ಈ ವರ್ಷವೇ ಆಥಿಯಾ ಶೆಟ್ಟಿ, ಕೆಎಲ್ ರಾಹುಲ್ ಹಸೆಮಣೆ ಏರ್ತಾರಾ?

Suvarna News   | Asianet News
Published : Jan 24, 2022, 06:18 PM IST

ಟೀಮ್‌ ಇಂಡಿಯಾದ ಕ್ಯಾಪ್ಟನ್‌ ಕೆಎಲ್‌ ರಾಹುಲ್‌ (KL Rahul) ಹಾಗೂ ಸುನೀಲ್‌ ಶೆಟ್ಟಿ (Suniel Shetty) ಪುತ್ರಿ ಅಥಿಯಾ ಶೆಟ್ಟಿ (Athiya Shetty) ಸಂಬಂಧದ ಬಗ್ಗೆ ರೂಮರ್‌ಗಳು ಬಹಳ ಕಾಲದಿಂದಲೂ ಕೇಳಿ ಬರುತ್ತಿವೆ. ಈವರೆಗೆ ಈ ಜೋಡಿ ಅಧಿಕೃತವಾಗಿ ತಮ್ಮ ರಿಲೆಷನ್‌ಶಿಪ್‌ ಬಗ್ಗೆ ಏನೂ ಹೇಳಿಲ್ಲ. ಈ ನಡುವೆ ಅಥಿಯಾ ಶೆಟ್ಟಿ ಮತ್ತು ಕೆ ಎಲ್‌ ರಾಹುಲ್‌ 2022 ರಲ್ಲಿ ಮದುವೆಯಾಗುತ್ತಿದ್ದಾರೆ ಎಂದು ವರದಿಗಳು ಬಂಧಿವೆ. ಈ ಬಗ್ಗೆ ಸುನೀಲ್‌ ಶೆಟ್ಟಿ ಏನು ಹೇಳಿದ್ದಾರೆ ನೋಡಿ. 

PREV
16
ಈ ವರ್ಷವೇ ಆಥಿಯಾ ಶೆಟ್ಟಿ, ಕೆಎಲ್ ರಾಹುಲ್ ಹಸೆಮಣೆ ಏರ್ತಾರಾ?

2022 ರಲ್ಲಿ ಅಥಿಯಾ ಶೆಟ್ಟಿ ಮತ್ತು ಕ್ರಿಕೆಟಿಗ ಕೆಎಲ್ ರಾಹುಲ್ (KL Rahul) ವಿವಾಹವಾಗಲಿದ್ದಾರೆ ಎಂಬ ಮಾಧ್ಯಮ ವರದಿಯನ್ನು ಅಥಿಯಾ ತಂದೆ, ಬಾಲಿವುಡ್ ನಟ ಸುನೀಲ್ ಶೆಟ್ಟಿ ತಳ್ಳಿ ಹಾಕಿದ್ದಾರೆ. ರಾಷ್ಟ್ರೀಯ ಪತ್ರಿಕೆಯೊಂದು ಈ ಬಗ್ಗೆ ವರದಿ ಮಾಡಿತ್ತು. ಈ ಬಗ್ಗೆ ಟ್ವೀಟ್ ಮಾಡಿ ಸುನೀಲ್ ಶೆಟ್ಟಿ ಟ್ವೀಟ್ ಮಾಡಿದ್ದಾರೆ.
 

26

'@Bollyhungama ಅವರ ಈ ಲೇಖನವನ್ನು ನೋಡಿದೆ ಮತ್ತು ದುಃಖ ಪಡಬೇಕಾ ಅಥವಾ ಖುಷಿ ಪಡಬೇಕೋ ಎಂದು ಗೊತ್ತಾಗುತ್ತಿಲ್ಲ. ಯಾವುದೇ ಸತ್ಯವನ್ನು ಪರಿಶೀಲಿಸುವ ಮೊದಲು 'ಸ್ಕೂಪ್' ಮಾಡುವ ಅಗತ್ಯವಿದೆ. ಈ ರೀತಿಯ ಬೇಜವಾಬ್ದಾರಿ ವರದಿಯು ಪತ್ರಿಕೋದ್ಯಮದ ವಿಶ್ವಾಸಾರ್ಹತೆಯನ್ನು ಕುಗ್ಗಿಸುತ್ತದೆ.   #bollywoodhungama ನೀವು ಇದಕ್ಕಿಂತ ಉತ್ತಮರು' ಎಂದು ಸುನೀಲ್ ಶೆಟ್ಟಿ ಟ್ವೀಟ್ ಮಾಡಿದ್ದಾರೆ.

