮೇಲೆ ಹಲ್ಲೆ ಮತ್ತು ಕಿರುಕುಳ ನೀಡುವಂತೆ ಹೇಳುವ ಅನೇಕ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳಲ್ಲಿ ಇದು ಒಂದು ಎಂದಿದ್ದಾರೆ ಸಿದ್ಧಾರ್ಥ್.
ನಾವು ಕೊರೋನಾದಿಂದ ಬಚಾವಾಗ್ಬೋದು, ಆದ್ರೆ ಇಂತವರಿಂದ ಬಚಾವಾಗೋದು ಯಾವಾಗ ? ಎಂದು ಪ್ರಶ್ನಿಸಿದ್ದಾರೆ ನಟ
42 ವರ್ಷದ ನಟ ಮೋದಿ ಸರ್ಕಾರದ ವಿಮರ್ಶಾತ್ಮಕ ಟ್ವೀಟ್ ಮಾಡುತ್ತಿರುತ್ತಾರೆ.
ಇತ್ತೀಚೆಗೆ ಸಾಂಕ್ರಾಮಿಕ ರೋಗದ ಎರಡನೇ ಅಲೆಯನ್ನು ಸರ್ಕಾರ ನಿರ್ವಹಿಸುತ್ತಿರುವ ರೀತಿಯನ್ನೂ ಟೀಕಿಸಿದ್ದಾರೆ.
ಬಿಜೆಪಿ ಅಧಿಕಾರಕ್ಕೆ ಬಂದರೆ ಪಶ್ಚಿಮ ಬಂಗಾಳದ ಎಲ್ಲರಿಗೂ ಉಚಿತ ಲಸಿಕೆ ನೀಡುವ ಭರವಸೆ ನೀಡಿದ್ದಕ್ಕಾಗಿ ಮೋದಿ ಅವರನ್ನು ಟೀಕಿಸಿದ ಅವರ ಒಂದು ಟ್ವೀಟ್ ಕೂಡ ವೈರಲ್ ಆಗಿದೆ.