ಅದೇ ಕಥೆ! ಸ್ವಲ್ಪ ಗ್ಲಾಮರ್‌ ಸೇರಿಸಿರುವ ಬಾಲಿವುಡ್‌ನ ಅನಧಿಕೃತ ರೀಮೇಕ್‌ಗಳು!

Published : Dec 03, 2022, 06:29 PM IST

ರಣವೀರ್ ಸಿಂಗ್ (Ranveer Singh) ಅಭಿನಯದ ಸರ್ಕಸ್ (Cirkus)ಚಿತ್ರದ ಟ್ರೈಲರ್ ಶುಕ್ರವಾರ ಬಿಡುಗಡೆಯಾಗಿದೆ. ರೋಹಿತ್ ಶೆಟ್ಟಿ (Rohit Shetty) ಅವರ  ಈ ಚಿತ್ರ ಇದೇ ತಿಂಗಳ 23 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ. ಇದು ಕಾಮಿಡಿ ಡ್ರಾಮಾ ಆಗಿದೆ ವಾಸ್ತವವಾಗಿ, ಚಿತ್ರದಲ್ಲಿ ರಣವೀರ್ ಸಿಂಗ್ ಮತ್ತು ವರುಣ್ ಶರ್ಮಾ ಇಬ್ಬರೂ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರವು ಬಹಳ ಸಮಯದಿಂದ ಪ್ರಚಾರದಲ್ಲಿದೆ ಮತ್ತು ಇದು ಗುಲ್ಜಾರ್ ಅವರ 1982 ರ ಚಿತ್ರ ಅಂಗೂರ್‌ನ ರೀಮೇಕ್ ಎಂದು ಕೂಡ ಹೇಳಲಾಗುತ್ತಿದೆ. ಅಂಗೂರ್ ಚಿತ್ರದಲ್ಲಿ ಸಂಜೀವ್ ಕುಮಾರ್ ಮತ್ತು ದೇವೇಂದ್ರ ವರ್ಮಾ ಕೂಡ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಆದರೆ, ಸರ್ಕಸ್ ಅಂಗೂರ್ ಚಿತ್ರದ ರಿಮೇಕ್ ಎಂಬ ಬಗ್ಗೆ ಯಾವುದೇ ಅಧಿಕೃತ ಪ್ರಕಟಣೆ ಹೊರಬಿದ್ದಿಲ್ಲ. ಅಂದಹಾಗೆ, ಬಾಲಿವುಡ್‌ನಲ್ಲಿ ಅನಧಿಕೃತವಾಗಿ ರೀಮೇಕ್ ಆಗಿರುವ ಅನೇಕ ಚಲನಚಿತ್ರಗಳಿವೆ.

PREV
19
ಅದೇ ಕಥೆ! ಸ್ವಲ್ಪ ಗ್ಲಾಮರ್‌ ಸೇರಿಸಿರುವ ಬಾಲಿವುಡ್‌ನ ಅನಧಿಕೃತ ರೀಮೇಕ್‌ಗಳು!

ಬಾಲಿವುಡ್‌ನಲ್ಲಿ ಅನೇಕ ಬ್ಲಾಕ್‌ಬಸ್ಟರ್ ಚಿತ್ರಗಳ ಅಧಿಕೃತ ರಿಮೇಕ್‌ಗಳನ್ನು ಮಾಡಲಾಗುತ್ತಿದೆ ಅದೇರೀತಿ ಕೆಲವು ಅನಧಿಕೃತ ರಿಮೇಕ್‌ಗಳನ್ನು ಸಹ ಮಾಡಲಾಗಿದೆ. ಅನೇಕ ಚಿತ್ರಗಳಿವೆ, ಅವುಗಳ ಕಥೆ ಬಹುತೇಕ ಒಂದೇ ಆಗಿರುತ್ತದೆ ಆದರೆ ಅವುಗಳನ್ನು ರೀಮೇಕ್ ಮಾಡಿದಾಗ, ಅದಕ್ಕೆ ಸ್ವಲ್ಪ ಗ್ಲಾಮರ್ ಸೇರಿಸಿ ಹೊಸ ಶೈಲಿಯಲ್ಲಿ ಪ್ರಸ್ತುತಪಡಿಸಲಾಗಿದೆ.

