ವಿವಾದಗಳಿಂದಲೇ ಫೇಮಸ್ ಆಗಿರೋ ಜ್ಯೋತಿಷಿ ವೇಣು ಸ್ವಾಮಿ. ಸೆಲೆಬ್ರಿಟಿಗಳ ಜಾತಕದ ಬಗ್ಗೆ ಭವಿಷ್ಯ ನುಡಿದು ಸುದ್ದಿ ಮಾಡೋದೇ ಇವರ ಸ್ಟೈಲ್. ಇದರಿಂದ ಸಾಕಷ್ಟು ನೆಗೆಟಿವಿಟಿಯನ್ನೂ ಎದುರಿಸಿದ್ದಾರೆ. ಟ್ರೋಲ್ ಆದ್ರೂ ನಾನು ಹೇಳಿದ್ದೆಲ್ಲಾ ನಿಜ ಅಂತ ವಾದಿಸೋರು.
ಆದ್ರೆ ಇತ್ತೀಚೆಗೆ ವೇಣು ಸ್ವಾಮಿ ಹೇಳಿದ ಭವಿಷ್ಯಗಳೆಲ್ಲಾ ತಪ್ಪಾಗಿವೆ. ಚುನಾವಣಾ ಫಲಿತಾಂಶ, ಕಲ್ಕಿ ಸಿನಿಮಾ ರಿಸಲ್ಟ್... ಹೀಗೆ ಹಲವು ವಿಷಯಗಳಲ್ಲಿ ವೇಣು ಸ್ವಾಮಿ ಭವಿಷ್ಯ ತಪ್ಪಾಗಿದೆ ಎಂದದು ಕ್ಷಮೆಯನ್ನೂ ಕೇಳಿದ್ರು. ಜೊತೆಗೆ ಸೆಲೆಬ್ರಿಟಿಗಳ ಜಾತಕ ನೋಡಲ್ಲ ಅಂದ್ರು.
ಆದ್ರೆ ನಾಗ ಚೈತನ್ಯ-ಶೋಭಿತ ನಿಶ್ಚಿತಾರ್ಥದ ಬಗ್ಗೆ ಮಾತಾಡಿದ್ರು. ಇಬ್ಬರ ಜಾತಕಗಳು ಹೊಂದಾಣಿಕೆ ಆಗಲ್ಲ, 2027ರಲ್ಲಿ ಬೇರ್ಪಡುತ್ತಾರೆ ಅಂತ ಹೇಳಿದ್ರು. ಇದನ್ನ ಜನ ಜೀರ್ಣಿಸಿಕೊಳ್ಳಲಿಲ್ಲ. ಮಹಿಳಾ ಸಂಘಟನೆಗಳು ವೇಣು ಸ್ವಾಮಿ ವಿರುದ್ಧ ದೂರು ನೀಡಿದವು.
ಸೆಲೆಬ್ರಿಟಿಗಳು ಕೇಳದೇ ಇದ್ರೂ ಜಾತಕ ನೋಡಿ ನೆಗೆಟಿವ್ ಕಾಮೆಂಟ್ಸ್ ಮಾಡಿ ಮಾನಸಿಕ ಹಿಂಸೆ ನೀಡ್ತಿದ್ದಾರೆ ಅಂತ ದೂರು ನೀಡಿದ್ರು. ಇದರ ವಿರುದ್ಧ ವೇಣು ಸ್ವಾಮಿ ಹೈಕೋರ್ಟ್ ಮೊರೆ ಹೋಗಿ ತಡೆಯಾಜ್ಞೆ ತಂದಿದ್ರು.
ಆದ್ರೆ ಈಗ ಹೈಕೋರ್ಟ್ ತಡೆಯಾಜ್ಞೆ ತೆಗೆದು ಹಾಕಿದೆ. ವೇಣು ಸ್ವಾಮಿಯನ್ನ ವಿಚಾರಿಸಲು ಮಹಿಳಾ ಆಯೋಗಕ್ಕೆ ಅಧಿಕಾರ ಇದೆ ಅಂತ ಹೇಳಿದೆ. ಒಂದು ವಾರದಲ್ಲಿ ಆಯೋಗ ಕ್ರಮ ತೆಗೆದುಕೊಳ್ಳಬಹುದು. ನಾಗ ಚೈತನ್ಯ-ಶೋಭಿತಾ ಜಾತಕ ಈಗ ವೇಣು ಸ್ವಾಮಿಗೆ ಸಂಕಷ್ಟ ತಂದಿದೆ.