ರೆಟ್ರೋ ಲುಕ್‌ನಲ್ಲಿ ಮಿಂಚಿದ ನಟಿ ಅನುಷ್ಕಾ ಶರ್ಮಾ; ಫೋಟೋ ವೈರಲ್

Published : Dec 04, 2022, 03:25 PM ISTUpdated : Dec 06, 2022, 02:36 PM IST

ನಟಿ ಅನುಷ್ಕಾ ಶರ್ಮಾ ರೆಟ್ರೋ ಶೈಲಿಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

PREV
17
ರೆಟ್ರೋ ಲುಕ್‌ನಲ್ಲಿ ಮಿಂಚಿದ ನಟಿ ಅನುಷ್ಕಾ ಶರ್ಮಾ; ಫೋಟೋ ವೈರಲ್

ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಮತ್ತೆ ಸಿನಿಮಾಗೆ ವಾಪಾಸ್ ಆಗಿದ್ದಾರೆ. ಮದುವೆ, ಮಗು ಅಂತ ಸಿನಿಮಾಗಳಿಂದ ಕೊಂಚ ಅಂತರ ಕಾಯ್ದುಕೊಂಡಿದ್ದ ಅನುಷ್ಕಾ ಇದೀಗ ಮತ್ತೆ ಪಾವಾಸ್ ಆಗಿದ್ದಾರೆ. ಅಂದಹಾಗೆ ಅನುಷ್ಕಾ ಅವರ ರೆಟ್ರೋ ಶೈಲಿಯ ಲುಕ್ ಸಿಕ್ಕಾಪಟ್ಟೆ ವೈರಲ್ ಆಗಿದೆ. 

27

ವರ್ಷಗಳ ಬಳಿಕ ಅನುಷ್ಕಾ ಅವರನ್ನು ರೆಟ್ರೋ ಶೈಲಿಯಲ್ಲಿ ನೋಡಿ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಅಂದಹಾಗೆ ವಿರಾಟ್ ಪತ್ನಿಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿವೆ. 

37

ಅಂದಹಾಗೆ ಅನುಷ್ಕಾ ರೆಟ್ರೋ ಲುಕ್‌ನಲ್ಲಿ ಕಾಣಿಸಿಕೊಂಡಿದ್ದು ಕಲಾ ಸಿನಿಮಾಗಾಗಿ. ಕಲಾ ನಟಿ 
ತೃಪ್ತಿ ದಿಮ್ರಿ ಮತ್ತು ಇರ್ಫಾನ್ ಖಾನ್ ಪುತ್ರ ಬಾಬಿಲ್ ಖಾನ್ ನಟನೆಯ ಸಿನಿಮಾ. ಈ ಸಿನಿಮಾ ನೆಟ್ ಫ್ಲಿಕ್ಸ್ ನಲ್ಲಿ ರಿಲೀಸ್ ಆಗಿದ್ದು ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಈ ಸಿನಿಮಾದಲ್ಲಿ ಅನುಷ್ಕಾ ಅತಿಥಿ ಪಾತ್ರದಲ್ಲಿ ಮಿಂಚಿದ್ದಾರೆ. 

47

ಕಲಾ ಚಿತ್ರದಲ್ಲಿ ಅನುಷ್ಕಾ ಕಪ್ಪು-ಬಿಳುಪು ಮಾಂಟೇಜ್‌ನಲ್ಲಿ ಮಿಂಚಿದ್ದಾರೆ.  1940 ರ ದಶಕದ ನಾಯಕಿಯ ಪಾತ್ರ ಮಾಡಿದ್ದಾರೆ. ಕಲಾ ಸಿನಿಮಾದ ಒಂದು ಹಾಡಿನಲ್ಲಿ ಅನುಷ್ಕಾ ಕಾಣಿಸಿಕೊಂಡಿದ್ದಾರೆ.  ಅನುಷ್ಕಾ ಎಂಟ್ರಿ ಈ ಸಿನಿಮಾಗೆ ಮತ್ತಷ್ಟು ಬಲ ಬಂದಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅಂದಹಾಗೆ ಅನುಷ್ಕಾ ಶರ್ಮಾ ಕೂಡ ಕಲಾ ಸಿನಿಮಾತಂಡವನ್ನು ಹಾಡಿಹೊಗಳಿದರು. 

57

ಅನುಷ್ಕಾ ಸಾಮಾಜಿಕ ಜಾಲತಾಣದಲ್ಲಿ, 'ತಾಯಿಯ ಪ್ರೀತಿಗಾಗಿ ಮಗಳ ಹಂಬಲ. ಕಲಾ ಒಂದು ಕಲಾಕೃತಿ. ಇದು ಹೃದಯವಿದ್ರಾವಕ ಘಟನೆ. ಈ ಸಿನಿಮಾ ಹಿಂದೆಂದೂ ಮಾಡದ ರೀತಿಯಲ್ಲಿ ಭಾವನಾತ್ಮಕವಾಗಿ ಮೂಡಿಬಂದಿದೆ. 

67

ನಟಿ ಅನುಷ್ಕಾ ಶರ್ಮಾ 2018 ನಂತರ ಸಿನಿಮಾಗಳಲ್ಲಿ ಕಾಣಿಸಿಕೊಂಡಿಲ್ಲ. ಕೊನೆಯದಾಗಿ ಅನುಷ್ಕಾ ಝೀರೋ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ನಂತರ ನಿರ್ಮಾಣದಲ್ಲಿ ತೊಡಗಿಕೊಂಡಿದ್ದರು.

77

ಇದೀಗ ಕಲಾ ಸಿನಿಮಾದ ಅತಿಥಿ ಪಾತ್ರದ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದಾರೆ. ವಿಶೇಷ ಪಾತ್ರವಾದರೂ ಅನುಷ್ಕಾ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ. ಅಭಿಮಾನಿಗಳ ಹೃದಯ ಗೆದ್ದಿದೆ. ಈ ಸಿನಿಮಾ ಜೊತೆಗೆ ಅನುಷ್ಕಾ ಚಕ್ದ ಎಕ್ಸ್‌ಪ್ರೆಸ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. 

Read more Photos on
click me!

Recommended Stories