14 ದಿನಗಳ ನ್ಯಾಯಾಂಗ ಬಂಧನಕ್ಕೆ KRK; ಈತನ ನೆಟ್ವರ್ತ್‌ ಹಾಗೂ ಆಸ್ತಿ ಎಷ್ಟಿದೆ ಗೊತ್ತಾ?

First Published | Aug 30, 2022, 4:11 PM IST

ವಿವಾದಾತ್ಮಕ ಕಾಮೆಂಟ್‌ಗಳಿಂದ ಆಗಾಗ್ಗೆ ಸುದ್ದಿಯಲ್ಲಿರುವ  (Kamaal Rashid Khan)  ಅಕಾ ಕೆಆರ್‌ಕೆ ಅವರನ್ನು 2020 ರ ವಿವಾದಾತ್ಮಕ ಟ್ವೀಟ್‌ಗೆ ಸಂಬಂಧಿಸಿದಂತೆ ಮುಂಬೈ ಪೊಲೀಸರು ಬಂಧಿಸಿದ್ದಾರೆ. ಕೆಆರ್‌ಕೆ ತನ್ನನ್ನು ಚಲನಚಿತ್ರ ವಿಮರ್ಶಕ ಎಂದು ಬಣ್ಣಿಸಿಕೊಳ್ಳುತ್ತಾರೆ. ಕೆಲವು ಸಿನಿಮಾಗಳನ್ನೂ ಮಾಡಿದ್ದಾರೆ. ಆದರೆ ಬಹಳ ದಿನಗಳಿಂದ ಅವರು ಯಾವುದೇ ಚಿತ್ರದಲ್ಲಿ ಕೆಲಸ ಮಾಡಿಲ್ಲ, ಯಾವುದೇ ಚಿತ್ರವನ್ನು ನಿರ್ಮಿಸಿಲ್ಲ. ಇನ್ನೂ ಇವರ ಆಸ್ತಿ ಎಷ್ಟಿದೆ ಎಂದರೆ ನೋಡಿ ಶಾಕ್‌ ಆಗುತ್ತದೆ. ಈ ನಡುವೆ KRK ಯ ನಿವ್ವಳ ಮೌಲ್ಯ ಮತ್ತು ಗಳಿಕೆಯ ವಿಧಾನಗಳ  ಮಾಹಿತಿ ಇಂಟರ್‌ನೆಟ್‌ನಲ್ಲಿ ಸಖತ್‌ ವೈರಲ್‌ ಆಗಿದೆ.
 

ಕಳೆದ ವರ್ಷದ ಕೆಲವು ವರದಿಗಳ ಪ್ರಕಾರ, ಕಮಲ್ ರಶೀದ್ ಖಾನ್ ಅಕಾ ಕೆಆರ್‌ಕೆ ಸುಮಾರು 40 ಕೋಟಿ ಮೌಲ್ಯದ ಆಸ್ತಿಯ ಮಾಲೀಕರಾಗಿದ್ದಾರೆ. ಇದು ಮುಂಬೈ ಮತ್ತು ದುಬೈನಲ್ಲಿರುವ ಅವರ ಐಷಾರಾಮಿ ಮನೆಗಳನ್ನು ಒಳಗೊಂಡಿದೆ.

ಕೆಆರ್‌ಕೆಯ ವಾರ್ಷಿಕ ಆದಾಯ 3 ಕೋಟಿ ರೂ.ಗೂ ಹೆಚ್ಚು ಎಂದು ಅಂದಾಜಿಸಲಾಗಿದೆ. ಅವರು ಪ್ರತಿ ತಿಂಗಳು ಸುಮಾರು 30 ಲಕ್ಷ ರೂಪಾಯಿ ಗಳಿಸುತ್ತಾರೆ ಎಂದು ಹೇಳಲಾಗುತ್ತದೆ. ಯೂಟ್ಯೂಬ್, ಪೇಯ್ಡ್‌ ಪ್ರಮೋಷನ್‌ ಮತ್ತು ಬ್ರಾಂಡ್ ಎಂಡಾರ್ಸ್‌ಮೆಂಟ್‌ಗಳಿಂದ ಕೆಆರ್‌ಕೆ ಗಳಿಸುತ್ತಾರೆ ಎಂದು ಹೇಳಲಾಗುತ್ತದೆ.

Tap to resize

ದುಬೈನಲ್ಲಿ ಕಮಲ್ ರಶೀದ್ ಖಾನ್ ವಾಸಿಸುವ ಮನೆಗೆ ಶಾರುಖ್ ಖಾನ್ ಅವರ ಮನ್ನತ್ ಮಾದರಿಯಲ್ಲಿ ಜನ್ನತ್ ಎಂದು ಹೆಸರಿಸಲಾಗಿದೆ. ಇದಲ್ಲದೇ ಅವರ ಮುಂಬೈ ಮನೆ ಸುಮಾರು 21 ಸಾವಿರ ಚದರ ಅಡಿ ವಿಸ್ತಾರವಾಗಿದೆ. ಮುಂಬೈನಲ್ಲಿ ಅಪಾರ್ಟ್‌ಮೆಂಟ್ ಕೂಡ ಹೊಂದಿದ್ದಾರೆ.

