ಒಂದು ಸಿನಿಮಾ ಹಿಟ್ ಆಗಬೇಕು ಅಂದ್ರೆ ಅದಕ್ಕೆ ಬಿಗ್ ಬಜೆಟ್ ಬೇಕಾಗಿಲ್ಲ, ಬದಲಾಗಿ ಒಂದೊಳ್ಳೆ ಕಥೆ ಇರಬೇಕು. ಕತೆ ಚೆನ್ನಾಗಿ ಇದ್ರೆ, ಖಂಡಿತವಾಗಿಯೂ ಜನರು ಥಿಯೇಟರ್ ಗೆ ಬಂದು ನೋಡುತ್ತಾರೆ. ಸಿನಿಮಾವನ್ನು ಖಂಡಿತವಾಗಿಯೂ ಗೆಲ್ಲಿಸುತ್ತಾರೆ. ಇಲ್ಲಿವೆ Content is King ಎಂದ ಹತ್ತು ಸಿನಿಮಾಗಳು.
ಸಿನಿಮಾ ಹಿಟ್ ಆಗಲು ದೊಡ್ಡ ಬಜೆಟ್ ಬೇಕು ಎಂದು ಹೇಳೋದೆಲ್ಲಾ ಸುಳ್ಳು. ಯಾಕಂದ್ರೆ ಯಾವ ಸಿನಿ ರಸಿಕನೂ ಕೂಡ ಬಜೆಟ್ ನೋಡಿ ಸಿನಿಮಾ ನೋಡಲು ಬರೋದಿಲ್ಲ. ಬದಲಾಗಿ ಸಿನಿಮಾ ಕಥೆ ಚೆನ್ನಾಗಿದ್ದರೆ ಮಾತ್ರ ಚಿತ್ರಮಂದಿರಕ್ಕೆ ಬಂದು ಸಿನಿಮಾ ಗೆಲ್ಲಿಸುತ್ತಾನೆ. Content is King ಎಂದು ತೋರಿಸಿಕೊಟ್ಟ ಸೂಪರ್ ಹಿಟ್ ಸಿನಿಮಾಗಳ ಲಿಸ್ಟ್ ಇಲ್ಲಿವೆ. ಇದುವರೆಗೂ ನೀವು ಸಿನಿಮಾ ನೋಡಿಲ್ಲ ಅಂದ್ರೆ ನೋಡಿ.
211
ಕಾಂತಾರ
ನಂಬಿಕೆ, ಜಾನಪದ ಆಚರಣೆ, ದೈವ ಇವೆಲ್ಲವೂ ಒಂದು ಸಣ್ಣ ಚಲನಚಿತ್ರವನ್ನು ಸಾಂಸ್ಕೃತಿಕ ವಿದ್ಯಮಾನವನ್ನಾಗಿ ಪರಿವರ್ತಿಸಿತು.16 ಕೋಟಿ ಬಜೆಟ್ ನಲ್ಲಿ ನಿರ್ಮಾಣವಾದ ಈ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಗಳಿಸಿದ್ದು ಬರೋಬ್ಬರಿ 411 ಕೋಟಿ.
311
ಕಾರ್ತಿಕೇಯ 2
ಬಿಗ್ ಸ್ಟಾರ್ ಗಳಿಲ್ಲದ ಸಿನಿಮಾ ಇದು. ನಿಗೂಢ ರಹಸ್ಯಗಳನ್ನು ಒಳಗೊಂಡ ಈ ಸಿನಿಮಾ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿತ್ತು.
ಇದು ಆನಿಮೇಟೆಡ್ ಸಿನಿಮಾವಾಗಿದ್ದು, ಅದ್ಭುತವಾದ VFX ನಿಂದ ಜೋರಾಗಿ ಘರ್ಜಿಸಿದ ಪೌರಾಣಿಕ ಕಥೆಯುಳ್ಳ ಸಿನಿಮಾ. 15 ಕೋಟಿ ಈ ಸಿನಿಮಾದ ಬಜೆಟ್, ಆದರೆ ಗಳಿಸಿದ 302 ಕೋಟಿ. ಇದು ಸಿನಿಮಾಗೆ ಸಿಕ್ಕ ಯಶಸ್ಸು.
511
ಮಂಜುಮ್ಮೆಲ್ ಬಾಯ್ಸ್
ಫ್ರೆಂಡ್ ಶಿಪ್, ಸ್ನೇಹ, ಧೈರ್ಯ ಮತ್ತು ಜೀವನದ ಕಥೆ ಇದಾಗಿದೆ. ಕೇವಲ 20 ಕೋಟಿ ಬಜೆಟ್ ನಲ್ಲಿ ನಿರ್ಮಾಣವಾಗಿರುವ ಈ ಸಿನಿಮಾ, ತನ್ನ ಸರಳವಾದ ಆದರೆ ಅದ್ಭುತವಾದ ಚಿತ್ರ ಕಥೆಯಿಂದಾಗಿ ಬಾಕ್ಸ್ ಆಫೀಸ್ ನಲ್ಲಿ 242 ಕೋಟಿ ಗಳಿಸುವಲ್ಲಿ ಯಶಸ್ವಿಯಾಗಿತ್ತು.
