ಶಾರುಖ್ ಮಗಳು ಸುಹಾನಾಗೆ ಮನೆಗೆ ಬರುವ ಕಾತುರವಂತೆ!

Suvarna News   | Asianet News
Published : Nov 01, 2021, 06:47 PM IST

ಕಳೆದ ವಾರ ಶಾರುಖ್ ಖಾನ್ (Shah Rukh Khan) ಮತ್ತು ಅವರ ಅಭಿಮಾನಿಗಳಿಗೆ ಸಂತಸದ ಸುದ್ದಿ ತಂದಿದೆ. ಸುಮಾರು 28 ದಿನಗಳ ಕಾಲ ಜೈಲಿನಲ್ಲಿದ್ದ ಆರ್ಯನ್ ಖಾನ್‌ಗೆ (Aryan Khan) ಕೊನೆಗೂ  ಜಾಮೀನು (Bail) ಸಿಕ್ಕಿದೆ. ಶಾರಖ್‌ ಪುತ್ರಿ ಸುಹಾನಾ ಖಾನ್ (Suhana Khan) ಸಹೋದರನ ಬಿಡುಗಡೆಯ ಸಂತೋಷ  ತಡೆಯಲು ಸಾಧ್ಯವಾಗುತ್ತಿಲ್ಲ. ಅವಳು ಆರ್ಯನ್‌ನನ್ನು ಭೇಟಿಯಾಗಲು ಕಾತುರುಳಾಗಿದ್ದಾಳೆ ಮತ್ತು ಆದರೆ ಈಗ ಸುಹಾನಾ ಮನೆಗೆ ಬರಲು ತಮ್ಮ ಪ್ಯಾಕಿಂಗ್ ಸಹ ಮುಗಿಸಿದ್ದಾಳಂತೆ. ಹಾಗೇ ಸುಹಾನಾ ಭಾರತಕ್ಕೆ ಬರಲು ಕಾತುರಳಾಗಿರಲು ಇನ್ನೊಂದು ಕಾರಣ ಸಹ ಇದೆ. ಏನದು ಗೊತ್ತಾ?

PREV
18
ಶಾರುಖ್ ಮಗಳು ಸುಹಾನಾಗೆ ಮನೆಗೆ ಬರುವ ಕಾತುರವಂತೆ!

ಸ್ಪಾಟ್‌ಬಾಯ್‌ನ ವರದಿಗಳ ಪ್ರಕಾರ, ಸುಹಾನಾ ಎರಡು ಕಾರಣಗಳಿಂದ ಮುಂಬೈನಲ್ಲಿರುವ ತನ್ನ ಮನೆಗೆ ಆದಷ್ಟು ಬೇಗ ತಲುಪಲು ಬಯಸುತ್ತಿದ್ದಾಳಂತೆ. ಅವಳು ಬಹಳ ಹಿಂದೆಯೇ ಮನೆಗೆ ಬರಬೇಕೆಂದು ಬಯಸಿದ್ದಳು, ಆದರೆ ಅವಳ ಪೋಷಕರು ಅವಳನ್ನು ಬಾರದಂತೆ ತಡೆದಿದ್ದರು. ಆದರೆ ಈಗ ಸುಹಾನಾ ಮನೆಗೆ ಬರಲು ತಮ್ಮ ಪ್ಯಾಕಿಂಗ್ ಸಹ ಮುಗಿಸಿದ್ದಾಳಂತೆ.

28

ಸುಹಾನಾ ಖಾನ್ ಅವರ ಸಹೋದರ ಆರ್ಯನ್ ಖಾನ್ (Aryan Khan) ಅವರನ್ನು ಅಕ್ಟೋಬರ್ 2 ರಂದು ಎನ್‌ಸಿಬಿ (NCB) ಬಂಧಿಸಿತ್ತು. ಮತ್ತು ಅಕ್ಟೋಬರ್ 8 ರಂದು ಆರ್ಥರ್ ರೋಡ್ ಜೈಲಿಗೆ ಕಳುಹಿಸಲಾಯಿತು. ಈಗ ಸುಮಾರು 28 ದಿನಗಳ ನಂತರ ಕಳೆದ ಶುಕ್ರವಾರ ಜಾಮೀನು ಪಡೆದು ಆರ್ಯನ್ ಶನಿವಾರ ಮನೆಗೆ ಮರಳಿದ್ದಾರೆ.

  
 

38

ಈ ನಡುವೆ ಸುಹಾನಾ ಖಾನ್ ಆದಷ್ಟು ಬೇಗ ಭಾರತಕ್ಕೆ ಬರಲು ಫ್ಲೈಟ್ ಹಿಡಿಯಲಿದ್ದಾರೆ ಎಂಬ ಸುದ್ದಿ ಬರುತ್ತಿದೆ. ಅವನು ತನ್ನ ಸಹೋದರನನ್ನು ಭೇಟಿಯಾಗಲು ಎದುರು ನೋಡುತ್ತಿದ್ದಾಳೆ. ಸುಹಾನಾ ಕೂಡ ರಾತ್ರೋರಾತ್ರಿ ಭಾರತಕ್ಕೆ ವಾಪಸ್ ಬರುವ ಪ್ಲಾನ್ ಮಾಡಿದ್ದಾರೆ.

