ಈ ಚಿತ್ರಗಳ OTTಗೆ ಹಕ್ಕು ಅತ್ಯಂತ ದುಬಾರಿ ;ಪಟ್ಟಿಯಲ್ಲಿ KGFಗೆ ಎರಡನೇ ಸ್ಥಾನ

Published : Sep 26, 2022, 04:55 PM IST

ಶಾರುಖ್ ಖಾನ್ (Shahrukh Khan) ಅಭಿನಯದ 'ಜವಾನ್' (Jawan) ಚಿತ್ರದ OTT ಮತ್ತು ಸ್ಯಾಟಲೈಟ್ ಹಕ್ಕುಗಳು ಬಿಡುಗಡೆಗೆ ಮುನ್ನವೇ ಮಾರಾಟವಾಗಿವೆ. ವರದಿಗಳ ಪ್ರಕಾರ, ಅಟ್ಲಿ ಕುಮಾರ್ ನಿರ್ದೇಶನದ ಈ ಚಿತ್ರದ ಸ್ಯಾಟಲೈಟ್ ಮತ್ತು OTT ಹಕ್ಕುಗಳನ್ನು ಸುಮಾರು 250 ಕೋಟಿ ರೂಪಾಯಿಗಳಿಗೆ ಡೀಲ್ ಮಾಡಲಾಗಿದೆ. ಆದರೆ ಅಧಿಕೃತವಾಗಿ ಇನ್ನೂ ದೃಢಪಟ್ಟಿಲ್ಲ. ಇದು ನಿಜವಾಗಿದ್ದರೂ ಸಹ, ಪ್ರಸ್ತುತ ಭಾರತದ  ಅತ್ಯಂತ ದುಬಾರಿ ಬೆಲೆಗೆ ತಮ್ಮ \ ಹಕ್ಕಗಳನ್ನು ಮಾರಾಟ ಮಾಡಿದ   ಚಿತ್ರಗಳಲ್ಲಿ 'RRR ಮೊದಲ  ಸ್ಥಾನದಲ್ಲಿದೆ ಮತ್ತು 'KGF ಚಾಪ್ಟರ್ 2' ಎರಡನೇ ಸ್ಥಾನದಲ್ಲಿದೆ. OTTಗೆ ಅತ್ಯಂತ ದುಬಾರಿ ಬೆಲೆಗೆ ಮಾರಾಟವಾದ ಚಿತ್ರಗಳು ಇವು.

PREV
110
ಈ ಚಿತ್ರಗಳ  OTTಗೆ ಹಕ್ಕು ಅತ್ಯಂತ ದುಬಾರಿ ;ಪಟ್ಟಿಯಲ್ಲಿ  KGFಗೆ ಎರಡನೇ ಸ್ಥಾನ

ನಿರ್ದೇಶಕ ಎಸ್.ಎಸ್. ರಾಜಮೌಳಿ ಸಿನಿಮಾ 'RRR'. ವರದಿಗಳ ಪ್ರಕಾರ, ರಾಮಚರಣ್ ಮತ್ತು ಜೂನಿಯರ್ ಎನ್‌ಟಿಆರ್ ಅಭಿನಯದ OTT ಮತ್ತು ಉಪಗ್ರಹ ಹಕ್ಕುಗಳನ್ನು Zee5 ಮತ್ತು Netflix ಗೆ ಸುಮಾರು 325-350 ಕೋಟಿ ರೂ.ಗೆ ಮಾರಾಟ ಮಾಡಲಾಗಿದೆ. ಇವುಗಳಲ್ಲಿ ಹಿಂದಿ ಆವೃತ್ತಿಯನ್ನು ನೆಟ್‌ಫ್ಲಿಕ್ಸ್‌ಗೆ ಮತ್ತು ಉಳಿದ ಭಾಷೆಯ ಆವೃತ್ತಿಗಳನ್ನು Zee5 ಗೆ ನೀಡಲಾಗಿದೆ.


 

210

ರಾಕ್‌ಸ್ಟಾರ್ ಯಶ್ ಅಭಿನಯದ 'ಕೆಜಿಎಫ್ ಚಾಪ್ಟರ್ 2' ಈ ಚಿತ್ರದ OTT ಹಕ್ಕುಗಳನ್ನು ಸುಮಾರು 320 ಕೋಟಿ ರೂ.ಗೆ ಮಾರಾಟ ಮಾಡಿದೆ ಎನ್ನಲಾಗಿದೆ. ಈ ಚಲನಚಿತ್ರವನ್ನು ಅಮೆಜಾನ್ ಪ್ರೈಮ್ ವಿಡಿಯೋ ಖರೀದಿಸಿದೆ.

310

ಅಟ್ಲಿ ಕುಮಾರ್ ನಿರ್ದೇಶನದ 'ಜವಾನ್' ಚಿತ್ರದ ಬಗ್ಗೆ ಬರುತ್ತಿರುವ ಸುದ್ದಿಗಳ ಪ್ರಕಾರ, ಅದು ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಶಾರುಖ್ ಖಾನ್ ಅಭಿನಯದ ಈ ಚಿತ್ರದ OTT ಮತ್ತು ಉಪಗ್ರಹ ಹಕ್ಕುಗಳನ್ನು ಸುಮಾರು 250 ಕೋಟಿ ರೂಪಾಯಿಗಳಿಗೆ ನೆಟ್‌ಫ್ಲಿಕ್ಸ್‌ಗೆ ಮಾರಾಟ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.


