ಅರ್ಬಾಜ್ ಖಾನ್ To ಸೈಫ್ ಅಲಿ ಖಾನ್… ವಯಸ್ಸು 50 ದಾಟಿದ ಬಳಿಕ ತಂದೆಯಾಗಿ ಭಡ್ತಿ ಪಡೆ ಬಾಲಿವುಡ್ ಸ್ಟಾರ್ಸ್

Published : Oct 08, 2025, 12:43 PM IST

ಬಾಲಿವುಡ್ ಸ್ಟಾರ್’ಗಳ ಜೀವನದಲ್ಲಿ ಲವ್, ಮದುವೆ, ಎರಡನೇ ಮದುವೆ, ಬ್ರೇಕಪ್ ಎಲ್ಲವೂ ಕಾಮನ್. ಇಲ್ಲಿನ ಹೆಚ್ಚಿನ ನಟರು ಎರಡನೇ ಮದುವೆಯಾಗಿ 50ನೇ ವಯಸ್ಸಿನಲ್ಲಿ ತಂದೆಯಾದವರು ಹಲವರಿದ್ದಾರೆ. ಅರ್ಬಾಜ್ ಖಾನ್ To ಸೈಫ್ ಅಲಿ ಖಾನ್ ಯಾರೆಲ್ಲಾ ಈ ಲಿಸ್ಟಲ್ಲಿ ಇದ್ದಾರೆ ನೋಡಿ. 

PREV
18
50 ದಾಟಿದ ಬಳಿಕ ತಂದೆಯಾದ ನಟರು

ಇತ್ತೀಚಿನ ದಿನಗಳಲ್ಲಿ 20-30 ವರ್ಷದೊಳಗೆ ಮದುವೆಯಾಗಿ ಮಕ್ಕಳಾಗಬೇಕು ಎನ್ನುವ ಬಗ್ಗೆ ಎಲ್ಲರು ಮಾತನಾಡುತ್ತಾರೆ. ಆದರೆ ಈ ಬಾಲಿವುಡ್ ಸ್ಟಾರ್ಸ್ ತಮಗೆ 50 ವರ್ಷ ದಾಟಿದ ನಂತರ ತಂದೆಯಾಗುವ ಮೂಲಕ, ಮಕ್ಕಳನ್ನು ಪಡೆಯೋಕೆ ವಯಸ್ಸಿನ ಗಡಿ ಇಲ್ಲ ಎಂದರು.

28
ಸೈಫ್ ಅಲಿ ಖಾನ್

ಬಾಲಿವುಡ್ ನ ನವಾಬ್ ಸೈಫ್ ಅಲಿ ಖಾನ್ ಅವರ ಮಗಳು ಸಾರಾ ಅಲಿ ಖಾನ್ ಜನಿಸಿದಾಗ ಅವರಿಗೆ ಕೇವಲ 25 ವರ್ಷ ವಯಸ್ಸಾಗಿತ್ತು. ಸೈಫ್ 46 ನೇ ವಯಸ್ಸಿನಲ್ಲಿ ತಮ್ಮ ಮತ್ತು ಕರೀನಾ ಅವರ ಮೊದಲ ಮಗ ತೈಮೂರ್ ಅಲಿ ಖಾನ್ ಗೆ ಮತ್ತೆ ತಂದೆಯಾದರು, ಮತ್ತು ಅವರ ಕಿರಿಯ ಮಗ ಜಹಾಂಗೀರ್ ಜನಿಸಿದಾಗ, ಸೈಫ್ ಗೆ 50 ವರ್ಷ ವಯಸ್ಸಾಗಿತ್ತು.

38
ಅರ್ಬಾಜ್ ಖಾನ್

ನಟ ಮತ್ತು ಚಲನಚಿತ್ರ ನಿರ್ಮಾಪಕ ಅರ್ಬಾಜ್ ಖಾನ್ ನಟಿ ಮಲೈಕಾ ಅರೋರಾರಿಂದ ಡಿವೋರ್ಸ್ ಪಡೆದ ಬಳಿಕ ಸೌರಾ ಖಾನ್ ಜೊತೆ ಎರಡನೇ ಬಾರಿಗೆ ವಿವಾಹವಾದರು ಮತ್ತು ಈಗ 57 ನೇ ವಯಸ್ಸಿನಲ್ಲಿ ಮತ್ತೆ ತಂದೆಯಾಗಿದ್ದಾರೆ. ಅವರಿಗೆ ಮೊದಲ ಮದುವೆಯಿಂದ ಒಬ್ಬ ಮಗನಿದ್ದಾನೆ.

