ಕಪ್ಪು ಸೀರೆಯಲ್ಲಿ ಮಿಲ್ಕಿ ಬ್ಯೂಟಿ Tamannaah: ಅಯ್ಯೋ ನಿಮ್ಮನ್ನ ನೋಡ್ತಿದ್ರೆ ಟೆಂಪ್ರೆಚರ್ ಏರುತ್ತೆ ಎಂದ ಫ್ಯಾನ್ಸ್!

First Published | Oct 30, 2023, 1:00 AM IST

ದಕ್ಷಿಣ ಚಿತ್ರರಂಗದ ಬಹುಬೇಡಿಕೆಯ ನಟಿ ತಮನ್ನಾ ಭಾಟಿಯಾ. ಇವರ ಸಿನಿಮಾಗಳು ಸೂಪರ್ ಹಿಟ್​, ಸೌಂದರ್ಯಕ್ಕೂ ಅಭಿಮಾನಿಗಳಿಂದ ಫುಲ್​ ಮಾರ್ಕ್ಸ್. ಸೋಷಿಯಲ್​ ಮೀಡಿಯಾದಲ್ಲಂತೂ ಸಿಕ್ಕಾಪಟ್ಟೆ ಸಕ್ರಿಯ. ಅತಿ ಹೆಚ್ಚು ಫೋಟೋಗಳನ್ನು ಹಂಚಿಕೊಳ್ಳುವವರ ಪೈಕಿ ತಮನ್ನಾ ಭಾಟಿಯಾ ಕೂಡ ಪ್ರಮುಖರು. 

ತಮನ್ನಾ ಭಾಟಿಯಾ ಶೇರ್ ಮಾಡುವ ಪ್ರತಿ ಫೋಟೋಗಳೂ ಕೂಡ ಅಷ್ಟೇ ಸೊಬಗಿನವು. ಕಣ್ಣೋಟದಲ್ಲೇ ಕೊಲ್ಲುವ ನಟಿಮಣಿ ಅಂತಾರೆ ಇವರ ಫ್ಯಾನ್ಸ್‌. ಹಾಲಿನಂತ ಮೈಬಣ್ಣ, ಫಿಟ್ನೆಸ್​ ಬಾಡಿ, ಆಕರ್ಷಣೀಯ ನೋಟ, ಅದ್ಭುತ ಸೌಂದರ್ಯ. ಅಷ್ಟೇ ಏಕೆ? ನಟನೆಯಲ್ಲೂ ಎತ್ತಿದ ಕೈ. ಓರ್ವ ಯಶಸ್ವಿ ಅಭಿನೇತ್ರಿಗೆ ಇನ್ನೇನು ಬೇಕು ಹೇಳಿ?

ಮಿರಮಿರ ಮಿಂಚುವ ಬ್ಲ್ಯಾಕ್​ ಸೀರೆಯುಟ್ಟು ತಮನ್ನಾ ಭಾಟಿಯಾ ಇದೀಗ ಸಖತ್​ ಸ್ಟೈಲಿಶ್​ ಆಗಿ ಕಾಣಿಸಿಕೊಂಡಿದ್ದಾರೆ. ಮನಮೋಹಕ ಫೋಟೋಗಳು ಅಭಿಮಾನಿಗಳ ಕಣ್ಮನ ಆವರಿಸಿದ್ದು, ಸದ್ಯ ಫೋಟೋಗಳು ವೈರಲ್‌ ಆಗಿವೆ.

Tap to resize

ಎಂದಿನಂತೆ ಸಿಂಪಲ್ ಆಗಿ ಹೇರ್​ಸ್ಟೈಲ್ ಮಾಡಿಕೊಂಡಿದ್ದ ತಮನ್ನಾ ಭಾಟಿಯಾ ಅವರು ಆಕರ್ಷಕವಾದ ಗ್ರ್ಯಾಂಡ್ ಇಯರಿಂಗ್ಸ್ ಧರಿಸಿಕೊಂಡಿದ್ದರು. ವೈಟ್ ಹಾಗೂ ಬ್ಲ್ಯಾಕ್ ಸ್ಟೋನ್ ಕಾಂಬಿನೇಷನ್ ಇಯರಿಂಗ್ಸ್ ಆಕರ್ಷಕವಾಗಿದೆ.

ನಟಿ ತಮನ್ನಾ ಭಾಟಿಯಾ ಅವರು ಬ್ಯಾಕ್​ಲೆಸ್ ಬ್ಲೌಸ್ ಧರಿಸಿಕೊಂಡು ಮುದ್ದಾಗಿ ಕಾಣಿಸಿದ್ದಾರೆ. ಟಕ್ಲಿ ಡಿಸೈನ್​ಗಳಿದ್ದ ಬ್ಲ್ಯಾಕ್ ಸೀರೆಯಲ್ಲಿ ತಮನ್ನಾ ಅವರು ಬ್ಯೂಟಿಯಾಗಿ ಕಾಣಿಸಿದ್ದಾರೆ. 

ಕಪ್ಪು ಬಣ್ಣದ ಸೀರೆಯುಟ್ಟ ತಮನ್ನಾ ಭಾಟಿಯಾ ಚಿತ್ರಕ್ಕೆ ಫ್ಯಾನ್ಸ್‌ ಬಗೆಬಗೆಯ ಕಾಮೆಂಟ್‌ಗಳನ್ನು ಮಾಡಿದ್ದಾರೆ. ಬಹುತೇಕ ಜನರು ನೀವು ಕಪ್ಪು ಸೀರೆಯಲ್ಲಿ ಹಾಲಿನಂತೆ ಹೊಳೆಯುವ ಮಿಲ್ಕಿ ಬ್ಯೂಟಿ, ನಿಮ್ಮನ್ನ ನೋಡ್ತಿದ್ರೆ ಟೆಂಪ್ರೆಚರೆ ನಿಲ್ಲಲ್ಲ ಎಂದಿದ್ದಾರೆ. 

ತಮನ್ನಾ ಭಾಟಿಯಾ ಸದ್ಯ ತೆಲಗು ನಟ ವಿಜಯ್ ವರ್ಮಾ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ. ಜೊತೆಗೆ ಅವರು ಶೀಘ್ರದಲ್ಲಿಯೇ ಮದುವೆಯಾಗಲಿದ್ದಾರೆ ಎನ್ನಲಾಗಿದೆ. ಅವರ ಜೋಡಿ ಈಗ ಸೌತ್​ನಲ್ಲಿ ಹಿಟ್ ಆಗಿದೆ.

ಸರಿಸುಮಾರು 2 ದಶಕಗಳಿಂದ ದಕ್ಷಿಣ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ತಮನ್ನಾ ಸದ್ಯ ಬಹುಭಾಷೆಗಳಲ್ಲಿ ಬಹುಬೇಡಿಕೆಯ ನಟಿ. ಅಭಿಮಾನಿಗಳ ಸಂಖ್ಯೆ ಕೂಡ ದೊಡ್ಡದೇ. ಜನಪ್ರಿಯ ಸಾಮಾಜಿಕ ಜಾಲತಾಣ ವೇದಿಕೆ ಇನ್​ಸ್ಟಾಗ್ರಾಮ್​ ಒಂದರಲ್ಲೇ 23.8 ಮಿಲಿಯನ್​ ಫಾಲೋವರ್ಸ್ ಸಂಪಾದಿಸಿದ್ದಾರೆ. 

Latest Videos

click me!