ನಾಗಚೈತನ್ಯ - ಸಮಂತಾ ಪ್ಯಾಚ್ ಅಪ್? ಜೋಡಿಯನ್ನು ಮತ್ತೆ ಒಂದು ಮಾಡಿದ ಫ್ಯಾನ್ಸ್!

First Published | Oct 9, 2023, 5:34 PM IST

ದಕ್ಷಿಣ ನಟಿ ಸಮಂತಾ ರುತ್ ಪ್ರಭು (Samantha Ruth Prabhu) ಮತ್ತು ನಾಗ ಚೈತನ್ಯ ( Naga Chaitanya)ಅವರು ಅಕ್ಟೋಬರ್ 2021 ರಲ್ಲಿ ತಮ್ಮ ಪ್ರತ್ಯೇಕತೆಯನ್ನು ಘೋಷಿಸಿದ್ದರು. ಆದರೆ, ಈಗ ವಿಚ್ಛೇದನದ 2 ವರ್ಷಗಳ ನಂತರ ಇಬ್ಬರೂ ಪ್ಯಾಚ್ ಅಪ್ ಆಗಿದ್ದಾರೆ ಎಂಬ ವರದಿಗಳು ಬರುತ್ತಿವೆ. ಈ ಸುದ್ದಿಯನ್ನು ಕೇಳಿದ ನಂತರ, ಅವರ ಅಭಿಮಾನಿಗಳು ತುಂಬಾ ಸಂತೋಷಪಟ್ಟಿದ್ದಾರೆ ಮತ್ತು ತಮ್ಮ ನೆಚ್ಚಿನ ಜೋಡಿಯನ್ನು ಮತ್ತೆ ಒಟ್ಟಿಗೆ ನೋಡಲು ಕಾತುರದಿಂದ ಕಾಯುತ್ತಿದ್ದಾರೆ. ಸಮಂತಾ ರುತ್ ಪ್ರಭು-ನಾಗ ಚೈತನ್ಯ ಪ್ಯಾಚ್ ಅಪ್ ಬಗ್ಗೆ ಜನರು ಏಕೆ ಊಹಿಸುತ್ತಿದ್ದಾರೆಂದು ತಿಳಿಯಿರಿ

ಅಸಲಿಗೆ  ನಾಗಾ ಇತ್ತೀಚೆಗಷ್ಟೇ 'ಹ್ಯಾಶ್' ಹೆಸರಿನ ಫ್ರೆಂಚ್ ಬುಲ್‌ಡಾಗ್‌ನ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ, ಅವರು ಮತ್ತು ಸಮಂತಾ  ಜೊತೆಯಾಗಿದ್ದಾಗ ಸ್ವಾಗತಿಸಿದ್ದರು.  

ವಿಚ್ಛೇದನದ ನಂತರ, ಸಮಂತಾ ಒಬ್ಬರೇ ಅದರ ಫೋಟೋವನ್ನು ಹಂಚಿಕೊಳ್ಳುತ್ತಿದ್ದರು, ಇದರಿಂದಾಗಿ ವಿಚ್ಛೇದನದ ನಂತರ ನಾಯಿಯು ಸಮಂತಾ ಜೊತೆ ವಾಸಿಸುತ್ತದೆ ಎಂದು ಜನರು ಊಹಿಸುತ್ತಿದ್ದರು.
 

Tap to resize

ಆದರೆ ಈಗ ಸಮಂತಾ ನಗರದಲ್ಲಿ ಇಲ್ಲದಿದ್ದಾಗ, ನಾಗ ಅದನ್ನು ನೋಡಿಕೊಳ್ಳುತ್ತಿದ್ದಾರೆ. ಇದನ್ನು ನೋಡಿದ ಅಭಿಮಾನಿಗಳು ವಿಚ್ಛೇದನದ ನಂತರವೂ ಸಮಂತಾ ಮತ್ತು ನಾಗ ಒಬ್ಬರಿಗೊಬ್ಬರು ಬೆಂಬಲಿಸುತ್ತಾರೆ ಎಂದು ಹೇಳುತ್ತಾರೆ. 

