ಅರ್ಜುನ್ ಸರ್ಜಾ ಪುತ್ರಿ ಐಶ್ವರ್ಯಾ ವಿವಾಹ ನಿಶ್ಚಿತಾರ್ಥದ ಸುಂದರ ಫೋಟೋಗಳು

First Published | Oct 30, 2023, 11:06 AM IST

ಸರ್ಜಾ ಕುಟುಂಬದ ಕುಡಿ ಐಶ್ವರ್ಯಾ ಅರ್ಜುನ್ ಅವರು ತಮಿಳು ನಟ ಉಮಾಪತಿ ರಾಮಯ್ಯ ಜೊತೆ ಎಂಗೇಜ್ ಆಗಿದ್ದು, ಅವರ ನಿಶ್ಚಿತಾರ್ಥದ ಸುಂದರ ಫೋಟೋಗಳು ಇಲ್ಲಿವೆ ನೋಡಿ. 

ದಕ್ಷಿಣ ಭಾರತದ ಸಿನಿಮಾ ನಟ ಅರ್ಜುನ್ ಸರ್ಜಾ ಅವರ ಪುತ್ರಿ ಐಶ್ವರ್ಯಾ ಅರ್ಜುನ್ ಅವರು ತಮಿಳು ನಟ ಉಮಾಪತಿ ರಾಮಯ್ಯ ಜೊತೆ ಪ್ರೀತಿಯಲ್ಲಿ ಬಿದ್ದಿದ್ದು, ಈ ಪ್ರೀತಿಗೆ ಈಗ ನಿಶ್ಚಿತಾರ್ಥದ ಮುದ್ರೆ ಬಿದ್ದಿದೆ. 

ಚೆನ್ನೈನಲ್ಲಿ ಆಕ್ಟೋಬರ್  7 ರಂದು ನಡೆದ ಅದ್ದೂರಿ ಸಮಾರಂಭದಲ್ಲಿ ಈ ಜೋಡಿ ವಿವಾಹ ನಿಶ್ಚಿತಾರ್ಥಕ್ಕೆ ಒಳಗಾಗಿದ್ದಾರೆ. ಇವರಿಬ್ಬರು ಧೀರ್ಘಕಾಲದಿಂದ ಡೇಟಿಂಗ್‌ನಲ್ಲಿದ್ದು, ಎರಡೂ ಕುಟುಂಬಗಳು ಮೊದಲಿನಿಂದಲೂ ಪರಸ್ಪರ ತಿಳಿದಿದ್ದು, ಬಹಳ ಆತ್ಮೀಯವಾಗಿವೆ ಎಂದು ತಿಳಿದು ಬಂದಿದೆ. 

Latest Videos


ಎರಡು ಕುಟುಂಬಗಳು ಹಾಗೂ ಬಂಧುಗಳು ಆತ್ಮೀಯರ ಸಮ್ಮುಖದಲ್ಲಿ ನಿಶ್ಚಿತಾರ್ಥ ನಡೆದಿದ್ದು, ಆದರೆ ಮದುವೆ ದಿನಾಂಕವನ್ನು ನಿಗದಿ ಮಾಡಲಾಗಿಲ್ಲ, ಮುಂದಿನ ವರ್ಷ ಇವರಿಬ್ಬರ ವಿವಾಹ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. 

ಉಮಾಪತಿ ಅವರು ತಮಿಳು ನಟ ಹಾಗೂ ಹಾಸ್ಯನಟ ತಂಬಿ ರಾಮಯ್ಯ ಅವರ ಪುತ್ರನಾಗಿದ್ದಾರೆ. ಅರ್ಜುನ್ ಸರ್ಜಾ ಹಾಗೂ ತಂಬಿ ರಾಮಯ್ಯ ಹಲವು ವರ್ಷಗಳಿಂದ ಪರಸ್ಪರ ಪರಿಚಿತರಾಗಿದ್ದಾರೆ. ಅಲ್ಲದೇ ಜೊತೆಯಾಗಿ ಕೆಲ ಸಿನಿಮಾಗಳಲ್ಲಿ ನಟನೆಯನ್ನೂ ಮಾಡಿದ್ದಾರೆ. 

Arjun Sarja, Aishwarya Sarja,

'ಅದಗಪ್ಪಟ್ಟತ್ತು ಮಗಜನಂಗಲೇ'  ಎಂಬ ತಮಿಳು ಸಿನಿಮಾ ಮೂಲಕ ಉಮಾಪತಿಯವರು ಸಿನಿಮಾ ವೃತ್ತಿಜೀವನವನ್ನು ಆರಂಭಿಸಿದ್ದು, ತಮ್ಮ ನಟನೆಗೆ ಈ ಸಿನಿಮಾ ವಿಮರ್ಶಕರ ಮೆಚ್ಚುಗೆ ಗಳಿಸಿದ್ದಾರೆ. 


ಅರ್ಜುನ್ ಸರ್ಜಾ ಪುತ್ರಿ ಐಶ್ವರ್ಯಾ ಸರ್ಜಾ ನಟಿಯಾಗಿದ್ದು 2013 ರಲ್ಲಿ ತಮಿಳಿನ 'ಪಟ್ಟತ್ತು ಯಾನೈ' ಸಿನಿಮಾ ಮೂಲಕ ನಟನೆಗೆ ಎಂಟ್ರಿ ನೀಡಿದರು. 2018 ರಲ್ಲಿ ಕನ್ನಡದ 'ಪ್ರೇಮ ಬರಹ' ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟರು.

ಇದೇ ಸಿನಿಮಾ ತಮಿಳಿನಲ್ಲಿ ‘ಸೊಲ್ಲಿವಿಡುವಾ’ ಹೆಸರಿನಲ್ಲಿ ಬಿಡುಗಡೆ ಆಯ್ತು. ಸಿನಿಮಾವನ್ನು ಸ್ವತಃ ಅರ್ಜುನ್ ಸರ್ಜಾ ನಿರ್ದೇಶನ ಮಾಡಿ ನಿರ್ಮಾಣವನ್ನೂ ಮಾಡಿದ್ದರು. 

click me!