ಹೊಸ ವರ್ಷವನ್ನು ಆಚರಿಸಿದ ನಂತರ, ಅನನ್ಯ ಪಾಂಡೆ ಮತ್ತು ಇಶಾನ್ ಖಟ್ಟರ್ ಜನವರಿ 2 ರಂದು ಮುಂಬೈಗೆ ಮರಳಿದರು. ಈ ಇಬ್ಬರು ವಿಮಾನ ನಿಲ್ದಾಣದಲ್ಲಿ ಒಟ್ಟಿಗೆ ಕಾಣಿಸಿಕೊಂಡರು.
ಈ ಸಮಯದಲ್ಲಿ, ಅನನ್ಯಾ ಬಿಳಿ ಟಿ-ಶರ್ಟ್ ಮತ್ತು ಕಪ್ಪು ಜೀನ್ಸ್‌ನಲ್ಲಿ ಕಪ್ಪು ಬೂಟುಗಳಲ್ಲಿ ಕಾಣಿಸಿಕೊಂಡರೆ, ಇಶಾನ್ ಖಟ್ಟರ್ ಚಳಿಗಾಲದ ಉಡುಪಿನಲ್ಲಿ ಕಾಣಿಸಿಕೊಂಡರು.ಇಬ್ಬರನ್ನೂ ಒಟ್ಟಿಗೆ ನೋಡಿ ಈ ಜೋಡಿ ಶೀಘ್ರದಲ್ಲೇ ತಮ್ಮ ಸಂಬಂಧವನ್ನು ಎನೌನ್ಸ್ ಮಾಡಲಿದ್ದಾರೆ ಎಂದು ಗೆಸ್ ಮಾಡಲಾಗಿದೆ.
ಅನನ್ಯಾ ಪಾಂಡೆ ಮತ್ತು ಇಶಾನ್ ಖಟ್ಟರ್ ಹೊಸ ವರ್ಷದ ಹಾಲಿಡೇ ಕೆಲವು ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋಗಳು ಅವರ ರಣಥಂಬೋರ್ ವೇಕೆಷನ್ ಸಮಯದಾಗಿದೆ. 'ಖಾಲಿ ಪೀಲಿ' ಚಿತ್ರದ ಸಮಯದಲ್ಲಿ ಅನನ್ಯಾ ಪಾಂಡೆ ಮತ್ತು ಇಶಾನ್ ಖಟ್ಟರ್ ನಡುವೆ ನಿಕಟತೆ ಹೆಚ್ಚಾಯಿತು ಮತ್ತು ಅಂದಿನಿಂದ ಅವರಿಬ್ಬರೂ ಡೇಟಿಂಗ್ ಮಾಡುತ್ತಿದ್ದಾರೆ ಎಂದು ವರದಿಗಳಿವೆ.
30 ಅಕ್ಟೋಬರ್ 2021 ರಂದು, ಅನನ್ಯಾ ಪಾಂಡೆ ಅವರ ಜನ್ಮದಿನದಂದು, ಇಶಾನ್ ಖಟ್ಟರ್ ಅವರ ಎರಡು ಸುಂದರವಾದ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಅದು ಅವರ ಮಾಲ್ಡೀವ್ಸ್ ಹಾಲಿಡೇಯ ಫೋಟೋಗಳಾಗಿವೆ. ಹ್ಯಾಪಿ ಕೇಕ್ ಡೇ, ಅನ್ನಿ ಪಾಣಿನಿ. ಸತ್ಯ, ಶಕ್ತಿ ಮತ್ತು ಪ್ರೀತಿ ಯಾವಾಗಲೂ ನಿಮ್ಮೊಂದಿಗೆ ಇರಲಿ ಎಂದು ಕ್ಯಾಪ್ಷನ್ ನೀಡಿದ್ದರು .
ಕಳೆದ ವರ್ಷ ಜನವರಿ 2021 ರಲ್ಲಿ, ಅನನ್ಯ ಪಾಂಡೆ ಹೊಸ ವರ್ಷದ ಸಂದರ್ಭದಲ್ಲಿ ಮಾಲ್ಡೀವ್ಸ್‌ಗೆ ಹೋಗಿದ್ದರು. ಆ ಸಮಯದ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ, ಅದರಲ್ಲಿ ಅವರು ಬಿಕಿನಿಯಲ್ಲಿ ಕಾಣಿಸಿಕೊಂಡಿದ್ದಾರೆ. ಈ ರಜೆಯಲ್ಲಿ ಅನನ್ಯಾ ಜೊತೆ ಇಶಾನ್ ಖಟ್ಟರ್ ಕೂಡ ಇದ್ದರು. ಫೋಟೋಗಳಲ್ಲಿ ಅನನ್ಯಾ ಪಾಂಡೆ ತುಂಬಾ ಹಾಟ್ ಮತ್ತು ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದಾರೆ.
ಧರ್ಮ ಪ್ರೊಡಕ್ಷನ್ಸ್ ಅಡಿಯಲ್ಲಿ ಕರಣ್ ಜೋಹರ್ ನಿರ್ಮಿಸಿರುವ 'ಸ್ಟೂಡೆಂಟ್ ಆಫ್ ದಿ ಇಯರ್ 2 ಸಿನಿಮಾ ಮೂಲಕ ಅನನ್ಯಾ ಪಾಂಡೆ 2019 ರಲ್ಲಿ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ್ದಾರೆ. ಇದರಲ್ಲಿ ಅವರ ಎದುರು ತಾರಾ ಸುತಾರಿಯಾ ಮತ್ತು ಟೈಗರ್ ಶ್ರಾಫ್ ಕೂಡ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಕೆಲಸದ ಮುಂಭಾಗದಲ್ಲಿ, ಅನನ್ಯಾ ಪಾಂಡೆ ಶೀಘ್ರದಲ್ಲೇ ಶಕುನ್ ಬಾತ್ರಾ ಅವರ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇವರೊಂದಿಗೆ ಸಿದ್ಧಾಂತ್ ಚತುರ್ವೇದಿ ಮತ್ತು ದೀಪಿಕಾ ಪಡುಕೋಣೆ ಕೂಡ ಇದರಲ್ಲಿ ಕೆಲಸ ಮಾಡುತ್ತಿದ್ದಾರೆ. ಇದಲ್ಲದೆ, ಅನನ್ಯಾ ಪಾಂಡೆ ದಕ್ಷಿಣದ ಸೂಪರ್‌ಸ್ಟಾರ್ ವಿಜಯ್ ದೇವರಕೊಂಡ ಅವರೊಂದಿಗೆ ಲಿಗರ್ ಸಿನಿಮಾದಲ್ಲೂ ಕಾಣಿಸಿಕೊಳ್ಳಲಿದ್ದಾರೆ.