ಸಾವಿನಲ್ಲೂ ಸಾರ್ಥಕತೆ: ಕಿರುತೆರೆ ನಟಿ ವೈಶಾಲಿ ನೇತ್ರದಾನ ಮಾಡಿದ ಪೋಷಕರು

Published : Oct 21, 2022, 03:51 PM IST

ಆತ್ಮಹತ್ಯೆ ಮಾಡಿಕೊಂಡ ಕಿರುತೆರೆ ನಟಿ ವೈಶಾಲಿ. ನೇತ್ರದಾನ ಮಾಡಿದ ಪೋಷಕರಿಗೆ ಸಲಾಂ ಎಂದ ನೆಟ್ಟಿಗರು...

PREV
17
ಸಾವಿನಲ್ಲೂ ಸಾರ್ಥಕತೆ: ಕಿರುತೆರೆ ನಟಿ ವೈಶಾಲಿ ನೇತ್ರದಾನ ಮಾಡಿದ ಪೋಷಕರು

ಹಿಂದಿ ಕಿರುತೆರೆ ಜನಪ್ರಿಯ ನಟಿ ವೈಶಾಲಿ ಟಕ್ಕರ್ ಅಕ್ಟೋಬರ್ 16ರಂದು ಆತ್ಮಹತ್ಯೆಗೆ ಶರಣಾಗಿದ್ದರು. ಪೋಸ್ಟ್ ಮಾರ್ಟಂ ನಡೆಸಿ ಅಂದೇ ಅಂತ್ಯ ಸಂಸ್ಕಾರ ಮಾಡಲಾಗಿತ್ತು. 

27

ಪೋಸ್ಟ್ ಮಾರ್ಟಂ ಸಮಯದಲ್ಲಿ ವೈಶಾಲಿ ಪೋಷಕರು ನೇತ್ರದಾನ ಮಾಡಿದ್ದಾರೆ ಎನ್ನುವ ಸುದ್ದಿ ಹೊರ ಬಂದಿದೆ. ವೈಶಾಲಿಗೆ ಕಣ್ಣು ಅಂದ್ರೆ ತುಂಬಾನೇ ಇಷ್ಟವಂತೆ.

37

 'ವೈಶಾಲಿಗೆ ಅವರಿಗೆ ಕಣ್ಣು ತುಂಬಾನೇ ಇಷ್ಟ ನಾನು ಸತ್ತ ಮೇಲೆ ಕಣ್ಣು ದಾನ ಮಾಡಬೇಕು ಎಂದು ಆಗಾಗ ಹೇಳುತ್ತಿದ್ದಳು. ಈ ವಿಚಾರದ ಬಗ್ಗೆ ಅವರ ತಾಯಿ ಜೊತೆ ಚರ್ಚೆ ಮಾಡಿದ್ದರು' 

47

 'ವೈಶಾಲಿ ಅಂತ್ಯ ಸಂಸ್ಕಾರದ ದಿನವೇ ಪೋಷಕರು ನೇತ್ರದಾನ ಮಾಡಿದ್ದಾರೆ. ಆಕೆಯ ಕಣ್ಣಿನ ಮೂಲಕ ಮತ್ತೊಬ್ಬರು ಈ ಸುಂದರವಾದ ಪ್ರಪಂಚ ನೋಡಲಿ' ಎಂದು ವೈಶಾಲಿ ಸಹೋದರ ಮಾಧ್ಯವೊಂದಕ್ಕೆ ಹೇಳಿದ್ದಾರೆ.

57

'ನಿನ್ನ ಮದುವೆಯಾಗಲು ಬಿಡುವುದಿಲ್ಲ, ಬೇರೆಯವರ ಮನೆ ತುಂಬಿಕೊಳ್ಳಲು ಬಿಡುವುದಿಲ್ಲ ಎಂದು ಆತ ಆಕೆಗೆ ಯಾವಾಗಲೂ ಹೆದರಿಸುತ್ತಿದ್ದ. ಡೈರಿಯಲ್ಲಿ ವೈಶಾಲಿ ಸಂಬಂಧದ ಕುರಿತಾಗಿ ಎಲ್ಲವನ್ನೂ ಬರೆದಿಟ್ಟಿದ್ದಾಳೆ'

67

 'ಯಾವ ಹುಡುಗನ ಜೊತೆಗೆ ನಿಶ್ಚಿತಾರ್ಥವಾಗಿತ್ತೋ ಆ ಹುಡುಗನಿಗೆ ರಾಹುಲ್‌ ಮೆಸೇಜ್‌ ಮಾಡುತ್ತಿದ್ದ. ವೈಶಾಲಿಗೆ ಬೆದರಿಕೆ ಹಾಕುತ್ತಿದ್ದ," ಎಂದು ವೈಶಾಲಿ ಮದುವೆ ಆಗಬೇಕಿದ್ದ ಹುಡುಗ ನೀರಜ್‌ ಹೇಳಿದ್ದಾರೆ.

77

ವೈಶಾಲಿ ಒಂದು ಪುಸ್ತಕವೊಂದರಲ್ಲಿ ತಮ್ಮ ಪ್ರೀತಿ, ಹಣಕಾಸು ಮತ್ತು ಜೀವನದ ಬಗ್ಗೆ ಬರೆದುಕೊಂಡಿದ್ದರು.  ಮದುವೆ ಮುರಿದು ಬಿದ್ದ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾ ಅಥವಾ ಇದು ಕೊಲೆನಾ ಎಂದು ತನಿಖೆ ನಡೆಯುತ್ತಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories