ಮದುವೆಗೆ ಮೊದಲು ಒಟ್ಟಿಗೆ ವಾಸಿಸಲು ಪ್ಲಾನ್‌ ಮಾಡುತ್ತಿರುವ ಕಿಯಾರಾ ಮತ್ತು ಸಿದ್ಧಾರ್ಥ್ ?

Published : Oct 21, 2022, 04:45 PM IST

ಬಹಳ ದಿನಗಳಿಂದ ಸಿದ್ಧಾರ್ಥ್ ಮಲ್ಹೋತ್ರಾ (Sidharth Malhotra) ಮತ್ತು ಕಿಯಾರಾ ಅಡ್ವಾಣಿ (Kiara Advani) ಅವರ ಸಂಬಂಧದ ಚರ್ಚೆ ನಡೆಯುತ್ತಿದೆ. ಮೂಲಗಳ ಪ್ರಕಾರ, ಮುಂದಿನ ವರ್ಷ ಏಪ್ರಿಲ್‌ನಲ್ಲಿ ಈ  ಜೋಡಿ ದೆಹಲಿಯಲ್ಲಿ ಮದುವೆಯಾಗಲು ಯೋಜಿಸಿದಂತೆ. ಅದರೆ ನಡುವೆ ಕಿಯಾರಾ ಮತ್ತು ಸಿದ್ಧಾರ್ಥ್‌ ಮದುವೆಗೆ ಮುಂಚೆ ಒಟ್ಟಿಗೆ ವಾಸಿಸಲು ನಿರ್ಧರಿಸಿದ್ದಾರೆ ಎಂಬ ಸುದ್ದಿ ಈಗ ವೈರಲ್‌ ಆಗುತ್ತಿದೆ.

PREV
16
ಮದುವೆಗೆ ಮೊದಲು ಒಟ್ಟಿಗೆ ವಾಸಿಸಲು ಪ್ಲಾನ್‌ ಮಾಡುತ್ತಿರುವ ಕಿಯಾರಾ ಮತ್ತು ಸಿದ್ಧಾರ್ಥ್ ?

ಸಿದ್ ಮತ್ತು ಕಿಯಾರಾ ಬಾಲಿವುಡ್‌ನ ಅತ್ಯಂತ ಪ್ರಸಿದ್ಧ ಮತ್ತು ಆರಾಧ್ಯ ಕಪಲ್. ಫ್ಯಾನ್ಸ್‌ ಈ ಜೋಡಿ ಶಾಶ್ವತವಾಗಿ ಒಟ್ಟಿಗೆ ಇರಲಿ ಎಂದು ಬಯಸುತ್ತಿದ್ದಾರೆ. ಕೆಲವು ದಿನಗಳ ಹಿಂದೆ ಸಲ್ಮಾನ್ ಖಾನ್ ಕೂಡ ಕಿಯಾರಾ ಅಡ್ವಾಣಿ ಸಿದ್ಧಾರ್ಥ್ ಮಲ್ಹೋತ್ರಾ ಅವರಿಗೆ ಶುಭ ಹಾರೈಸಿದರು.
 

26

ಬಾಲಿವುಡ್‌ನ ಅತ್ಯಂತ ಆಕರ್ಷಕ ಜೋಡಿ ಸಿದ್ಧಾರ್ಥ್ ಮತ್ತು ಕಿಯಾರಾ ದಂಪತಿಗಳು ಒಬ್ಬರನ್ನೊಬ್ಬರು ಚೆನ್ನಾಗಿ ತಿಳಿದುಕೊಳ್ಳಲು ಮತ್ತು ಒಟ್ಟಿಗೆ ಹೆಚ್ಚು ಸಮಯ ಕಳೆಯಲು ಮದುವೆಯ ಮೊದಲು ಒಟ್ಟಿಗೆ ವಾಸಿಸಲು ಬಯಸಬಹುದು  ಎಂದು ವರದಿಯಾಗಿದೆ.

