ಇನ್ನೂ ಬಾಲಿವುಡ್ ಗೆ ಕಾಲೇ ಇಟ್ಟಿಲ್ಲ… ಆಗ್ಲೇ ಫೇಮಸ್ ಈ ಸ್ಟಾರ್ ಕಿಡ್ಸ್!

First Published | Oct 29, 2023, 5:54 PM IST

ಶ್ರೀದೇವಿ, ಜೂಹಿ ಚಾವ್ಲಾ ಸೇರಿ, 90 ರ ದಶಕದ ಅನೇಕ ನಟಿಯರ ಹೆಣ್ಣುಮಕ್ಕಳು ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಜನಪ್ರಿಯರಾಗಿದ್ದಾರೆ. ಅವರಲ್ಲಿ ಕೆಲವರು ಶೀಘ್ರದಲ್ಲೇ ಬಾಲಿವುಡ್ ಗೆ ಪಾದಾರ್ಪಣೆ ಮಾಡಲಿದ್ದಾರೆ. ಅವರ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ. 
 

ಹಿಂದಿ 90ರ ದಶಕವನ್ನು ಚಲನಚಿತ್ರಗಳ ಸುವರ್ಣ ಯುಗ ಎಂದು ಕರೆದರೆ ಅದು ತಪ್ಪಾಗಲಾರದು. ಈ ಯುಗದ ನಟರು, ನಟಿಯರು, ಚಲನಚಿತ್ರಗಳು ಮತ್ತು ಹಾಡುಗಳು ಇನ್ನೂ ಸಹ ಜನಪ್ರಿಯತೆ ಪಡೆದಿದೆ. ಶಾರುಖ್ ಖಾನ್, ಮಾಧುರಿ ದೀಕ್ಷಿತ್, ಶ್ರೀದೇವಿ, ಸಲ್ಮಾನ್ ಖಾನ್ ಮತ್ತು ಇನ್ನೂ ಅನೇಕರು 90 ರ ದಶಕದಿಂದಲೂ ಅಭಿಮಾನಿಗಳ ನೆಚ್ಚಿನ ಸೆಲೆಬ್ರಿಟಿಗಳು.  
 

ನಾವು ಇಂದಿನ ಸಮಯದ ಬಗ್ಗೆ ಮಾತನಾಡುವುದಾದರೆ, 90ರ ದಶಕದ ಟಾಪ್ ನಟಿಯರ ಹೆಣ್ಣುಮಕ್ಕಳು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಜನಪ್ರಿಯರಾಗಿದ್ದಾರೆ. ಜೂಹಿ ಚಾವ್ಲಾದಿಂದ ಹಿಡಿದು ಶ್ರೀದೇವಿಯವರೆಗೆ, 90 ರ ದಶಕದ ನಟಿಯರು ಇನ್ನೂ ಸಿನಿಮಾರಂಗಕ್ಕೆ ಕಾಲಿಡದ ಆದರೆ ಸಖತ್ ಜನಪ್ರಿಯತೆ ಪಡೆದಿರುವ ಮಕ್ಕಳ ಬಗ್ಗೆ ನೋಡೋಣ. 
 

Tap to resize

ಅವಂತಿಕಾ ದಸಾನಿ (Avantika Dassani): ಭಾಗ್ಯಶ್ರೀ 'ಮೈನೆ ಪ್ಯಾರ್ ಕಿಯಾ' ಚಿತ್ರದ ಮೂಲಕ ಬಾಲಿವುಡ್ಗೆ ಪಾದಾರ್ಪಣೆ ಮಾಡಿದರು. ಈ ಚಿತ್ರದ ನಂತರ, ಅವರು ಚಲನಚಿತ್ರಗಳಿಂದ ಕಣ್ಮರೆಯಾದರು, ಆದರೆ ಅಭಿಮಾನಿಗಳ ಹೃದಯದಲ್ಲಿ ಅವರ ಮೇಲಿನ ಪ್ರೀತಿ ಕಡಿಮೆಯಾಗಲಿಲ್ಲ. ಭಾಗ್ಯಶ್ರೀ ಅವರ ಮಗಳು ಅವಂತಿಕಾ ಕೂಡ ಬೆಳೆದು ದೊಡ್ಡವಳಾಗಿದ್ದಾಳೆ. ಅವರು ವೆಬ್ ಸೀರೀಸ್ ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅವಂತಿಕಾ ಸೋಷಿಯಲ್ ಮೀಡಿಯಾದಲ್ಲಿ ತುಂಬಾ ಆಕ್ಟೀವ್ ಆಗಿದ್ದಾರೆ.
 

ನೈಸಾ ದೇವಗನ್ (Nysa Devgan): 90 ದಶಕದ ಜನಪ್ರಿಯ ನಟಿಯರಲ್ಲಿ ಒಬ್ಬರಾದ ಕಾಜಲ್ ಇಂದಿಗೂ ಸಹ ತೆರೆ ಮೇಲೆ ಬಂದ್ರೆ ಅಭಿಮಾನಿಗಳು ಖುಷಿ ಪಡ್ತಾರೆ. ಇವರ ಮಗಳು ನೈಸಾ ದೇವಗನ್ ಸಹ ಸೋಶಿಯಲ್ ಮೀಡಿಯಾದಲ್ಲಿ ತುಂಬಾನೆ ಸದ್ದು ಮಾಡುತ್ತಿರುತ್ತಾರೆ. ಫ್ರೆಂಡ್ಸ್ ಜೊತೆ ಪಾರ್ಟಿ, ತಮ್ಮ ಮಾಡರ್ನ್ ಡ್ರೆಸ್ ಹೀಗೆ ಹಲವಾರು ವಿಷಯಗಳಿಂದ ಅವರು ಸದಾ ಸುದ್ದಿಯಲ್ಲಿತರುತ್ತಾರೆ. 
 

