ದಿಶಾ ಮತ್ತು ಮತ್ತು ಟೈಗರ್ ಶ್ರಾಫ್ (Tiger Shroff) ಇಬ್ಬರು ಒಟ್ಟಿಗೆ ಕಾಲ ಕಳೆಯುತ್ತಿದ್ದರೂ ಎಲ್ಲಿಯೂ ಸದ್ದು ಬಿಟ್ಟುಕೊಟ್ಟಿಲ್ಲ ಇವರ ಹಾಲಿಡೇ ಫೋಟೊಗಳು ಸಖತ್ ವೈರಲ್ ಆಗಿದ್ದವು.
ನ್ಯೂ ಇಯರ್ ಸೆಲೆಬ್ರೆಷನ್‌ಗಾಗಿ ದಿಶಾ ಪಟಾನಿ ಮತ್ತು ಟೈಗರ್ ಶ್ರಾಫ್ ಮಾಲ್ಡೀವ್ಸ್‌ನಲ್ಲಿದ್ದಾರೆ. ಇಬ್ಬರೂ ಇನ್‌ಸ್ಟಾಗ್ರಾಂನಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದರೂ ಕಪಲ್ ಪರಸ್ಪರ ಜೊತೆಯಾಗಿರುವ ಫೋಟೋವನ್ನು ಮಾತ್ರ ಹಂಚಿಕೊಂಡಿಲ್ಲ.
ದಿಶಾ ಪಟಾನಿ ತಮ್ಮ ಇನ್ಸ್ಟಾಗ್ರಾಮ್ ಫೇಜ್‌ನಲ್ಲಿ ಕೆಲವು ಪೋಟೋಗಳನ್ನು ಹಂಚಿಕೊಂಡಿದ್ದರು. ಪಿಂಕ್ ಬಿಕಿನಿಯಲ್ಲಿ ಕಾಣಿಸಿಕೊಂಡಿದ್ದಾರೆ ನೀರಿನಲ್ಲಿ ಮುಳುಗಿ ಮೇಲೆ ಎದ್ದಿದ್ದರು.
ಬೋಲ್ಡ್ ಮತ್ತು ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದ ದಿಶಾ ಬಾಲಿವುಡ್ ನಲ್ಲಿಯೂ ಬ್ಯುಸಿ ಇದ್ದಾರೆ. 'ಎಂಎಸ್ ಧೋನಿ ದಿ ಅನ್ಟೋಲ್ಡ್ ಸ್ಟೋರಿ' ಮೂಲಕ ಬಾಲಿವುಡ್‌ಗೆ ಪದಾರ್ಪಣೆ ಮಾಡಿದ ದಿಶಾ, 'ಬಾಘಿ 2', 'ಮಲಂಗ್', 'ಭಾರತ್' ಮತ್ತು ಇತ್ತೀಚೆಗೆ ಬಿಡುಗಡೆಯಾದ 'ರಾಧೆ' ಸಿನಿಮಾಗಳಲ್ಲಿ ಕಾಣಿಸಿಕೊಂಡು ರೋಮಾನ್ಸ್ ದೃಶ್ಯಗಳ ಮೂಲಕವೇ ಹೆಸರು ಮಾಡಿದರು.