Drugs Case: ಕಸಬ್, ಚೊಟಾ ರಾಜನ್ ಇದ್ದ ಜೈಲಿನಲ್ಲಿ ಆರ್ಯನ್ ಖಾನ್

First Published | Oct 10, 2021, 10:15 AM IST
  • ಸಂಜಯ್ ದತ್, ಅಜ್ಮಲ್ ಕಸಬ್ ಉಳಿದುಕೊಂಡಿದ್ದ ಜೈಲಲ್ಲಿ ಆರ್ಯನ್ ಖಾನ್
  • ಆರ್ಯನ್‌ನನ್ನು ಬೇರೆ ಕಡೆ ಶಿಫ್ಟ್ ಮಾಡಲಿದ್ದಾರಾ ಅಧಿಕಾರಿಗಳು ?

ಶಾರೂಖ್ ಖಾನ್ ಅವರ ಪುತ್ರ ಆರ್ಯನ್ ಖಾನ್‌ಗೆ ಜಾಮೀನು ನಿರಾಕರಿಸಲಾಗಿದೆ. ಮುಂಬೈ ಕ್ರೂಸ್ ಶಿಪ್ ರೇವ್ ಪಾರ್ಟಿ ಮೇಲೆ ನಡೆದ ಎನ್‌ಸಿಬಿ ದಾಳಿಯಲ್ಲಿ ಅರೆಸ್ಟ್ ಆದ ಬಾಲಿವುಡ್ ಸ್ಟಾರ್ ನಟನ ಮಗ ಜೈಲಿನಲ್ಲಿ ದಿನ ಕಳೆಯಬೇಕಾಗಿದೆ.

ಶುಕ್ರವಾರ ವಿಚಾರಣೆ ನಡೆಸಿದ ನ್ಯಾಯಾಲಯ ಆರ್ಯನ್, ಅರ್ಬಾಝ್, ಮುನ್‌ಮುನ್ ಅವರ ಜಾಮೀನು ಅರ್ಜಿ ನಿರಾಕರಿಸಿದೆ. ಮುಂಬೈನಿಂದ ಗೋವಾಗೆ ಪ್ರಯಾಣಿಸುತ್ತಿದ್ದ ಐಷರಾಮಿ ಹಡಗಿನಲ್ಲಿ ಡ್ರಗ್ಸ್ ಪಾರ್ಟಿ ಮಾಡಿದ ಆರೋಪ ಇವರ ಮೇಲಿದೆ.

Tap to resize

ಆರ್ಯನ್ ಹಾಗೂ ಇತರ ಆರೋಪಿಗಳನ್ನು ಮುಂಬೈನಲ್ಲಿರುವ ಆರ್ಥುರ್ ರೋಡ್‌ ಜೈಲಿನಲ್ಲಿ(Arthur Road Jail) ಇಡಲಾಗುತ್ತದೆ ಎನ್ನಲಾಗಿದೆ. ಆರ್ಯನ್‌ಗೆ ವಿಶೇಷ ಸೌಲಭ್ಯಗಳು ದೊರೆಯುವುದಿಲ್ಲ. ವಿಚಾರಣಾಧೀನ ಇತರ ಖೈದಿಗಳಂತೆಯೇ ಆರ್ಯನ್‌ ಸೇರಿ ಉಳಿದವರನ್ನೂ ನೋಡಿಕೊಳ್ಳಲಾಗುತ್ತದೆ ಎನ್ನಲಾಗಿದೆ.

ಆರ್ಥುರ್ ರೋಡ್ ಜೈಲ್ ಎಂದು ಕರೆಯಲ್ಪಡುವ ಮುಂಬೈನ ಕೇಂದ್ರ ಕಾರಾಗೃಹ(Mumbai Central Prison) 1926ರಲ್ಲಿ ಕಟ್ಟಲಾಗಿದ್ದು ಇದು ಮುಂಬೈನ ಅತ್ಯಂತ ದೊಡ್ಡ ಹಾಗೂ ಹಳೆಯ ಜೈಲು. 2 ಎಕರೆ ಪ್ರದೇಶದಲ್ಲಿ ವ್ಯಾಪಿಸಿರುವ ಜೈಲನ್ನು 1972ರಲ್ಲಿ ಕೇಂದ್ರ ಕಾರಾಗೃಹ ಎಂದು ಘೋಷಿಸಲಾಗಿದೆ.

800 ಜನ ಖೈದಿಗಳಿಗಾಗಿ ಈ ಜೈಲನ್ನು ಕಟ್ಟಲಾಗಿತ್ತು. ಆದರೆ ಈಗ ಜೈಲಿನಲ್ಲಿ ದಟ್ಟಣೆ ಹೆಚ್ಚಾಗಿದೆ ಎನ್ನಲಾಗಿದೆ. 2021ರಲ್ಲಿ 8 ಹೊಸ ಬ್ಯಾರಕ್ಸ್ ನಿರ್ಮಿಸಲಾಗಿದ್ದು ಈ ಮೂಲಕ ಮತ್ತೆ 200 ಜನ ಕೈದಿಗಳಿಗೆ ಸ್ಥಳಾವಕಾಶವಿದೆ.

