ಆಯುಷ್ಮಾನ್ ಖುರಾನಾ ಜೊತೆ ಅನನ್ಯಾ ಪಾಂಡೆ ಶೂಟಿಂಗ್; ನೆಟ್ಟಿಗ್ಗರಿಂದ ನಟಿ ಟ್ರೋಲ್
First Published | Aug 30, 2022, 4:18 PM ISTಈ ವರ್ಷ ಬಾಲಿವುಡ್ ಇಂಡಸ್ಟ್ರಿಗೆ ಅಷ್ಟೊಂದು ಉತ್ತಮವಾಗಿಲ್ಲ. ವರ್ಷ ಬಿಡುಗಡೆಯಾದ ಬಿಗ್ ಬಜೆಟ್ ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಕೆಟ್ಟ ರೀತಿಯಲ್ಲಿ ನೆಲಕಚ್ಚಿವೆ. ಕೆಲವು ಚಿತ್ರಗಳನ್ನು ಬಿಟ್ಟರೆ ಉಳಿದೆಲ್ಲ ಚಿತ್ರಗಳು ಫ್ಲಾಪ್ ಆಗಿವೆ. ಇತ್ತೀಚೆಗೆ ಬಿಡುಗಡೆಯಾದ ಸೌತ್ ಸ್ಟಾರ್ ವಿಜಯ್ ದೇವರಕೊಂಡ ಮತ್ತು ಅನನ್ಯಾ ಪಾಂಡೆ (Ananya Panday ) ಅವರ ಚಿತ್ರ ಲೈಗರ್ ಕೂಡ ಈ ಪಟ್ಟಿಯಲ್ಲಿ ಸೇರಿದೆ. ಚಿತ್ರವನ್ನು ಪ್ರೇಕ್ಷಕರು ಸಾರಾಸಗಟಾಗಿ ತಿರಸ್ಕರಿಸಿದ್ದಾರೆ. ಈ ಮಧ್ಯೆ, ಅನನ್ಯಾ ಪಾಂಡೆ ಕೈಯಲ್ಲಿ ಮತ್ತೊಂದು ಚಿತ್ರ ಸಿಕ್ಕಿದೆ. ಒಂದರ ಹಿಂದೆ ಒಂದರಂತೆ ಫ್ಲಾಪ್ ಚಿತ್ರಗಳನ್ನು ನೀಡಿರುವ ಅನನ್ಯಾ ಪಾಂಡೆ ಈಗ ಡ್ರೀಮ್ ಗರ್ಲ್ 2ನಲ್ಲಿ ಕಾಣಿಸಿಕೊಳ್ಳುವುದನ್ನು ಜನ ಸಹಿಸುತ್ತಿಲ್ಲ. ಮತ್ತು ಫ್ಲಾಪ್ ಅನನ್ಯಾ ಪಾಂಡೆಯನ್ನು ಈ ಚಿತ್ರದಲ್ಲಿ ನೋಡಲು ಯಾರೂ ಬಯಸುವುದಿಲ್ಲ ಎಂದು ಜನ ನಟಿಯನ್ನು ಟ್ರೋಲ್ ಮಾಡುತ್ತಿದ್ದಾರೆ