ಆಲಯಾ ಎಫ್ (Alaya F): ಹಿಂದಿ ಚಿತ್ರ ರಂಗದ ಮತ್ತೊಬ್ಬ ಹಿರಿಯ ನಟಿ ಪೂಜ ಬೇಡಿಯವರ ಮಗಳು ಆಲಿಯಾ. ಆದರೆ ಅವರು ಆಲಯಾ ಎಫ್ ಎಂದೇ ಜನಪ್ರಿಯತೆ ಪಡೆದಿದ್ದಾರೆ. ಆಲಯಾ ತಮ್ಮ ಬೋಲ್ಡ್ ಲುಕ್, ಫಿಟ್ನೆಸ್ ನಿಂದ ಮತ್ತು ಸೌಂದರ್ಯದಿಂದ ಸಿಕ್ಕಾಪಟ್ಟೆ ಜನಪ್ರಿಯರಾಗಿದ್ದಾರೆ. ಇವರು ಜವಾನಿ ಜಾನೆಮನ್, ಫ್ರೆಡಿ ಮೊದಲಾದ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ 1.6 ಮಿಲಿಯನ್ ಫಾಲೋವರ್ಸ್ ಗಳನ್ನು ಪಡೆದಿದ್ದಾರೆ.

ರಾಶಾ ತಡಾನಿ (Rasha Tadani): 90 ರ ದಶಕದಲ್ಲಿ ಎಲ್ಲರ ಹೃದಯವನ್ನು ಗೆದ್ದ ರವೀನಾ ಟಂಡನ್ ಅವರ ಮಗಳು ರಶಾ ಕೂಡ ತುಂಬಾನೆ ಸುಂದರವಾಗಿದ್ದಾರೆ ಮತ್ತು ಅವರ ಸೌಂದರ್ಯ ಮತ್ತು ಸ್ಟೈಲಿಂಗ್ ಕೂಡ ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಚರ್ಚಿಸಲ್ಪಟ್ಟಿದೆ. ರಾಶಾ ತಡಾನಿ ಸೋಷಿಯಲ್ ಮೀಡಿಯಾದಲ್ಲಿ ತುಂಬಾ ಆಕ್ಟೀವ್ ಆಗಿದ್ದಾರೆ. ಅವರು ಸುಮಾರು 7 ಲಕ್ಷ ಫಾಲೋವರ್ಸ್ ಹೊಂದಿದ್ದಾರೆ.
 

ಖುಷಿ ಕಪೂರ್ (Khushi Kapoor): ಶ್ರೀದೇವಿ ಅವರ ಮಗಳು ಜಾಹ್ನವಿ ಕಪೂರ್ ಬಾಲಿವುಡ್ಗೆ ಪ್ರವೇಶಿಸಿದ್ದಾರೆ . ಅನೇಕ ಚಿತ್ರಗಳಲ್ಲಿನ ಅವರ ಅಭಿನಯವು ಮೆಚ್ಚುಗೆಯನ್ನು ಗಳಿಸಿದೆ. ಆದರೆ ಶ್ರೀದೇವಿಯ ಕಿರಿಯ ಮಗಳು ಖುಷಿ ಕಪೂರ್ ಕೂಡ ಸದಾ ಸುದ್ದಿಯಲ್ಲಿರ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಈಗಾಗಲೇ ಭಾರಿ ಅಭಿಮಾನಿಗಳನ್ನು ಹೊಂದಿದ್ದಾರೆ. ಖುಷಿ ಇನ್ಸ್ಟಾಗ್ರಾಮ್ನಲ್ಲಿ 1 ದಶಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಹೊಂದಿದ್ದಾರೆ.

ಸಮೈರಾ ಕಪೂರ್ (Sameira Kapoor): ತಮ್ಮ ಬಬ್ಲಿ ನಟನೆಯಿಂದ 90ರ ದಶಕದಲ್ಲಿ ಜನಪ್ರಿಯತೆ ಪಡೆದ ನಟಿ ಕರೀಶ್ಮಾ ಕಪೂರ್ ಮದುವೆಯ ಬಳಿಕ, ಸಂಸಾರ, ಮಕ್ಕಳಿಗಾಗಿ ಸಂಪೂರ್ಣ ಸಮಯ ಮೀಸಲಿಟ್ಟರು. ಇವರು ಮಗಳ ಸಮೈರಾ ಕಪೂರ್ ಅಮ್ಮನಂತೆ ತುಂಬಾನೆ ಮುದ್ದಾಗಿದ್ದಾರೆ. ಇವರ ಲುಕ್ ನಿಂದಾಗಿಯೆ ಇವರು ಸೋಶಿಯಲ್ ಮಿಡಿಯಾದಲ್ಲಿ ಚರ್ಚೆಯಲ್ಲಿರುತ್ತಾರೆ. 

Latest Videos

click me!