 

410

ವರದಿಗಳ ಪ್ರಕಾರ, ನೆಟ್‌ಫ್ಲಿಕ್ಸ್‌ನಲ್ಲಿ ಪ್ರಸಾರವಾದ ಕಾರ್ತಿಕ್ ಆರ್ಯನ್ ಅಭಿನಯದ 'ಧಮಾಕಾ' ನಾಲ್ಕನೇ ಸ್ಥಾನದಲ್ಲಿದೆ. ರಾಮ್ ಮಾಧ್ವನಿ ನಿರ್ದೇಶನದಲ್ಲಿ ತಯಾರಾದ ಈ ಚಿತ್ರದ ಡೀಲ್ ಸುಮಾರು 135 ಕೋಟಿಗೆ ನಡೆದಿದೆ ಎನ್ನಲಾಗಿದೆ.

510

ನಿರ್ದೇಶಕ ಅಭಿಷೇಕ್ ದುದೈಯಾ ಅವರ ಚಿತ್ರ 'ಭುಜ್: ದಿ ಪ್ರೈಡ್ ಆಫ್ ಇಂಡಿಯಾ' ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ನೊಂದಿಗೆ OTT ಹಕ್ಕುಗಳಿಗಾಗಿ ಸುಮಾರು 110 ಕೋಟಿ ರೂಪಾಯಿಗಳಿಗೆ ಒಪ್ಪಂದ ಮಾಡಿಕೊಂಡಿತ್ತು. 1971 ರ ಭಾರತ-ಪಾಕಿಸ್ತಾನ ಯುದ್ಧವನ್ನು ಆಧರಿಸಿದ ಈ ಚಿತ್ರದಲ್ಲಿ ಅಜಯ್ ದೇವಗನ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

610

ಚಿಯಾನ್ ವಿಕ್ರಮ್ ಮತ್ತು ಐಶ್ವರ್ಯ ರೈ ಅಭಿನಯದ 'ಪೊನ್ನಿಯಿನ್ ಸೆಲ್ವನ್-1' ಬಿಡುಗಡೆಗೆ ಮುನ್ನವೇ ಅಮೆಜಾನ್ ಪ್ರೈಮ್ ವಿಡಿಯೋಗೆ ಮಾರಾಟವಾಗಿದೆ. ಮಣಿರತ್ನಂ ನಿರ್ದೇಶನದ ಈ ಚಿತ್ರಕ್ಕೆ ಸುಮಾರು 125 ಕೋಟಿ ರೂಪಾಯಿಗೆ ಡೀಲ್ ನಡೆದಿದೆ.


 

710

ವರದಿಗಳ ಪ್ರಕಾರ, ಡಾ. ಚಂದ್ರಪ್ರಕಾಶ್ ದ್ವಿವೇದಿ ನಿರ್ದೇಶನದ 'ಸಾಮ್ರಾಟ್ ಪೃಥ್ವಿರಾಜ್' ಚಿತ್ರದ OTT ಮತ್ತು ಉಪಗ್ರಹ ಹಕ್ಕುಗಳು ಸುಮಾರು 100 ಕೋಟಿ ರೂ.ಗೆ ಮಾರಾಟವಾಗಿವೆ. ಅಕ್ಷಯ್ ಕುಮಾರ್ ಮತ್ತು ಮಾನುಷಿ ಛಿಲ್ಲರ್ ನಟಿಸಿರುವ ಈ ಚಿತ್ರವು ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಸ್ಟ್ರೀಮ್ ಆಗಿದೆ.


 

810

ವರದಿಗಳ ಪ್ರಕಾರ, ಅಕ್ಷಯ್ ಕುಮಾರ್ ಅಭಿನಯದ 'ಸೂರ್ಯವಂಶಿ' ಚಿತ್ರದ ಒಪ್ಪಂದವನ್ನು ನೆಟ್‌ಫ್ಲಿಕ್ಸ್‌ನೊಂದಿಗೆ ದೊಡ್ಡ ಮೊತ್ತಕ್ಕೆ ಮಾಡಲಾಗಿದೆ. ರೋಹಿತ್ ಶೆಟ್ಟಿ ನಿರ್ದೇಶನದ ಈ ಚಿತ್ರದ ಒಟಿಟಿ ಹಕ್ಕು ಸುಮಾರು 100 ಕೋಟಿ ರೂಪಾಯಿಗೆ ಮಾರಾಟವಾಗಿದೆ ಎನ್ನಲಾಗಿದೆ.


 

910

ಸಲ್ಮಾನ್ ಖಾನ್ ಅಭಿನಯದ 'ರಾಧೆ: ಯುವರ್ ಮೋಸ್ಟ್ ವಾಂಟೆಡ್ ಭಾಯ್' ಚಿತ್ರದ OTT ಹಕ್ಕು ಒಪ್ಪಂದವನ್ನು 100 ಕೋಟಿ ರೂಗೆ ನೀಡಲಾಗಿದೆ. Zee5 ನಲ್ಲಿ ಪ್ರಸಾರವಾಗುವ ಈ ಚಿತ್ರವನ್ನು ಪ್ರಭುದೇವ ನಿರ್ದೇಶಿಸಿದ್ದಾರೆ.

1010

ಅಕ್ಷಯ್ ಕುಮಾರ್ ಅಭಿನಯದ 'ಲಕ್ಷ್ಮಿ' ಚಿತ್ರವನ್ನು ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಖರೀದಿಸಿದೆ. ರಾಘವ ಲಾರೆನ್ಸ್ ನಿರ್ದೇಶನದ ಈ ಚಿತ್ರ ಸುಮಾರು 125 ಕೋಟಿ ರೂ.ಗೆ ಡೀಲ್ ನಡೆದಿದೆ.


 

Read more Photos on
click me!

Recommended Stories