36

ಸುನೀಲ್ ಶೆಟ್ಟಿ ಅವರ ಮಗ ಅಹಾನ್ ಶೆಟ್ಟಿ ಮದುವೆ ಬಗ್ಗೆಯೂ ವರದಿ ಮಾಡಲಾಗಿದೆ. ಅವರು ತಾನಿಯಾ ಶ್ರಾಫ್ ಅವರೊಂದಿಗೆ ಸಂಬಂಧ ಹೊಂದಿದ್ದಾರೆ ಎನ್ನಲಾಗುತ್ತಿದೆ. ತಾನಿಯಾ ಶ್ರಾಫ್ ಜೊತೆಗಿನ ಸಂಪರ್ಕದ ಬಗ್ಗೆ ಅಹಾನ್ ಬಹಿರಂಗಪಡಿಸಿದ್ದಾರೆ. ಸುಮಾರು ಒಂದು ದಶಕದಿಂದ ಇಬ್ಬರೂ ಒಟ್ಟಿಗೆ ಇದ್ದಾರೆ. ಕಳೆದ ವರ್ಷ,  ಹುಟ್ಟುಹಬ್ಬದಂದು, ' ತನ್ನ ನೆಚ್ಚಿನ ವ್ಯಕ್ತಿ' ಎಂದು ಆಹಾನ್‌ ಹೇಳಿ ಕೊಂಡಿದ್ದರು.

46

ಅಥಿಯಾ ಅವರು ಭಾರತೀಯ ಕ್ರಿಕೆಟಿಗ ಕೆಎಲ್ ರಾಹುಲ್ ಅವರೊಂದಿಗೆ ಡೇಟಿಂಗ್ (Dating) ಮಾಡುತ್ತಿದ್ದಾರೆ ಎಂದು ವರದಿಯಾಗಿದೆ ಮತ್ತು ಇಬ್ಬರೂ ಅನೇಕ ಸಂದರ್ಭಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಅವರು ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಫೋಟೊಗಳನ್ನು ಹಂಚಿಕೊಳ್ಳುತ್ತಿರುವುದು ಕಂಡುಬಂದಿದೆ. ಆದರೆ ಅವರಲ್ಲಿ ಯಾರೂ ಅಧಿಕೃತವಾಗಿ ತಮ್ಮ ಸಂಬಂಧವನ್ನು ಖಚಿತಪಡಿಸಿಲ್ಲ.

56

ಅಹಾನ್ ಅವರ ವಕ್ತಾರರು ವದಂತಿಗಳನ್ನು ಆಧಾರ ರಹಿತ ಎಂದು ಕರೆದಿದ್ದಾರೆ. 'ನಾನು ಅಹಾನ್‌ನ ಗೆಳತಿಯನ್ನು ಗೌರವಿಸುತ್ತೇನೆ, ಮತ್ತು ಆಥಿಯಾ ಡೇಟ್‌ ಮಾಡುವನನ್ನು ನಾನೂ ಆರಾಧಿಸುತ್ತೇನೆ. ನನಗೆ ಅದರಲ್ಲಿ ಯಾವುದೇ
ಸಮಸ್ಯೆ ಇಲ್ಲ, ಮನಾಗೆ ಸಹ  ಅದರ ಬಗ್ಗೆ ಸಮಸ್ಯೆ ಇಲ್ಲ. ಅವರು ಸಂತೋಷವಾಗಿದ್ದಾರೆ,' ಎಂದು ಹಳೆಯ ಸಂದರ್ಶನವೊಂದರಲ್ಲಿ, ಸುನೀಲ್ ಶೆಟ್ಟಿ ಒಮ್ಮೆ ತಮ್ಮ ಮಕ್ಕಳ ಸಂಬಂಧಗಳ ಬಗ್ಗೆ ಹೇಳಿ ಕೊಂಡಿದ್ದರು.

66

ಮಕ್ಕಳನ್ನು ಪ್ರೀತಿಸುತ್ತೇವೆ ಮತ್ತು  ಅವರು ಡೇಟಿಂಗ್ ಮಾಡುತ್ತಿರುವವರನ್ನೂ ನಾವು ಗೌರವಿಸುತ್ತೇವೆ  ವೃತ್ತಿಗಿಂತ ಜೀವನದಲ್ಲಿ ಸಂತೋಷವಾಗಿರುವುದು ಇಂದು ಬಹಳ ಮುಖ್ದ ಎಂದು ಭಾವಿಸುತ್ತೇನೆ. ಏಕೆಂದರೆ ಅದು ಈಗಿನ ಅಗತ್ಯವೆಂದಿದ್ದಾರೆ, ಕರಾವಳಿ ಮೂಲದ ಬಾಲಿವುಡ್ ನಟ ಸುನೀಲ್ ಶೆಟ್ಟಿ.

Read more Photos on
click me!

Recommended Stories