611
ದಿ ಕಾಶ್ಮೀರ್ ಫೈಲ್ಸ್
ಕಾಶ್ಮೀರದಲ್ಲಿ ನಡೆದಂತಹ ಸತ್ಯ ಕಥೆಗಳನ್ನು ಆಧರಿಸಿ ಮಾಡಿದಂತಹ ಈ ಸಿನಿಮಾ, ನೋಡುಗರ ಕಣ್ಣಂಚನ್ನು ಒದ್ದೆ ಮಾಡಿತ್ತು. ಆ ಮೂಲಕವೇ ಸಿನಿಮಾಗೆ ಭರ್ಜರಿ ಯಶಸ್ಸು ಸಿಕ್ಕಿತ್ತು. 25 ಕೋಟಿಯಲ್ಲಿ ನಿರ್ಮಾಣವಾದ ಈ ಸಿನಿಮಾ ಗಳಿಸಿದ್ದು 340 ಕೋಟಿ.
711
777 ಚಾರ್ಲಿ
ಒಬ್ಬ ಮನುಷ್ಯ, ನಾಯಿ ಮತ್ತು ಜರ್ನಿಯ ಕುರಿತಾದ ಕಥೆ, ದೇಶದ ಮೂಲೆ ಮೂಲೆಯಲ್ಲಿ ಜನರ ಮನಸ್ಸಿಗೆ ಹಿತ ಅನುಭವವನ್ನು ನೀಡಿದ ಕಥೆ ಇದು. 20 ಕೋಟಿಯ ಈ ಸಿನಿಮಾ ಗಲ್ಲಾ ಪೆಟ್ಟಿಗೆಯಲ್ಲಿ 115 ಕೋಟಿ ದೋಚಿತ್ತು.
811
ದಿ ಕೇರಳ ಸ್ಟೋರಿ
ದಿಟ್ಟ, ಭಾವನಾತ್ಮಕ ಮತ್ತು ಆಳವಾಗಿ ಪ್ರಭಾವ ಬೀರುವಂತಹ ಕೇರಳದಲ್ಲಿ ನಡೆದ ಸತ್ಯ ಘಟನೆಗಳನ್ನು ಆಧಾರಿಸಿ ಮಾಡಿದಂತಹ ಸಿನಿಮಾ ಇದು.ಬಜೆಟ್ 15 ಕೋಟಿ, ಗಳಿಕೆ 303 ಕೋಟಿ.
911
ಸೈಯಾರ
ಶುದ್ಧ ಪ್ರೀತಿಯನ್ನು ತಿಳಿಸುವ ರೊಮ್ಯಾಂಟಿಕ್ ಲವ್ ಸ್ಟೋರಿ ಸೈಯಾರ. ಬಾಲಿವುಡ್ ನ ಈ ಹೊಸ ಚಿತ್ರ 45 ಕೋಟಿಯಲ್ಲಿ ನಿರ್ಮಾಣವಾಗಿದ್ದು, 577 ಕೋಟಿ ಗಳಿಸುವಲ್ಲಿ ಯಶಸ್ವಿಯಾಗಿತ್ತು.
1011
ಸೀತಾ ರಾಮಂ
ಪರದೆಯ ಮೇಲೆ ಪ್ರೀತಿ, ತ್ಯಾಗ, ಜಾತಿ, ಧರ್ಮ, ಗಡಿಗಳು ಮತ್ತು ಭಾಷೆಗಳನ್ನು ಮೀರಿದ ಸುಂದರವಾದ ಪ್ರೇಮ ಕಾವ್ಯವನ್ನು ತೋರಿಸಿದಂತಹ ಕಥೆ ಇದು. 30 ಕೋಟಿಯಲ್ಲಿ ನಿರ್ಮಾಣವಾದ ಈ ಸಿನಿಮಾ ಗಳಿಸಿದ್ದು, 98 ಕೋಟಿ.
1111
ಸು ಫ್ರಮ್ ಸೋ
ಮಹಿಳೆಯ ಮೇಲಿನ ದೌರ್ಜನ್ಯ, ಮೂಢ ನಂಬಿಕೆಯನ್ನು ನಗುವಿನ ಮೂಲಕವೇ ಕಟ್ಟಿಕೊಟ್ಟ ಹಾಸ್ಯ ಚಿತ್ರ ಸು ಫ್ರಂ ಸೋ. ಕೇವಲ 6 ಕೋಟಿಯಲ್ಲಿ ತಯಾರಾದ ಸಿನಿಮಾ ಇದು, ಆದರೆ ಇದು ರಾಜ್ಯದ ಪರ ರಾಜ್ಯದ ಜನರನ್ನು ಎಷ್ಟೊಂದು ನಗೆ ಗಡಲಲ್ಲಿ ತೇಲಾಡಿಸಿತ್ತು ಎಂದರೆ ಸಿನಿಮಾ ಗಳಿಸಿದ್ದು ಬರೋಬ್ಬರಿ 123 ಕೋಟಿ. ಚಂದನವನದ ಮೊದಲ ಬ್ಲಾಕ್ ಬಸ್ಟರ್ ಸಿನಿಮಾ ಇದು.