ಆಶಿಶ್ ವಿದ್ಯಾರ್ಥಿ-ರೂಪಾಲಿ ಬರುವಾ ಮದುವೆ Exclusive ಫೋಟೋಸ್‌

First Published | May 26, 2023, 6:30 PM IST

ಹಿರಿಯ ನಟ ಆಶಿಶ್ ವಿದ್ಯಾರ್ಥಿ (Ashish Vidyarthi)ಗುರುವಾರ ಎರಡನೇ ಬಾರಿಗೆ ವಿವಾಹವಾದರು. ವಿವಿಧ ಸುದ್ದಿ ವರದಿಗಳ ಪ್ರಕಾರ, ಅವರು ಕೋಲ್ಕತ್ತಾ ಕ್ಲಬ್‌ನಲ್ಲಿ ರೂಪಾಲಿ ಬರುವಾ (Rupali Barua) ಅವರೊಂದಿಗೆ ಖಾಸಗಿ ರಿಜಿಸ್ಟ್ರಿ ವಿವಾಹವನ್ನು ಹೊಂದಿದ್ದರು.  ಅವರ ಮದುವೆಯ ಚಿತ್ರಗಳು ಇದೀಗ ಹೊರಬಂದಿವೆ.

ನಟ ಆಶಿಶ್ ವಿದ್ಯಾರ್ಥಿ ತಮ್ಮ ಪತ್ನಿ ರೂಪಾಲಿ ಬರುವಾ ಅವರೊಂದಿಗೆ ಈ ಆತ್ಮೀಯ ಸಮಾರಂಭದಲ್ಲಿ ಮುಂಡು ಸಾಂಪ್ರದಾಯಿಕ ಉಡುಪಿನಲ್ಲಿ ಹ್ಯಾಂಡಸಮ್‌ ಆಗಿ ಕಾಣಿಸಿಕೊಂಡಿದ್ದಾರೆ.
 

ಅವರ ವಿವಾಹವು ಖಾಸಗಿ ಮತ್ತು  ಕುಟುಂಬದವರಿಗೆ ಮಾತ್ರ ಸೀಮಿತವಾಗಿತ್ತು. ಈಗ   ಆಶಿಶ್ ವಿದ್ಯಾರ್ಥಿ ಮತ್ತು ರೂಪಾಲಿ ಬರುವಾ ಅವರ ಮದುವೆಯ ಫೋಟೋಗಳು ಹೊರಬಿದ್ದಿವೆ.

Tap to resize

ಆಶಿಶ್ ವಿದ್ಯಾರ್ಥಿ ಮತ್ತು ರೂಪಾಲಿ ಬರುವಾ ಕೆಲ ಸಮಯದ ಹಿಂದೆ ಕೋಲ್ಕತ್ತಾದಲ್ಲಿ ಭೇಟಿಯಾಗಿದ್ದರು ಮತ್ತು   ಅಲ್ಲಿಂದ ಶುರುವಾಯಿತು ಇವರಿಬ್ಬರ ಮಧುರ ಪ್ರೇಮಕಥೆ ಎಂದು ವರದಿಯಾಗಿದೆ. 
 

ತಮ್ಮ ಕುಟುಂಬದೊಂದಿಗೆ ಕೋಲ್ಕತ್ತಾದಲ್ಲಿ  ಸಣ್ಣ ವಿವಾಹ ಸಮಾರಂಭದಲ್ಲಿ ಮದುವೆಯಾದ ಈ ದಂಪತಿಗಳು  ತಮ್ಮ ಜೀವನದ ಈ ಹೊಸ ಹಂತವನ್ನು ಪ್ರಾರಂಭಿಸಲು ಉತ್ಸುಕರಾಗಿದ್ದಾರೆ.

ಫ್ಯಾಷನ್ ಉದ್ಯಮಿ ರೂಪಾಲಿ ಬರುವಾ ವಧುವಿನ ಲುಕ್‌ನಲ್ಲಿ ಸಖತ್‌ ಸುಂದರವಾಗಿ ಕಾಣುತ್ತಿದ್ದರು. ಅವರು ಅಸ್ಸಾಂನಿಂದ ಬಿಳಿ ಮತ್ತು ಗೋಲ್ಡನ್ ಮೆಖೇಲಾ ಚಾದರ್ ಧರಿಸಿದ್ದರು. 

ರೂಪಾಲಿ ಬರುವಾ ದಕ್ಷಿಣ ಭಾರತದ ದೇವಾಲಯದ ಕಲೆಯಿಂದ ಪ್ರೇರಿತವಾದ  ಚಿನ್ನದ ಆಭರಣಗಳೊಂದಿಗೆ ತನ್ನ ನೋಟವನ್ನು ಪೂರ್ಣಗೊಳಿಸಿದ್ದರು. ಆಶಿಶ್ ವಿದ್ಯಾರ್ಥಿ ಅವರ ಕೊರಳಿಗೆ  ಚಿನ್ನದ ಆಭರಣವನ್ನು ಹಾಕುತ್ತಿರುವುದು ಕಾಣಬಹುದು

ಆಶಿಶ್ ಮತ್ತು ರೂಪಾಲಿ ಅವರು ತಮ್ಮ ಮದುವೆ ಕ್ಷಣವನ್ನು ಎಂಜಾಯ್‌ ಮಾಡುತ್ತಿರುವುದು ಮದುವೆಯ  ಫೋಟೋಗಳನ್ನು  ನೋಡಿದರೆ ತಿಳಿಯುತ್ತದೆ. ಅವರ ಮುಖದಲ್ಲಿ ಸಂತೋಷ ಕಾಣುತ್ತಿದೆ.

ಈ  ವಿವಾಹದಲ್ಲಿ ತಮ್ಮ ಕುಟುಂಬಗಳು ಮತ್ತು ಹತ್ತಿರದ ಸ್ನೇಹಿತರು ಮಾತ್ರ  ಉಪಸ್ಥಿತಿರಿದ್ದರು.  ನವವಿವಾಹಿತ ಜೋಡಿ ಆಶಿಶ್ ವಿದ್ಯಾರ್ಥಿ ಮತ್ತು ರೂಪಾಲಿ ಬರುವಾ ಫೋಟೋದಲ್ಲಿ ನೃತ್ಯ ಮಾಡುತ್ತಿರುವುದು ಕಾಣಬಹುದು.

Latest Videos

click me!