ಕಮಲ್ ರಶೀದ್ ಖಾನ್ ದುಬಾರಿ ಮತ್ತು ಐಷಾರಾಮಿ ವಾಹನಗಳನ್ನು ಇಷ್ಟಪಡುತ್ತಾರೆ. ಅವರು ಬಿಎಂಡಬ್ಲ್ಯು 5 ಸಿರೀಸ್ ಕಾರನ್ನು ಹೊಂದಿದ್ದು, ಇದರ ಎಕ್ಸ್ ಶೋ ರೂಂ ಬೆಲೆ ರೂ.64 ಲಕ್ಷದಿಂದ ರೂ.75 ಲಕ್ಷದವರೆಗೆ ಇದೆ.
 

ಅವರ ಸಂಗ್ರಹದಲ್ಲಿ ಟೊಯೊಟಾ ಲ್ಯಾಂಡ್ ಕ್ರೂಸರ್ ನಂತಹ ಕಾರು ಸೇರಿದ್ದು, ಇದರ ಬೆಲೆ ಸುಮಾರು 1.50 ಕೋಟಿ ರೂ. ಕಮಲ್ ರಶೀದ್ ಖಾನ್ ಗಲ್ಫ್ ರಾಷ್ಟ್ರಗಳಲ್ಲಿ ಬಟ್ಟೆಗೆ ಸಂಬಂಧಿಸಿದ ವ್ಯಾಪಾರ ಮಾಡುತ್ತಾರೆ ಎಂದು ಹೇಳಲಾಗಿದೆ. 

ಅವರು ಕೊನೆಯ ಬಾರಿಗೆ 2014 ರಲ್ಲಿ ಬಿಡುಗಡೆಯಾದ 'ಏಕ್ ವಿಲನ್' ನಲ್ಲಿ ಬ್ರಜೇಶ್ ಎಂಬ  ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡರು,  ಈ ವರ್ಷದ ಏಪ್ರಿಲ್‌ನಲ್ಲಿ ಅವರು 'ದೇಶದ್ರೋಹಿ' ಚಿತ್ರದ ಎರಡನೇ ಭಾಗದ ಚಿತ್ರೀಕರಣವನ್ನು ಶೀಘ್ರದಲ್ಲೇ ಪ್ರಾರಂಭಿಸುವುದಾಗಿ ಘೋಷಿಸಿದ್ದರು.

ಅವರು 2019 ರಲ್ಲಿ 'ತುಮ್ ಮೇರಿ ಹೋ' ಮತ್ತು 2020 ರಲ್ಲಿ 'ಪ್ಯಾರ್ ಕಾ ನಾಮ್ ಖುದಾ ರಖಾ ಹೈ' ಶೀರ್ಷಿಕೆಯ ಸಂಗೀತ ವೀಡಿಯೊಗಳಲ್ಲಿ ಕಾಣಿಸಿಕೊಂಡಿದ್ದಾರೆ. 2009 ರಲ್ಲಿ ಪ್ರಸಾರವಾದ 'ಬಿಗ್ ಬಾಸ್' ಮೂರನೇ ಸೀಸನ್‌ನಲ್ಲಿ ಕೆಆರ್‌ಕೆ ಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದಾರೆ.

ಕಮಲ್ ರಶೀದ್ ಖಾನ್ ತಮ್ಮ ವೃತ್ತಿಜೀವನದಲ್ಲಿ 'ಸೀತಮ್', 'ಮುನ್ನಾ ಪಾಂಡೆ ಬೆರೋಜ್ಗರ್' (ಭೋಜ್ಪುರಿ) ಮತ್ತು 'ದೇಶದ್ರೋಹಿ' ಎಂಬ ಮೂರು ಚಿತ್ರಗಳನ್ನು ನಿರ್ಮಿಸಿದ್ದಾರೆ. ಈ ಪೈಕಿ ‘ದೇಶದ್ರೋಹಿ’ ಚಿತ್ರದಲ್ಲಿ ನಾಯಕ ನಟನಾಗಿ ಕೆಲಸ ಮಾಡಿದ್ದಾರೆ. ಅದೇ ಸಮಯದಲ್ಲಿ, ಅವರು ಸಿದ್ಧಾರ್ಥ್ ಮಲ್ಹೋತ್ರಾ, ಶ್ರದ್ಧಾ ಕಪೂರ್ ಮತ್ತು ರಿತೇಶ್ ದೇಶ್ಮುಖ್ ಅಭಿನಯದ 'ಏಕ್ ವಿಲನ್' ಚಿತ್ರದಲ್ಲಿ ಅತಿಥಿ ಪಾತ್ರವನ್ನು ಮಾಡಿದರು.

Latest Videos

click me!