ಲಿಪ್‌ಲಾಕ್ ಅಲ್ಲ, ಪತ್ನಿ ಆಲಿಯಾಗೆ ಕಿಸ್ ಮಾಡೋ ಫೋಟೋ ಹಾಕಿ ಹೊಸ ವರ್ಷಕ್ಕೆ ಶುಭ ಕೋರಿದ ರಣಬೀರ್ ಕಪೂರ್!

First Published | Jan 2, 2024, 5:14 PM IST

ಆಲಿಯಾ ಭಟ್‌ (Alia Bhatt) ಮತ್ತು ರಣಬೀರ್‌ ಕಪೂರ್‌ (Ranbir Kapoor) ಬಾಲಿವುಡ್‌ನ ಫೇವರೇಟ್‌ ಕಪಲ್‌ಗಳಲ್ಲಿ ಒಬ್ಬರು. ಇವರ ವೈಯಕ್ತಿಕ ಜೀವನದ ಬಗ್ಗೆ ತಿಳಿಯಲು ಅಭಿಮಾನಿಗಳು ಯಾವಾಗಲೂ ಕಾತುರರಾಗಿರುತ್ತಾರೆ. ಅದಕ್ಕೆ ತಕ್ಕ ಹಾಗೇ ಆಲಿಯಾ ಕೂಡ ತಮ್ಮ ಫ್ಯಾನ್ಸ್ ಅನ್ನು ನಿರಾಶೆ ಮಾಡುವುದಿಲ್ಲ. ಆಲಿಯಾ ಭಟ್ ಪತಿ ರಣಬೀರ್ ಕಪೂರ್ ಮತ್ತು ಮಗಳು ರಾಹಾ ಜೊತೆ ಹೊಸ ವರ್ಷವನ್ನು ಆಚರಿಸಿದ ಫೋಟೋಗಳನ್ನು ಹಂಚಿಕೊಂಡಿದ್ದಾರೆ. 

ಹೊಸ ವರ್ಷದಂದು ಆಲಿಯಾ ಭಟ್‌ ರಣಬೀರ್ ಕಪೂರ್ ಜೊತೆ ಸಖತ್ ಪಾರ್ಟಿ ಮಾಡಿದ್ದಾರೆ. ಈ ಸಮಯದ ಕ್ಷಣಗಳನ್ನು ಆಲಿಯಾ ತಮ್ಮ ಫ್ಯಾನ್‌ ಮತ್ತು ಫಾಲೋವರ್ಸ್‌ ಜೊತೆ ಹಂಚಿಕೊಂಡಿದ್ದಾರೆ.

ಆಲಿಯಾ ಅವರು ಹೊಸ ವರ್ಷದ ಆಚರಣೆಯ ತಾಜಾ ಫೋಟೋಗಳು ಮತ್ತು ವೀಡಿಯೋಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ, ಈ ವರ್ಷದ ವಿಶೇಷವೆಂದರೆ ಪುಣಾಣಿ ರಾಹಾ ಸಹ ಅವರ ಜೊತೆಗೂಡಿದ್ದಾಳೆ.

Tap to resize

ಹೊಸ ವರ್ಷವನ್ನು ಆಲಿಯಾ  ಪತಿ ರಣಬೀರ್ ಕಪೂರ್ ಮತ್ತು ಮಗಳು ರಾಹಾ  ಅವರೊಂದಿಗೆ ಸಮುದ್ರ ತೀರದ ಸ್ಥಳವೊಂದರಲ್ಲಿ ಸ್ವಾಗತಿಸಿದ್ದಾರೆ. ಆದರೆ ಯಾವ ಸ್ಥಳವೆಂದು ಬಹಿರಂಗಪಡಿಸಿಲ್ಲ.
 

ಒಂದು ಫೋಟೋದಲ್ಲಿ, ರಣಬೀರ್ ಆಲಿಯಾಳ ಕೆನ್ನೆಗೆ ಮುತ್ತು ನೀಡುತ್ತಿದ್ದಾರೆ. ಇನ್ನೊಂದರಲ್ಲಿ ನಟಿ ಮಡಿಲಲ್ಲಿ ಮಗಳು ರಾಹಾ ಇದ್ದಾಳೆ ಮತ್ತು ಸಮುದ್ರದ ಹಿನ್ನೆಲೆ ಕಾಣಬಹುದು.
 

 ಫೋಟೋಗಳ ಜೊತೆಗೆ ಅಭಿಮಾನಿಗಳಿಗೆ ತಮ್ಮ ಶುಭಾಶಯಗಳನ್ನು ತಿಳಿಸಿದ್ದಾರೆ. ಫಂಕಿ ಉಡುಪನ್ನು ಧರಿಸಿದ್ದ  ನಟಿ ರಣಬೀರ್ ಜೊತೆ ಪಾರ್ಟಿ ಮಾಡುವುದನ್ನು ಮತ್ತು ರಾಹಾ ಜೊತೆ ಸಮಯ ಕಳೆಯುವುದನ್ನು ಫೋಟೋಗಳು ತೋರಿಸುತ್ತದೆ.

ಕೆಲಸದ ವಿಷಯಕ್ಕೆ ಬಂದರೆ , ಆಲಿಯಾ ಪ್ರಿಯಾಂಕಾ ಚೋಪ್ರಾ ಮತ್ತು ಕತ್ರಿನಾ ಕೈಫ್ ಜೊತೆಗೆ ಫರ್ಹಾನ್ ಅಖ್ತರ್ ಅವರ ಮಹಿಳಾ-ಕೇಂದ್ರಿತ ಸಿನಿಮಾ ಜೀ ಲೇ ಜರಾದಲ್ಲಿ ನಟಿಸಲು ಸಿದ್ಧರಾಗಿದ್ದಾರೆ. ಇದರ ಜೊತೆಗೆ ನಟಿ ವಾಸನ್ ಬಾಲ ಅವರ ಥ್ರಿಲ್ಲರ್ ಜಿಗ್ರಾವನ್ನು ಧರ್ಮ ಪ್ರೊಡಕ್ಷನ್ಸ್‌ನೊಂದಿಗೆ ಸಹ-ನಿರ್ಮಾಣ ಮಾಡುತ್ತಾರೆ.

Latest Videos

click me!