ಕೆಲವರಂತೂ ಸಮಂತಾ ರುತ್ ಪ್ರಭು ಮತ್ತು ನಾಗ ಚೈತನ್ಯ ಇವರಿಬ್ಬರ ನಡುವೆ ಪ್ಯಾಚ್ ಅಪ್ಲ್ ಆಯ್ತು, ಅದಕ್ಕೇ ಹ್ಯಾಶ್ ಅನ್ನು ಒಟ್ಟಿಗೆ ನಿಭಾಯಿಸುತ್ತಿದ್ದಾರೆನ್ನುತ್ತಿದ್ದಾರೆ. 

ನಾಗ ಶೇರ್ ಮಾಡಿರುವ ಫೋಟೋದಲ್ಲಿ ಹ್ಯಾಶ್ ಕಾರಿನಲ್ಲಿ ಕುಳಿತು ಸೂರ್ಯಾಸ್ತವನ್ನು ಎಂಜಾಯ್ ಮಾಡುತ್ತಿದೆ. ನಾಗಾ ಇದನ್ನು ಹಂಚಿಕೊಂಡು 'ವೈಬ್' ಎಂಬ ಶೀರ್ಷಿಕೆಯಲ್ಲಿ ಬರೆದಿದ್ದಾರೆ.

ಕೆಲವು ದಿನಗಳ ಹಿಂದೆ ಕೂಡ ಸಮಂತಾ ರುತ್ ಪ್ರಭು ಮತ್ತು ನಾಗ ಚೈತನ್ಯ ತಮ್ಮ ಸಂಬಂಧವನ್ನು ಸುಧಾರಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಜನರು ಹೇಳುತ್ತಿದ್ದರು. 

ವಾಸ್ತವವಾಗಿ, 2017 ರಲ್ಲಿ, ಸಮಂತಾ ತನ್ನ ಮದುವೆಯ ಫೋಟೋದೊಂದಿಗೆ ಚೈತನ್ಯ ಅವರ ಹುಟ್ಟುಹಬ್ಬದಂದು ವಿಶ್ ಮಾಡಿದ್ದರು. ಈಗ ಇದ್ದಕ್ಕಿದ್ದಂತೆ ಈ ಫೋಟೋ ವೈರಲ್ ಆಗಿದೆ. 

ಏಕೆಂದರೆ ವಿಚ್ಛೇದನದ ನಂತರ, ಸಮಂತಾ ನಾಗನೊಂದಿಗಿನ ಎಲ್ಲಾ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಿಂದ ತೆಗೆದುಹಾಕಿದ್ದರು, ಆದರೆ ಈಗ ಅವರು ಈ ಫೋಟೋವನ್ನು ಅನ್ ಆರ್ಕೈವ್ ಮಾಡಿದ್ದಾರೆ.

ಇದನ್ನು ನೋಡಿದ ಜನರು ಸಮಂತಾ ಮತ್ತು ನಾಗ ತಮ್ಮ ಸಂಬಂಧಕ್ಕೆ ಮತ್ತೊಂದು ಅವಕಾಶವನ್ನು ನೀಡಿದ್ದಾರೆ  ಎಂದು ಹೇಳುತ್ತಿದ್ದಾರೆ. ಈ ಫೋಟೋದಲ್ಲಿ ಸಮಂತಾ ನಾಗನನ್ನು ಚುಂಬಿಸುತ್ತಿದ್ದಾರೆ.

6 ಅಕ್ಟೋಬರ್ 2017 ರಂದು ಅವರಿಬ್ಬರೂ ಗೋವಾದಲ್ಲಿ ಡೆಸ್ಟಿನೇಶನ್ ವೆಡ್ಡಿಂಗ್‌ನಲ್ಲಿ ಈ ಜೋಡಿ ಅವರು ಹಿಂದೂ ಮತ್ತು ಕ್ರಿಶ್ಚಿಯನ್ ಸಂಪ್ರದಾಯಗಳ ಪ್ರಕಾರ ವಿವಾಹವಾದರು.

ಅವರ ಸಂಬಂಧವು ಹೆಚ್ಚು ಕಾಲ ಉಳಿಯಲು ಸಾಧ್ಯವಾಗಲಿಲ್ಲ ಮತ್ತು ಅವರು ಮದುವೆಯಾದ 4 ವರ್ಷಗಳ ನಂತರ, ಅಂದರೆ 2021 ರಲ್ಲಿ ಪರಸ್ಪರ ವಿಚ್ಛೇದನ ಪಡೆದರು.

Latest Videos

click me!