ಇತ್ತೀಚೆಗೆ ನಡೆದ ಸಂದರ್ಶನದಲ್ಲಿ ರಹ್ಮಾನ್ ಅವರು, ಸಾರ್ವಜನಿಕ ಜೀವನವನ್ನು ಆಯ್ಕೆ ಮಾಡುವುದು ಉದ್ದೇಶಪೂರ್ವಕ. ಆದ್ದರಿಂದ ಪ್ರತಿಯೊಬ್ಬರೂ ವಿಮರ್ಶೆಗೆ ಒಳಗಾಗುತ್ತಾರೆ. ಅತಿದಾರಿದ್ರರಿಂದ ಹಿಡಿದು ದೇವರುಗಳವರೆಗೆ ಎಲ್ಲರೂ ವಿಮರ್ಶೆಗೆ ಒಳಗಾಗುತ್ತಾರೆ, ಹಾಗಾದರೆ ನಾನು ಯಾರು?' ಎಂದು ಹೇಳಿದರು.
ತಮ್ಮ ವೈಯಕ್ತಿಕ ಜೀವನದ ಬಗ್ಗೆ ಟೀಕೆ ಮಾಡುವವರಿಗೆ ಪ್ರತಿಕ್ರಿಯೆ ನೀಡುವ ಬದಲು, 'ನಾನು ಯಾರಾದರೂ ಕುಟುಂಬದ ಬಗ್ಗೆ ಕೆಟ್ಟದಾಗಿ ಮಾತನಾಡಿದರೆ, ಯಾರಾದರೂ ನನ್ನ ಕುಟುಂಬದ ಬಗ್ಗೆ ಮಾತನಾಡುತ್ತಾರೆ. ನಾವು ಭಾರತೀಯರು ಇದನ್ನು ನಂಬುತ್ತೇವೆ. ಯಾರೂ ಅನಗತ್ಯವಾಗಿ ಮಾತನಾಡಬಾರದು, ಏಕೆಂದರೆ ಪ್ರತಿಯೊಬ್ಬರಿಗೂ ಸಹೋದರಿ, ಪತ್ನಿ, ತಾಯಿ ಇದ್ದಾರೆ' ಎಂದು ಹೇಳಿದರು.