ಆಶಿಶ್ ವಿದ್ಯಾರ್ಥಿ 60 ನೇ ವಯಸ್ಸಿನಲ್ಲಿ ವಿವಾಹವಾದರು. ಆಶಿಶ್ ವಿದ್ಯಾರ್ಥಿ 60 ನೇ ವಯಸ್ಸಿನಲ್ಲಿ ರೂಪಾಲಿ ಬರುವಾ ಅವರನ್ನು ವಿವಾಹವಾದರು. ಆಶಿಶ್ ವಿದ್ಯಾರ್ಥಿಯ ಮೊದಲ ಪತ್ನಿ ರಾಜೋಶಿ ಬರುವಾ ಮತ್ತು ಅವರಿಗೆ ಅರ್ಥ ವಿದ್ಯಾರ್ಥಿ ಎಂಬ ಮಗನೂ ಇದ್ದಾನೆ.
2016 ರಲ್ಲಿ ನಟ ಕಬೀರ್ ಬೇಡಿ ತಮ್ಮ 70 ನೇ ವಯಸ್ಸಿನಲ್ಲಿ ಪರ್ವೀನ್ ದುಸಾಂಜ್ ಅವರನ್ನು ವಿವಾಹವಾದರು, ಈ ಮೊದಲು ಕಬೀರ್ ಬೇಡಿ ಮೂರು ಬಾರಿ ವಿವಾಹವಾದರು. ಪ್ರೋತಿಮಾ ಬೇಡಿ, ಸುಸಾನ್ ಹಂಫ್ರೀಸ್ ಮತ್ತು ನಿಕ್ಕಿ ಬೇಡಿ ಅವರ ಪತ್ನಿಯರು.
ಬಾಲಿವುಡ್ ಖ್ಯಾತ ನಟಿ ನೀನಾ ಗುಪ್ತಾ ತಮ್ಮ 50 ನೇ ವಯಸ್ಸಿನಲ್ಲಿ 2008 ರಲ್ಲಿ ವಿವೇಕ್ ಮೆಹ್ರಾ ಅವರನ್ನು ವಿವಾಹವಾದರು. ಇದಕ್ಕೂ ಮೊದಲು ಅವರು ವೆಸ್ಟ್ ಇಂಡೀಸ್ ಕ್ರಿಕೆಟಿಗ ವಿವಿಯನ್ ರಿಚರ್ಡ್ಸನ್ ಅವರೊಂದಿಗೆ ಸಂಬಂಧವನ್ನು ಹೊಂದಿದ್ದರು ಮತ್ತು ಈ ದಂಪತಿಗೆ ಮಗಳು ಕೂಡ ಇದ್ದಾರೆ.
ಈ ವರ್ಷ ತೆಲುಗು ನಟ ನರೇಶ್ ಬಾಬು ಪವಿತ್ರ ಲೋಕೇಶ್ ಅವರನ್ನು ಮದುವೆಯಾಗಿದ್ದಾರೆ. 60 ವರ್ಷದ ನರೇಶ್ ಬಾಬುಗೆ ಇದು 4ನೇ ಮದುವೆ. ಖ್ಯಾತ ಸಿನಿಮಾಟೋಗ್ರಾಫರ್ ಶ್ರೀನು ಅವರ ಮಗಳು ನರೇಶ್ ಅವರ ಮೊದಲ ಪತ್ನಿ. ರೇಖಾ ಸುಪ್ರಿಯಾ ಮತ್ತು ರಮ್ಯಾ ರಘುಪತಿ ಅವರ ಮೂರನೇ ಮತ್ತು ನಾಲ್ಕನೇ ಪತ್ನಿಯರು
ಖ್ಯಾತ ಕಿರುತೆರೆ ನಟಿ ಸುಹಾಸಿನಿ ಮುಳೆ ಅವರು 2011 ರಲ್ಲಿ ಅತುಲ್ ಗುರ್ತು ಅವರನ್ನು ವಿವಾಹವಾದರು, ಆಗ ಅವರ ವಯಸ್ಸು 60 ವರ್ಷ.
ಸಮೀನಾ ಅಹ್ಮದ್ ಪಾಕಿಸ್ತಾನಿ ಚಲನಚಿತ್ರ ಮತ್ತು ದೂರದರ್ಶನ ನಟಿ, ರಂಗ ಪ್ರದರ್ಶಕಿ, ನಿರ್ಮಾಪಕಿ ಮತ್ತು ನಿರ್ದೇಶಕಿ. ಇವರು 2020 ರಲ್ಲಿ ಎರಡನೇ ಬಾರಿಗೆ ವಿವಾಹವಾದರು ಆಗ ಆಕೆಗೆ 70 ವರ್ಷ. ಇದಕ್ಕೂ ಮೊದಲು 1993 ರಲ್ಲಿ ಅವರು ಚಲನಚಿತ್ರ ನಿರ್ಮಾಪಕ ಫರಿದುದ್ದೀನ್ ಅಹ್ಮದ್ ಅವರನ್ನು ವಿವಾಹವಾದರು.