29

ಸಲ್ಮಾನ್ ಖಾನ್ ಮತ್ತು ಮಾಧುರಿ ದೀಕ್ಷಿತ್ ಅವರ ಹಮ್ ಆಪ್ಕೆ ಹೈ ಕೌನ್ ಚಿತ್ರದ ಕಥೆಯ ಕಥಾವಸ್ತುವು 1982 ರ ನದಿಯಾ ಕೆ ಪಾರ್ ಚಿತ್ರದಂತೆಯೇ ಇತ್ತು, ಆದರೆ ಇದಕ್ಕೆ ಸ್ವಲ್ಪ ಗ್ಲಾಮರ್ ಸೇರಿಸಲಾಯಿತು. ಎರಡೂ ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಬ್ಲಾಕ್ಬಸ್ಟರ್ ಎಂದು ಸಾಬೀತಾಯಿತು.


 

39

ಕರೀನಾ ಕಪೂರ್, ಹೃತಿಕ್ ರೋಷನ್ ಮತ್ತು ಅಭಿಷೇಕ್ ಬಚ್ಚನ್ ಅವರ 2003 ರ ಚಲನಚಿತ್ರ ಮೈನ್ ಪ್ರೇಮ್ ಕಿ ದೀವಾನಿ ಹೂನ್ 1976 ರ ಚಲನಚಿತ್ರ ಚಿಚ್ಚೋರ್ ನ ಅನಧಿಕೃತ ರಿಮೇಕ್ ಆಗಿತ್ತು. ಚಿಚ್ಚೋರ್ ಸೂಪರ್‌ಹಿಟ್ ಎಂದು ಸಾಬೀತಾದರೆ, ಮೈನ್ ಪ್ರೇಮ್ ಕಿ ದೀವಾನಿ ಹೂನ್ ಸೂಪರ್ ಫ್ಲಾಪ್ ಎಂದು ಸಾಬೀತಾಯಿತು.
 

49

ಆಮೀರ್ ಖಾನ್ ಮತ್ತು ಪೂಜಾ ಭಟ್ ಅಭಿನಯದ ದಿಲ್ ಹೈ ಕೆ ಮಂತಾ ನಹಿ 1991 ರ  ಕೂಡ ರಿಮೇಕ್ ಆಗಿದೆ, ಆದರೆ ತಯಾರಕರು ಕಥೆಯಲ್ಲಿ ಕೆಲವು ಹೊಸತನವನ್ನು ಪರಿಚಯಿಸಿದರು. ಈ ಚಿತ್ರದ ಕಥೆಯು 1956 ರಲ್ಲಿ ರಾಜ್ ಕಪೂರ್ ಮತ್ತು ನರ್ಗೀಸ್ ಅಭಿನಯದ ಚೋರಿ ಚೋರಿ ಚಲನಚಿತ್ರದಂತೆಯೇ ಇತ್ತು ಮತ್ತು ಎರಡೂ ಚಿತ್ರಗಳು ಸೂಪರ್ ಹಿಟ್ ಆಗಿದ್ದವು.

59

ಅಜಯ್ ದೇವಗನ್ ಮತ್ತು ಅಭಿಷೇಕ್ ಬಚ್ಚನ್ ಅವರ 2012 ರ ಚಲನಚಿತ್ರ ಬೋಲ್ ಬಚ್ಚನ್ ಕಥೆಯು 1979 ರ ಅಮೋಲ್ ಪಾಲೇಕರ್ ಚಿತ್ರ ಗೋಲ್ಮಾಲ್‌ ನಂತೆಯೇ ಇತ್ತು. ಗ್ಲಾಮರೈಸ್ ಮಾಡುವ ಮೂಲಕ  ಬೋಲ್ಬಚ್ಚನ್ ಪರಿಚಯಿಸಲಾಯಿತು. ಎರಡೂ ಚಿತ್ರಗಳು ಬಾಕ್ಸ್ ಆಫೀಸ್ ನಲ್ಲಿ ಬ್ಲಾಕ್ ಬಸ್ಟರ್ ಆಗಿವೆ.