48
ಪ್ರಕಾಶ್ ರಾಜ್

ದಕ್ಷಿಣ ಭಾರತ ಮತ್ತು ಹಿಂದಿ ಸಿನಿಮಾದಲಿ ತಮ್ಮ ನಟನೆಯಿಂದ ಸಹಸ್ರಾರು ಅಭಿಮಾನಿಗಳನ್ನು ಪಡೆದ ನಟ ಪ್ರಕಾಶ್ ರಾಜ್ 2010 ರಲ್ಲಿ ನೃತ್ಯ ಸಂಯೋಜಕಿ ಪೋನಿ ವರ್ಮಾ ಅವರನ್ನು ವಿವಾಹವಾದರು. ಅವರ ಮಾಜಿ ಪತ್ನಿ ಲಲಿತಾ ಕುಮಾರಿ ಅವರಿಂದ ವಿಚ್ಛೇದನ ಪಡೆದ ನಂತರ ಇದು ಅವರು ಎರಡನೇ ಬಾರಿ ಮದುವೆಯಾಗಿದ್ದರು. ಪ್ರಕಾಶ್ ಗೆ 50 ವರ್ಷವಾಗಿದ್ದಾಗ, ಪತ್ನಿ ಪೋನಿ 2015 ರಲ್ಲಿ ಮಗ ವೇದಾಂತ್ ಗೆ ಜನ್ಮ ನೀಡಿದರು.

58
ಅರ್ಜುನ್ ರಾಂಪಾಲ್

ಅರ್ಜುನ್ ರಾಂಪಾಲ್ ಅವರಿಗೆ ಮೊದಲ ಮದುವೆಯಿಂದ ಇಬ್ಬರು ಹೆಣ್ಣುಮಕ್ಕಳಿದ್ದಾರೆ. ಮೊದಲ ಪತ್ನಿಯಿಂದ ವಿಚ್ಛೇದನ ಪಡೆದ ನಂತರ, ಅವರು ದಕ್ಷಿಣ ಆಫ್ರಿಕಾದ ಮಾಡೆಲ್ ಗೇಬ್ರಿಯೆಲಾ ಡೆಮೆಟ್ರಿಯೇಡ್ಸ್ ಅವರೊಂದಿಗೆ ರಿಲೇಶನ್ ಶಿಪ್ ನಲ್ಲಿದ್ದು, ತಮ್ಮ 50ನೇ ವಯಸ್ಸಿನಲ್ಲಿ ಅವರು ಗಂಡು ಮಗುವಿನ ತಂದೆಯಾಗಿದ್ದರು.

68
ಸಂಜಯ್ ದತ್

ಸಂಜಯ್ ದತ್ ಮೂರು ಬಾರಿ ವಿವಾಹವಾದರು ಮತ್ತು 2010 ರಲ್ಲಿ 52 ವರ್ಷದವರಾಗಿದ್ದಾಗ ಅವರ ಮೂರನೇ ಪತ್ನಿ ಮಾನ್ಯತಾ ಅವರಿಂದ ಶಹರಾನ್ ಮತ್ತು ಇಕ್ರಾ ಎಂಬ ಅವಳಿ ಮಕ್ಕಳು ಜನಿಸಿದ್ದರು.

78
ರಾಜೇಶ್ ಖಟ್ಟರ್

ಜನಪ್ರಿಯ ನಟ ಮತ್ತು ಇಶಾನ್ ಖಟ್ಟರ್ ಅವರ ತಂದೆ, ರಾಜೇಶ್ ಖಟ್ಟರ್ ಅವರು ತಮ್ಮ ಎರಡನೇ ಮಗುವಾದ ವನರಾಜ್ ಕೃಷ್ಣ ಅವರನ್ನು 52 ನೇ ವಯಸ್ಸಿನಲ್ಲಿ ತಮ್ಮ ಎರಡನೇ ಪತ್ನಿ ವಂದನಾ ಸಜ್ನಾನಿ ಅವರಿಂದ ಪಡೆದರು.

88
ಪ್ರಭುದೇವ

ಭಾರತದ ಮೈಕೆಲ್ ಜಾಕ್ಸನ್ ಎಂದೇ ಖ್ಯಾತರಾಗಿರುವ ಪ್ರಭುದೇವ, ನಾಲ್ಕು ಮಕ್ಕಳ ತಂದೆ. ಅವರ ಮೊದಲ ಮದುವೆಯಿಂದ ಮೂರು ಮಕ್ಕಳು. ಅವರು 2008 ರಲ್ಲಿ ತಮ್ಮ ಹಿರಿಯ ಮಗನನ್ನು ಕ್ಯಾನ್ಸರ್ ನಿಂದ ಕಳೆದುಕೊಂಡರು. ಪ್ರಭು 2023 ರಲ್ಲಿ 50 ನೇ ವಯಸ್ಸಿನಲ್ಲಿ ನಾಲ್ಕನೇ ಬಾರಿಗೆ ತಂದೆಯಾದರು.

Read more Photos on
click me!

Recommended Stories