ಜಬರ್ದಸ್ತ್ ವೇದಿಕೆಯ ಮೂಲಕ ನಟಿ ಅನಸೂಯಾ ಭಾರದ್ವಾಜ್ ಜನಪ್ರಿಯತೆಯನ್ನು ಗಳಿಸಿದರು. 2013 ರಲ್ಲಿ ಆರಂಭವಾದ ಕಾಮಿಡಿ ಶೋ ಜಬರ್ದಸ್ತ್ ಭಾರೀ ಹಿಟ್ ಆಗಿತ್ತು. ಈ ಕಾರ್ಯಕ್ರಮದ ಯಶಸ್ಸಿನಲ್ಲಿ ಅನಸೂಯಾ ಅವರ ಪಾತ್ರ ಬಹಳ ಮುಖ್ಯ.
ಆ್ಯಂಕರ್ ಆಗಿ ಕೆರಿಯರ್ ಶುರುಮಾಡಿದ ಅನಸೂಯಾ ಸಧ್ಯ ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ತೆಲುಗು, ತಮಿಳು, ಮಲಯಾಳಂ ಸಿನಿನಿಮಾಗಳಲ್ಲಿ ಅನಸೂಯ ನಟಿಸುತ್ತಿದ್ದಾರೆ.
ಮೊದಲು ನಟಿ ಅನಸೂಯಾಗೆ ಒಂದು ಸಣ್ಣ ಪಾತ್ರ ಮಾಡುವ ಅವಕಾಶ ಸಿಕ್ಕಿತು. 2003ರಲ್ಲಿ ಎನ್‌ಟಿಆರ್ ಅಭಿನಯದ ತೆಲುಗಿನ ನಾಗ ಸಿನಿಮಾದಲ್ಲಿ ಅನಸೂಯಾ ಕಾಲೇಜು ವಿದ್ಯಾರ್ಥಿನಿಯಾಗಿ ನಟಿಸಿದ್ದಾರೆ.
ಈ ಇಡೀ ಸಿನಿಮಾದಲ್ಲಿ ಅವರಿಗೆ ಒಂದೇ ಒಂದು ಡೈಲಾಗ್ ಇರಲಿಲ್ಲ. ಒಂದು ದೃಶ್ಯದಲ್ಲಿ ಸುನಿಲ್ ಮಾತನಾಡುವಾಗ ಹಿಂದೆ ಅನಸೂಯಾ ಕಾಣಿಸುತ್ತಾರೆ. ಈ ಪಾತ್ರ ಮಾಡುವಾಗ ಅನಸೂಯಾ ಅವರಿಗೆ ಕೇವಲ 19 ವರ್ಷ.
ನಾಗ ಸಿನಿಮಾದಲ್ಲಿ ಕಾಲೇಜು ವಿದ್ಯಾರ್ಥಿನಿಯಾಗಿ ಕಾಣಿಸಿಕೊಂಡಿದ್ದ ಅನಸೂಯಾ ಪಡೆದ ಸಂಭಾವನೆ ಕೇವಲ 500 ರೂಪಾಯಿ. ಅದು ಆ ಕಾಲದಲ್ಲಿ ಜೂನಿಯರ್ ಆರ್ಟಿಸ್ಟ್‌ಗೆ ಕೊಡುತ್ತಿದ್ದ ಸಂಭಾವನೆ.
ಗ್ಲೋಬಲ್ ಸ್ಟಾರ್ ರಾಮ್‌ಚರಣ್ ನಟನೆಯೆ ರಂಗಸ್ಥಳ ಸಿನಿಮಾದಲ್ಲಿ ಅನಸೂಯಾ ಅವರು ರಂಗಮ್ಮತ್ತೆ ಎಂಬ ಪಾತ್ರವನ್ನು ನಿರ್ವಹಿಸಿದ್ದರು. ಹಾಗೂ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ನಟನೆಯ ಪುಷ್ಪಾ ಸಿನಿಮಾದಲ್ಲಿ ವಿಲನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.
ಅನಸೂಯಾ ಅವರಿಗೆ ಶೌರ್ಯ ಮತ್ತು ಅಯಾನ್ ಎಂಬ ಇಬ್ಬರು ಮಕ್ಕಳಿದ್ದಾರೆ. ಅವರ ಪತಿ ಸುಶಾಂಕ್ ಭಾರದ್ವಾಜ್ ಫೈನಾನ್ಷಿಯರ್ ಮತ್ತು ಹೂಡಿಕೆ ಯೋಜಕರು. ಈ ಹಿಂದೆ ಅನಸೂಯಾ ತಮ್ಮ ಪತಿಯನ್ನು ಕಿರುತೆರೆ ಪ್ರೇಕ್ಷಕರಿಗೆ ಪರಿಚಯಿಸಿದ್ದರು.