ದೇಶದಾದ್ಯಂತ ದೀಪಾವಳಿ ಸಂಭ್ರಮ ಮನೆಮಾಡಿದೆ. ದೇಶದ ಜನತೆ ಸಗರದಿಂದ ದೀಪಾವಳಿ ಹಬ್ಬ ಆಚರಿಸುತ್ತಿದ್ದಾರೆ. ಹಬ್ಬ ಆಚರಣೆಯಲ್ಲಿ ಸಿನಿಮಾಮಂದಿ ಏನು ಹಿಂದೆ ಉಳಿದಿಲ್ಲ. ಅದ್ದೂರಿಯಾಗಿಯೇ ಹಬ್ಬ ಆಚರಿಸುತ್ತಾರೆ. ಅದರಲ್ಲೂ ಬಾಲಿವುಡ್ ಮಂದಿಯ ಹಬ್ಬದ ಸಂಭ್ರಮ ನೋಡುವುದೆ ಅಭಿಮಾನಿಗಳ ಕಣ್ಣಿಗೆ ಹಬ್ಬವಾಗಿದೆ.
ಬಾಲಿವುಡ್ ಸ್ಟಾರ್ಸ್ ತರಹೇವಾರಿ ಬಟ್ಟೆ ಧರಿಸಿ ದೀಪಾವಳಿ ಬೆಳಕಿನಲ್ಲಿ ಮಿರ ಮಿರ ಮಿಂಚುತ್ತಿದ್ದಾರೆ. ಈಗಾಗಲೇ ಅನೇಕ ಸ್ಟಾರ್ ನಟಿಯರ ಲುಕ್ ವೈರಲ್ ಆಗಿದೆ. ಇದೀಗ ಅನುಷ್ಕಾ ಶರ್ಮಾ ಗಾರ್ಜಿಯಸ್ ಲುಕ್ ನೆಟ್ಟಿಗರು ಫಿದಾ ಆಗುವಂತೆ ಮಾಡಿದೆ.
ಹಸಿರು ಬಣ್ಣದ ಸೀರೆಯಲ್ಲಿಅನುಷ್ಕಾ ಕಂಗೊಳಿಸಿದ್ದಾರೆ. ಸಬ್ಯಸಾಚಿ ಡಿಸೈನ್ ಮಾಡಿರುವ ಸೀರೆ ಧರಿಸಿರುವ ಅನುಷ್ಕಾ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅನುಷ್ಕಾ ಫೋಟೋಗೆ ಅಭಿಮಾನಿಗಳು ಪ್ರೀತಿಯ ಕಾಮೆಂಟ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಪಾಕಿಸ್ತಾನ ವಿರುದ್ಧ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅವರ ಬ್ಯಾಟಿಂಗ್ ವೈಖರಿಗೆ ಇಡೀ ದೇಶವೇ ಭೇಷ್ ಎನ್ನುತ್ತಿದೆ. ಕೊಹ್ಲಿ ಪರಾಕ್ರಮವನ್ನು ಇಡೀ ದೇಶ ಹಾಡಿಹೊಗಳುತ್ತಿದೆ. ಪತಿಯ ಆಕರ್ಷಕ ಬ್ಯಾಟಿಂಗ್ ಬೆನ್ನಲ್ಲೇ ಅನುಷ್ಕಾ ಶರ್ಮಾ ಸುಂದರ ಫೋಟೋಗಳನ್ನು ಹರಿಬಿಡುವ ಮೂಲಕ ಅಭಿಮಾನಿಗಳ ನಿದ್ದೆ ಗೆಡಿಸಿದ್ದಾರೆ.
ಅನುಷ್ಕಾ ಸುಂದರ ಫೋಟೋಗೆ ಅನೇಕ ಸ್ಟಾರ್ಸ್ ಕಲಾವಿದರು ಕಾಮೆಂಟ್ ಮಾಡಿ ಹೊಗಳುತ್ತಿದ್ದಾರೆಯ ಪತಿ ವಿರಾಟ್ ಕೊಹ್ಲಿ ಸಹ ಕಾಮೆಂಟ್ ಮಾಡಿದ್ದಾರೆ. ಹಾರ್ಟ್ ಇಮೋಜಿ ಇರಿಸಿ ಪ್ರೀತಿ ವ್ಯಕ್ತಪಡಿಸಿದ್ದಾರೆ.
ಅನುಷ್ಕಾ ಸದ್ಯ ಚಕ್ದ ಎಕ್ಸ್‌ಪ್ರೆಸ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಅನೇಕ ವರ್ಷಗಳ ಬಳಿಕ ಮತ್ತೆ ಬಣ್ಣ ಹಚ್ಚಿರುವ ಅನುಷ್ಕಾ ಕ್ರೆಕಟರ್ ಆಗಿ ಅಭಿಮಾನಿಗಳ ಮುಂದೆ ಬರ್ತಿದ್ದಾರೆ.