69

ಸಲ್ಮಾನ್ ಖಾನ್-ಕರಿಷ್ಮಾ ಕಪೂರ್ ಅಭಿನಯದ ದುಲ್ಹನ್ ಹಮ್ ಲೆ ಜಾಯೇಂಗೆ ಮತ್ತು ಸುನೀಲ್ ದತ್-ವಹೀದಾ ರೆಹಮಾನ್ ಅಭಿನಯದ ಏಕ್ ಫೂಲ್ ಚಾರ್ ಕಾಂತೆ ಚಿತ್ರಗಳ ಕಥೆಯೂ ಒಂದೇ ಆಗಿದೆ. ಆದರೆ, ಸಲ್ಮಾನ್-ಕರಿಷ್ಮಾ ಸಿನಿಮಾವನ್ನು ಗ್ಲಾಮರೈಸ್ ಮಾಡಿ ಪರಿಚಯಿಸಲಾಯಿತು. ಎರಡೂ ಚಿತ್ರಗಳು ಬಾಕ್ಸ್ ಆಫೀಸ್‌ನಲ್ಲಿ ಸರಾಸರಿ ಕಲೆಕ್ಷನ್‌ ಮಾಡಿವೆ.

79

ಬಾಲಾ ಮತ್ತು ಉಜ್ದಾ ಚಮನ್ ಚಿತ್ರದ ಕಥೆಯೂ ಅಷ್ಟೇ. ಆಯುಷ್ಮಾನ್ ಖುರಾನಾ ಅವರ ಚಿತ್ರ ಬಾಲಾ ಮೊದಲು ಬಿಡುಗಡೆಯಾದಾಗ, ಉಜ್ದಾ ಚಮನ್ ನಿರ್ಮಾಪಕರು ಅವರ ಕಥೆಯನ್ನು ಕದ್ದಿದ್ದಾರೆ ಎಂದು ಆರೋಪಿಸಿದರು. ಎರಡೂ ಚಿತ್ರಗಳ ನಿರ್ಮಾಪಕರ ನಡುವೆ ಕೆಲವು ಕಾನೂನು ವಿಷಯಗಳೂ ಮುನ್ನೆಲೆಗೆ ಬಂದವು. ಆದರೆ, ಎರಡೂ ಚಿತ್ರಗಳು ಬಾಕ್ಸ್ ಆಫೀಸ್ನಲ್ಲಿ ಸೂಪರ್ ಫ್ಲಾಪ್ ಆಗಿವೆ.

89

ಗೋವಿಂದ ಅವರ 1997 ರ ಚಲನಚಿತ್ರ ಹೀರೋ ನಂಬರ್ ಒನ್ 1972 ರ ರಾಜೇಶ್ ಖನ್ನಾ ಚಿತ್ರ ಬಾವರ್ಚಿಯಂತೆಯೇ ಇದೆ. ಎರಡೂ ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಭರ್ಜರಿ ವ್ಯಾಪಾರ ಮಾಡಿದವು

99

ಮಲ್ಲಿಕಾ ಶೆರಾವತ್ ಅಭಿನಯದ ಮರ್ಡರ್ ಸಿನಿಮಾ ಮತ್ತು ಮೇಘನಾ ನಾಯ್ಡು ಅಭಿನಯದ ಲಸ್ಟ್ ಸಿನಿಮಾದ ಕಥೆ ಬಹುತೇಕ ಒಂದೇ ಎಂದು ಹೇಳಲಾಗುತ್ತಿದೆ. ಆದರೆ, ತಯಾರಕರು ಇದನ್ನು ಅಧಿಕೃತವಾಗಿ ಘೋಷಿಸಲಿಲ್ಲ. ಮರ್ಡರ್ ಬಾಕ್ಸ್ ಆಫೀಸ್ ಹಿಟ್ ಎಂದು ಸಾಬೀತಾದರೆ, ಹವನ್ ಸೂಪರ್ ಫ್ಲಾಪ್ ಆಗಿತ್ತು.

Read more Photos on
click me!

Recommended Stories