ಡಿವೋರ್ಸ್‌ಗಿಂತಲೂ ನೋವು ಕೊಡ್ತಿದೆ ವೈಯಕ್ತಿಕ ವಾಗ್ದಾಳಿ: ಸಮಂತಾ

Published : Oct 10, 2021, 09:16 AM ISTUpdated : Oct 10, 2021, 10:51 AM IST

ಸಮಂತಾಗೆ ಬೆಂಬಲ ವ್ಯಕ್ತಪಡಿಸಿದ ರಾಕುಲ್ ಪ್ರೀತ್ ಸಿಂಗ್ ವಿಚ್ಚೇದನೆ ಅನ್ನೋದೆ ಕಷ್ಟ, ಅದಕ್ಕಿಂತ ಕಷ್ಟ ಈ ರೀತಿಯ ವಾಗ್ದಾಳಿ

PREV
17
ಡಿವೋರ್ಸ್‌ಗಿಂತಲೂ ನೋವು ಕೊಡ್ತಿದೆ ವೈಯಕ್ತಿಕ ವಾಗ್ದಾಳಿ: ಸಮಂತಾ

ನಟಿ ಸಮಂತಾ ರುಥ್ ಪ್ರಭುಗೆ ಆಕೆಯ ಸಹ ನಟಿ ರಾಕುಲ್ ಪ್ರೀತ್ ಸಿಂಗ್ ಅವರು ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ. ನಾಗ ಚೈತನ್ಯದಿಂದ ಬೇರ್ಪಟ್ಟ ನಂತರ ಸುಳ್ಳು ವದಂತಿಗಳು ಹರಡುತ್ತಿದ್ದು ಈ ಬಗ್ಗೆ ಸಮಂತಾ ಪರ ನಿಂತಿದ್ದಾರೆ ಬಾಲಿವುಡ್(Bollywood) ಬೆಡಗಿ.

27

ನಾಗ ಚೈತನ್ಯ ಜೊತೆ ವಿಚ್ಚೇದನೆ ನಂತರ ತಾವು ಪಡೆದ ಬೆಂಬಲವನ್ನು ಶ್ಲಾಘಿಸುತ್ತಾ, ತನ್ನ ಪ್ರತ್ಯೇಕತೆಯ ಹಿಂದಿನ ಕಾರಣಗಳ ಬಗ್ಗೆ ದೃಢೀಕರಿಸದ, ಆಧಾರ ರಹಿತ ಊಹಾಪೋಹಗಳನ್ನು ಹರಡುತ್ತಿರುವವರ ವಿರುದ್ಧವೂ ಅವರು ವಾಗ್ದಾಳಿ ನಡೆಸಿದ್ದಾರೆ ಸಮಂತಾ(Samantha).

37

ತನ್ನ ಟ್ವಿಟರ್ ಮತ್ತು ಇನ್‌ಸ್ಟಾಗ್ರಾಮ್ ಖಾತೆಗಳಲ್ಲಿ ಪೋಸ್ಟ್ ಮಾಡಿದ ಹೇಳಿಕೆಯಲ್ಲಿ ಸಮಂತಾ, ವಿಚ್ಚೇದನೆ ಅತ್ಯಂತ ನೋವಿನ ಪ್ರಕ್ರಿಯೆ. ಆದರೆ ಬೇಕು ಬೇಕೆಂದೇ ನಡೆಯುತ್ತಿರುವ ವೈಯಕ್ತಿಕ ದಾಳಿಗಳು ವಿಚ್ಚೇದನೆಯನ್ನು ಇನ್ನೂ ಕಷ್ಟವಾಗಿಸಿದೆ ಎಂದಿದ್ದಾರೆ.

47

ಸಮಂತಾ ಹೇಳಿಕೆಗೆ ರಾಕುಲ್ ಮತ್ತು ವಸ್ತ್ರ ವಿನ್ಯಾಸಕಿ ನೀರಜಾ ಕೋನ ಅವರ ಬೆಂಬಲ ಸಿಕ್ಕಿತು. ಸಮಂತಾ ಹೇಳಿಕೆಯ ಮೇಲೆ ರಾಕುಲ್ ಕೆಂಪು ಹೃದಯದ ಎಮೋಜಿಯನ್ನು ಕೈಬಿಟ್ಟರೆ, ನೀರಜಾ ಲವ್ ಯು ಪಾಪಾ ಎಂದು ಅಪ್ಪುಗೆಯೊಂದಿಗೆ ಮತ್ತು ಹೃದಯದ ಎಮೋಜಿಯೊಂದಿಗೆ ಕಮೆಂಟ್ ಮಾಡಿದ್ದಾರೆ.

57

ಸಮಂತಾ ಅವರ ಅಭಿಮಾನಿಗಳು ಮತ್ತು ಹಿತೈಷಿಗಳು ಸಹ ನಟಿಗೆ ಸಾಮಾಜಿಕ ಮಾಧ್ಯಮದಲ್ಲಿ ಪ್ರೀತಿ ಮತ್ತು ಬೆಂಬಲ ನೀಡುವ ಮೂಲಕ ತಮ್ಮ ಬೆಂಬಲವನ್ನು ನೀಡಿದ್ದಾರೆ.

67

ಸಾರ್ವಜನಿಕ ವ್ಯಕ್ತಿತ್ವದ ನಿಮ್ಮ ಪ್ರಯಾಣದ ಮೂಲಕ ನೀವು ಅನೇಕ ರೀತಿಯಲ್ಲಿ ಧೈರ್ಯವನ್ನು ತೋರಿಸಿದ್ದೀರಿ. ಈ ಪರಿಸ್ಥಿತಿಯನ್ನು ಎದುರಿಸಲು ಆ ಧೈರ್ಯವು ನಿಮಗೆ ಸಹಾಯ ಮಾಡುತ್ತದೆ ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ.

77

ನೀವು ಇರುವುದಕ್ಕಿಂತ ಬಲಶಾಲಿಯಾಗಿ ಮತ್ತು ಹೆಚ್ಚು ಸ್ಟ್ರಾಂಗ್ ಆಗಿ ಹೊರಬರುತ್ತೀರಿ. ಈ ಸಮಯದಲ್ಲಿ ನಿಮಗೆ ಎಲ್ಲವೂ ಶುಭವಾಗಲಿ ಎಂದು ಹಾರೈಸುತ್ತೇನೆ ಎಂದಿದ್ದಾರೆ. ಇನ್ನೊಬ್ಬರು ನೀವು ಕ್ವೀನ್ ಆಗಿದ್ದೀರಿ ಇನ್ನೂ ಕ್ವೀನ್(queen) ಆಗಿರುತ್ತೀರಿ ಎಂದಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories