ಪ್ರೊಫೆಷನಲ್ ಲೈಫ್‌ ಗ್ರೇಟ್‌, ಆದರೆ ವೈಯಕ್ತಿಕ ಜೀವನದಲ್ಲಿ ಕುಸಿತ ಕಂಡೆ: ನಟಿ Malavika Mohanan

Suvarna News   | Asianet News
Published : Jan 04, 2022, 02:54 PM IST

ಚಿತ್ರರಂಗಕ್ಕೆ ಕಾಲಿಟ್ಟ ಒಂದೇ ವರ್ಷದಲ್ಲಿ ಬ್ಯಾಕ್ ಟು ಬ್ಯಾಕ್‌ ಆಫರ್ಸ್ ಪಡೆದುಕೊಳ್ಳುತ್ತಿರುವ ನಟಿ 2021ನೇ ವರ್ಷ ಹೇಗಿತ್ತು ಎಂದು ಬರೆದುಕೊಂಡಿದ್ದಾರೆ.   

PREV
17
ಪ್ರೊಫೆಷನಲ್ ಲೈಫ್‌ ಗ್ರೇಟ್‌, ಆದರೆ ವೈಯಕ್ತಿಕ ಜೀವನದಲ್ಲಿ ಕುಸಿತ ಕಂಡೆ: ನಟಿ Malavika Mohanan

ಮಲಯಾಳಂ (Mollywood) ಚಿತ್ರದ ಮೂಲಕ ಸಿನಿ ಜರ್ನಿ ಆರಂಭಿಸಿದ್ದ ನಟಿ ಮಾಳವಿಕಾ ಮೋಹನನ್ (Malavika Mohanan) ಸೌತ್ ಚಿತ್ರರಂಗದ ಬಹು ಬೇಡಿಕೆಯ ನಟಿಯಾಗಿದ್ದಾರೆ. 

27

ದಿ ಗ್ರೇಟ್ ಫಾದರ್ (The Great Father) ಹಿಟ್ ಆಗುತ್ತಿದ್ದಂತೆ, ತಮಿಳಿನ ಮಾಸ್ಟರ್ (Master) ಸಿನಿಮಾದಲ್ಲಿ ಅವಕಾಶ ಗಿಟ್ಟಿಸಿಕೊಂಡಿದ್ದರು. ಇದಾದ ನಂತರ ಈಗ ಬಾಲಿವುಡ್‌ ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರೆ. 

37

ಸ್ನೇಹಿತೆ ಬಾಟ್‌ ಟಬ್‌ನಲ್ಲಿ (Bath tub) ನೈಟ್‌ ಸೂಟ್‌ ಧರಿಸಿ ಮಲಗಿಕೊಂಡಿರುವ ರೀತಿ ಪೋಸ್‌ ಕೊಟ್ಟಿರುವ ಮಾಳವಿಕಾ, ತಮ್ಮ ವೃತ್ತಿ ಮತ್ತು ವೈಯಕ್ತಿಕ ಜೀವನದ ಬಗ್ಗೆ ಬರೆದುಕೊಂಡಿದ್ದಾರೆ. 

47

 'ನಾವು ಸಂತೋಷ ಮತ್ತು ಶೈನಿ ಲೈಫ್‌ನ (ShinyLife) ಮಾತ್ರ ತೋರಿಸುತ್ತೇವೆ. ನಮಗೆ ಬ್ಯಾಡ್ ಪಾರ್ಟ್‌ನ ಡಾಕ್ಯುಮೆಂಟ್ ಮಾಡುವುದಕ್ಕೆ ಇಷ್ಟವಿಲ್ಲ ಅಲ್ವಾ?' ಎಂದು ಮಾತು ಶುರು ಮಾಡಿದ್ದಾರೆ. 

57

'ಎಲ್ಲಾ ವರ್ಷಗಳಿಗಿಂತ ಈ ವರ್ಷ ತುಂಬಾನೇ ಕಷ್ಟವಾಗಿತ್ತು. ಪ್ರೊಫೆಷನಲ್ ಲೈಫ್‌ (Professional Life) ಗ್ರೇಟ್ ಆಗಿತ್ತು. ನನ್ನ ಸಿನಿಮಾ ಸೂಪರ್ ಹಿಟ್. ಬ್ಲಾಕ್ ಬಸ್ಟರ್ ಆಗಿತ್ತು. ಇದರಿಂದ ಬಾಲಿವುಡ್‌ನಲ್ಲಿ ನಟಿಸುವ ಅವಕಾಶ ಪಡೆದುಕೊಂಡೆ,' ಎಂದಿದ್ದಾರೆ.

67

'ವೈಯಕ್ತಿಕ ಜೀವನದಲ್ಲಿ ಕುಸಿತ (Slumpy) ಕಂಡೆ. ತುಂಬಾ ಕಷ್ಟದ ಸಂದರ್ಭವನ್ನು ಎದುರಿಸಿರುವೆ. ಅತಿ ಬೇಸರದ ಕ್ಷಣಗಳನ್ನೂ ಎದುರಿಸಿರುವೆ. ನನ್ನ ಸ್ನೇಹಿತರು ಮತ್ತು ಕುಟುಂಬದವರಿಂದ ಮಾತ್ರ ನಾನು ಇಷ್ಟು ಸಂತೋಷದಿಂದ ಇರುವೆ,' ಎಂದು ಹೇಳಿಕೊಂಡಿದ್ದಾರೆ.

77

'ಕೆಲಸದಲ್ಲಿ ಬ್ಯುಸಿ, ಫ್ಯಾಮಿಲಿ ಜೊತೆ ಇರಬೇಕು, ಹೊಸ ಸಂಬಂಧ ಎಲ್ಲದರ ನಡುವೆ ನಮ್ಮ ಸ್ನೇಹಿತರನ್ನು ಮರೆಯುತ್ತೇವೆ. ಕೆಲವರ ಜೊತೆ ತಿಂಗಳುಗಟ್ಟಲೆ ಮಾತನಾಡುವುದಿಲ್ಲ,'  ಎಂಬ ದುಃಖ ತೋಡಿಕೊಂಡಿದ್ದಾರೆ.

Read more Photos on
click me!

Recommended Stories