48

ವರದಿಗಳ ಪ್ರಕಾರ, ಭಾನುವಾರ ಅಥವಾ ಸೋಮವಾರದ ವೇಳೆಗೆ ಸುಹಾನಾ ಖಾನ್ ಭಾರತಕ್ಕೆ ಬರಲಿದ್ದಾರೆ. ವಾಸ್ತವವಾಗಿ, ಅವರ ತಂದೆ ಶಾರುಖ್ ಖಾನ್ ಅವರ ಜನ್ಮದಿನ ನವೆಂಬರ್ 2 ರಂದು ಮತ್ತು ದೀಪಾವಳಿಯೂ ಸಮೀಪಿಸುತ್ತಿದೆ. ಈ ಎರಡೂ ವಿಶೇಷ ದಿನಗಳನ್ನು ಕುಟುಂಬ ಸದಸ್ಯರೊಂದಿಗೆ ಆಚರಿಸಲು ಸುಹಾನಾ ಎದುರು ನೋಡುತ್ತಿದ್ದಾಳೆ. 

58

ಸುಹಾನಾ ಖಾನ್ ತನ್ನ ಸಹೋದರ ಆರ್ಯನ್ ಖಾನ್ ಜಾಮೀನು ಪಡೆದ ಸುದ್ದಿಯನ್ನು ಕೇಳಿದ ತಕ್ಷಣ, ಅವಳು ತನ್ನ ಇನ್ಸ್ಟಾಗ್ರಾಮ್‌ನಲ್ಲಿ ತನ್ನ ಸಹೋದರ ಮತ್ತು ತಂದೆಯೊಂದಿಗೆ ಬಾಲ್ಯದ ಫೋಟೋಗಳನ್ನು ಹಂಚಿಕೊಂಡಿದ್ದಾಳೆ. ಫೋಟೋಗಳ ಕೊಲಾಜ್ ಅನ್ನು ಹಂಚಿಕೊಂಡು ನಾನು ನಿನ್ನನ್ನು ಪ್ರೀತಿಸುತ್ತೇನೆ ಎಂದು  ಬರೆದಿದ್ದಾಳೆ 

68

ಸುಹಾನಾ ಖಾನ್ ನ್ಯೂಯಾರ್ಕ್‌ನಲ್ಲಿ ಆಕ್ಟಿಂಗ್‌ ಕೋರ್ಸ್‌ ಮಾಡುತ್ತಿದ್ದಾಳೆ. ತಂದೆ ಶಾರುಖ್ ಖಾನ್‌ರಂತೆ ಸಿನಿಮಾದಲ್ಲಿ ನಟಿಸುವ ಇರಾದೆ ಈಕೆಗೆ. ಈಗಾಗಲೇ ಕೆಲವು ಕಿರುಚಿತ್ರಗಳಲ್ಲೂ ಕೆಲಸ ಮಾಡಿದ್ದಾಳೆ. ನೃತ್ಯ ಮತ್ತು ಕ್ರೀಡೆಗಳನ್ನು ಇಷ್ಟ ಪಡುವ ಸುಹಾನಾ ಶಾಲೆಯ ಹಲವು ಕ್ರೀಡಾಕೂಟಗಳಲ್ಲಿ ಭಾಗವಹಿಸಿದ್ದಾಳೆ.

78

ಸುಹಾನಾ 2018 ರಲ್ಲಿ ಮ್ಯಾಗಜೀನ್ (Magazine) ಮುಖಪುಟದ ಮೂಲಕ ಗ್ಲಾಮರ್‌ ಪ್ರಪಂಚಕ್ಕೆ (Glamour World)  ಪಾದಾರ್ಪಣೆ ಮಾಡಿದಳು ಮತ್ತು ಸ್ವತಃ ಶಾರುಖ್ ಅವರೇ ಪತ್ರಿಕೆಯ ಕವರ್ ಪೇಜ್ ಅನ್ನು ಲಾಂಚ್ ಮಾಡಿದ್ದರು. ಈ ಸಂದರ್ಭದ ಫೋಟೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದರು ಶಾರುಖ್‌. 

88
suhana khan

ಸುಹಾನಾ ಖಾನ್ ನಿಜ ಜೀವನದಲ್ಲಿ ತುಂಬಾ ಗ್ಲಾಮರಸ್. ಸೋಷಿಯಲ್ ಮೀಡಿಯಾದಲ್ಲೂ (Social Media) ತುಂಬಾ ಆ್ಯಕ್ಟಿವ್ ಆಗಿರುವ ಸುಹಾನಾ  ಆಗಾಗ ತನ್ನ ಸ್ನೇಹಿತರೊಂದಿಗೆ ಪಾರ್ಟಿ ಹಾಗೂ ಮಜ ಮಾಡುವ ಫೋಟೋಗಳನ್ನು ಹಂಚಿಕೊಳ್ಳುತ್ತಾಳೆ. ಇನ್‌ಸ್ಟಾಗ್ರಾಮ್‌ನಲ್ಲಿ ತಮ್ಮ ಅನೇಕ ಬೋಲ್ಡ್ ಫೋಟೋಗಳನ್ನು ಸಹ  ಪೋಸ್ಟ್ ಮಾಡಿದ್ದಾಳೆ.

Read more Photos on
click me!

Recommended Stories