ಜೈಲು ಕಳೆದ ಕೆಲವು ವರ್ಷದಲ್ಲಿ ಕೆಲವು ಗಮನಾರ್ಹ ಕೈದಿಗಳನ್ನು ಕಂಡಿದೆ. ದೇಶದಲ್ಲಿ ಸುದ್ದಿಯಾದ ಪ್ರಮುಖ ಹೆಸರುಗಳು, ವಿವಾದಾತ್ಮಕ ಘಟನೆಗಳ ಆರೋಪಿಗಳು ಈ ಜೈಲಿನಲ್ಲಿ ಕಳೆದಿರುವುದು ವಿಶೇಷ

ಸಂಜಯ್ ದತ್: 1993 ರ ಬಾಂಬ್ ಸ್ಫೋಟದಲ್ಲಿ ಕೈವಾಡವಿದೆ ಎಂದು ಜೈಲು ಸೇರಿದ್ದರು ಸಂಜಯ್ ದತ್. ಅವರನ್ನು ಅಬು ಜುಂದಾಲ್‌ನ್ನು ಇರಿಸಲಾಗಿರುವ ಆಂಡಾ ಸೆಲ್‌ ಬಳಿ ಇರುವ ಉನ್ನತ ಭದ್ರತೆಯ ಸೆಲ್‌ನಲ್ಲಿ ಇರಿಸಲಾಗಿತ್ತು.

‘ಸಂಜು’ಗೆ ಎದುರಾಯ್ತು ಭೂಗತ ಪಾತಕಿಯಿಂದ ಕಂಟಕ

ಅಜ್ಮಲ್ ಕಸಬ್: ಮುಂಬೈ ಮೇಲೆ 26/11 ದಾಳಿಯ ಸಂದರ್ಭದಲ್ಲಿ ಜೀವಂತವಾಗಿ ಸಿಕ್ಕಿಬಿದ್ದ ಪಾಕಿಸ್ತಾನದ ಏಕೈಕ ಭಯೋತ್ಪಾದಕ ಆತ. ನವೆಂಬರ್ 2012 ರಲ್ಲಿ, ಕಸಬ್ ನನ್ನು ಪುಣೆಯ ಯರವಾಡ ಜೈಲಿನಲ್ಲಿ ಗಲ್ಲಿಗೇರಿಸಲಾಯಿತು.

ಎಲಾ ಕಳ್ಳರೇ..ದುರುಳರು ಅಂದುಕೊಂಡಂತಾಗಿದ್ದರೆ ಕಸಬ್ ಹಿಂದೂವಾಗಿ ಸಾಯುತ್ತಿದ!

ಛೋಟಾ ರಾಜನ್: ಆತ ತಾತ್ಕಾಲಿಕವಾಗಿ ಆರ್ಥರ್ ರೋಡ್ ಜೈಲಿನಲ್ಲಿ ಇದ್ದ, ಆತ ಪ್ರಸ್ತುತ ತಿಹಾರ್ ಜೈಲಿನಲ್ಲಿದ್ದು ಆತನ 7 ಪ್ರಕರಣಗಳ ವಿಚಾರಣೆ ನಡೆಯಬೇಕಿದೆ.

Fact Check| ಭೂಗತ ಪಾತಕಿ ಚೋಟಾ ರಾಜನ್‌ನೊಂದಿಗೆ ನರೇಂದ್ರ ಮೋದಿ!

ಅಬು ಸಲೇಂ: ಆತ 1993 ರ ಬಾಂಬ್ ಸ್ಫೋಟ ಪ್ರಕರಣದ ಅಪರಾಧಿ. ಆರ್ಥರ್ ರೋಡ್ ಜೈಲಿನಲ್ಲಿ ದರೋಡೆಕೋರ ಮುಸ್ತಫಾ ದೋಸಾ ಅವರ ಮೇಲೆ ದಾಳಿ ಮಾಡಿದ ನಂತರ ಆತನನ್ನು ತಲೋಜಾ ಜೈಲಿಗೆ ಸ್ಥಳಾಂತರಿಸಲಾಯಿತು.

ಮುಸ್ತಫಾ ದೋಸಾ: ಆತ 1993 ರ ಬಾಂಬ್ ಸ್ಫೋಟ ಪ್ರಕರಣದ ಅಪರಾಧಿ ಕೂಡ ಹೌದು. ಆತ 2017 ರಲ್ಲಿ ಹೃದಯಾಘಾತದಿಂದಾಗಿ ಮುಂಬೈನ ಜೆಜೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ.

Latest Videos

click me!