ಅರ್ಚನಾ ಪುರಾನ್ ಸಿಂಗ್ ಕಳೆದ 35 ವರ್ಷಗಳಿಂದ ಮನರಂಜನಾ ಉದ್ಯಮದಲ್ಲಿ ಸಕ್ರಿಯರಾಗಿದ್ದಾರೆ. ಅವರು 1987 ರ ಟೆಲಿಫಿಲ್ಮ್ 'ಅಭಿಷೇ.ಕ್' ನಲ್ಲಿ ಆದಿತ್ಯ ಪಾಂಚೋಲಿಯವರೊಂದಿಗೆ ಪಾದಾರ್ಪಣೆ ಮಾಡಿದರು. ನಂತರ ಅರ್ಚನಾ ಅವರು 'ಜಲ್ವಾ', 'ಅಗ್ನಿಪಥ್', 'ಸೌದಾಗರ್', 'ಶೋಲಾ ಔರ್ ಶಬನಮ್', 'ಕುಚ್ ಕುಚ್ ಹೋತಾ ಹೈ', 'ಮೊಹಬ್ಬತೇನ್', 'ಕ್ರಿಶ್', 'ದೇ ದಾನಾ ದಾನ್' ಮತ್ತು 'ಬೋಲ್ ಬಚ್ಚನ್' ಚಿತ್ರಗಳಲ್ಲಿ ಕಾಣಿಸಿಕೊಂಡರು