36

ವರದಿಗಳ ಪ್ರಕಾರ, ಶೇರ್ಷಾ ಜೋಡಿಯು ಏಪ್ರಿಲ್‌ನಲ್ಲಿ ದೆಹಲಿಯಲ್ಲಿ ಮದುವೆಯಾಗಲು ಉದ್ದೇಶಿಸಿದೆ  ಅನೇಕ ಬಾಲಿವುಡ್ ಜೋಡಿಗಳು ಮದುವೆಯಾಗುವ ಮೊದಲು ಒಟ್ಟಿಗೆ ಉಳಿದುಕೊಂಡಿದ್ದಾರೆ ಮತ್ತು ಅವರಲ್ಲಿ ಒಬ್ಬರು ಇತ್ತೀಚೆಗೆ ಮದುವೆಯಾದ ಆಲಿಯಾ ಭಟ್ ಮತ್ತು ರಣಬೀರ್ ಕಪೂರ್

46

ಮೂಲ ಹೇಳುವಂತೆ 'ಸಿದ್ಧಾರ್ಥ್ ಮತ್ತು ಕಿಯಾರಾ ಅವರು ತಮ್ಮ ಮದುವೆಗೆ ಅತ್ಯಂತ ಸಿದ್ಧರಾಗಿದ್ದಾರೆ, ಏಕೆಂದರೆ ಅವರು ಒಬ್ಬರಾಗಿದ್ದಾರೆ ಮತ್ತು ಕೇವಲ ಮದುವೆಯ  ಫಾರ್ಮಾಲಿಟಿ ಮಾಡಬೇಕಾಗಿದೆ. ಮತ್ತು ಅವರು ಮದುವೆಯಾಗುವ ಮೊದಲು ಅವರು ಹೇಗೆ ಜೀವನದಲ್ಲಿ ಇರಬೇಕೆಂದು ಯೋಚಿಸಿದ್ದಾರೆ'.
 

56

'ಸಿದ್ಧಾರ್ಥ್ ಮತ್ತು ಕಿಯಾರಾ ಅವರು ಶೀಘ್ರದಲ್ಲೇ ಜಂಟಿಯಾಗಿ ವಾಸಿಸಲು ಅವರಿಗೆ  ಉತ್ತಮವಾದ ಸ್ಥಳವನ್ನು ಹೊಂದಿರುವ ಹೊಸ ಮನೆಯನ್ನು ವೀಕ್ಷಿಸಲು ಒಪ್ಪಿಕೊಂಡಿದ್ದಾರೆ,  ಅವರಿಗೆ ಯಾವುದೇ ಸರಿಯಾದ ಮನೆ ಸಿಗದಿದ್ದಲಿ  ಕಿಯಾರಾ ಸಿದ್ಧಾರ್ಥ್ ಅವರ ಬಾಂದ್ರಾ ಮನೆಗೆ ಸ್ಥಳಾಂತರಗೊಳ್ಳಬಹುದು. ಮತ್ತು ಅವರು ಒಟ್ಟಿಗೆ ವಾಸಿಸಲು ಪ್ರಾರಂಭಿಸುತ್ತಾರೆ' ಎಂದು ಮೂಲ ಬಹಿರಂಗಪಡಿಸಿದೆ.

66

ಈ ಜೋಡಿಯ ಕೆಲಸ ಬಗ್ಗೆ ಹೇಳುವುದಾದರೆ, ಸಿದ್ ಮತ್ತು ಕಿಯಾರಾ ಶೀಘ್ರದಲ್ಲೇ ಶಶಾಂಕ್ ಖೈತಾನ್ ನಿರ್ದೇಶನದ ರೊಮ್ಯಾಂಟಿಕ್ ಕಾಮಿಡಿಯಲ್ಲಿ ಪರದೆಯನ್ನು ಹಂಚಿಕೊಳ್ಳಲಿದ್ದಾರೆ. ತಮ್ಮ ಮೊದಲ ಸಿನಿಮಾ ಶೆರ್ಷಾದ ವಾರ್ಷಿಕೋತ್ಸವದಂದು, , ಸಿದ್ಧಾರ್ಥ್ ಮತ್ತು ಕಿಯಾರಾ  ಒಂದಾಗುವ ಉದ್ದೇಶವನ್ನು ವೈಯಕ್ತಿಕವಾಗಿ  ಘೋಷಿಸಿದರು

Read more Photos on
click me!

Recommended Stories