ಕೊನೆಗೂ ರಹಸ್ಯ ಮದುವೆಯನ್ನು ಬಹಿರಂಗಗೊಳಿಸಿದ ಅಮೃತಾ ರಾವ್‌!

First Published | Mar 17, 2022, 12:23 PM IST

ಬಾಲಿವುಡ್‌ ನಟಿ  ಅಮೃತಾ ರಾವ್ (Amrita Rao) 2016ರಲ್ಲಿ ರಹಸ್ಯ ಮದುವೆ ಮಾಡಿ ಎಲ್ಲರನ್ನೂ ಅಚ್ಚರಿಗೊಳಿಸಿದ್ದರು. ಅಷ್ಟೇ ಅಲ್ಲ, ಮದುವೆಯ ಫೋಟೋವನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿರಲಿಲ್ಲ. ಆದರೆ ಮದುವೆಯಾಗಿ ಎಂಟು ವರ್ಷಗಳ ನಂತರ ಅಮೃತಾ ಮದುವೆಯ ಆಲ್ಬಂ ಅನ್ನು ಜನರಿಗೆ ತೋರಿಸಿದ್ದಲ್ಲದೆ, ಈ ಮದುವೆಯ ಹಲವು ರಹಸ್ಯಗಳನ್ನು ಬಹಿರಂಗಪಡಿಸಿದರು.
 

ಅಮೃತಾ ರಾವ್ ಮತ್ತು ಆರ್‌ಜೆ ಅನ್ಮೋಲ್ 2016 ರ ಮೇ 15 ರಂದು ನಡೆದ ತಮ್ಮ ರಹಸ್ಯ ವಿವಾಹದ ವಿವರಗಳನ್ನು ಅಂತಿಮವಾಗಿ ಬಹಿರಂಗಪಡಿಸಿದ್ದಾರೆ. ನಟಿ ಯುಟ್ಯೂಬ್ ಶೋ 'ಕಪಲ್ ಆಫ್ ಥಿಂಗ್ಸ್' ನಲ್ಲಿ ತಮ್ಮ ಮದುವೆಯ ಬಗ್ಗೆ ಮಾತನಾಡಿದರು. 
 

ಅಮೃತಾ  ತಮ್ಮ ಒಂದು ಚಿತ್ರದ ಪ್ರಚಾರಕ್ಕಾಗಿ ಅನ್ಮೋಲ್ ಅವರ ರೇಡಿಯೊ ಕಾರ್ಯಕ್ರಮಕ್ಕೆ ಬಂದಾಗ ಅವರಿಬ್ಬರ ಪ್ರೀತಿಯ  ಪ್ರಾರಂಭವಾಯಿತು. ಪುಣೆಯ ಇಸ್ಕಾನ್ ದೇವಸ್ಥಾನದಲ್ಲಿ ರಹಸ್ಯ ವಿವಾಹ ನೆರವೇರಿತು. 2020 ರಲ್ಲಿ, ಇಬ್ಬರಿಗೂ ಗಂಡು ಮಗುವನ್ನು ಸ್ವಾಗತಿಸಿದರು ಮತ್ತು ವೀರ್ ಎಂದು ಹೆಸರಿಸಿದರು.

Tap to resize

ಈ ಟಾಕ್‌ ಶೋ ಅಮೃತಾ ಅವರು ತಮ್ಮ ಎಲ್ಲಾ ಸಿನಿಮಾಗಳನ್ನು ಹೆಸರನ್ನು ಮದುವೆಯ ಮೆಹಂದಿಯಲ್ಲಿ ಬರೆಸಿಕೊಂಡಿದ್ದರು ಎಂದು ಹೇಳಿದರು. ಈ ಶೋನಲ್ಲಿ ಅವರು ರಹಸ್ಯವಾಗಿ ಹೇಗೆ ಮದುವೆಯಾದರು ಮತ್ತು ಯಾವ ಯಾವ ತೊಂದರೆಗಳನ್ನು ಎದುರಿಸಿದರು ಎಂದೂ ನಟಿ ಹೇಳಿದರು 

ಆ ಸಮಯದಲ್ಲಿ ನಟಿ ಒಂದು ಶೋಗಾಗಿ ಬಿಡುವಿಲ್ಲದಂತೆ ಶೂಟಿಂಗ್ ಮಾಡುತ್ತಿದ್ದರು ಎಂದು ಅಮೃತಾ ಅವರ ಸಹೋದರಿ ಪ್ರೀತಿಕಾ ರಾವ್ ಅವರು ಹೇಳಿದರು. ಅಲ್ಲಿಂದ ಐದು ದಿನ ರಜೆ ಹಾಕಬೇಕಿತ್ತು. ಆಗ ಆಪ್ತ ಗೆಳೆಯನ ಮದುವೆಯಲ್ಲಿ ಮಾರಿಷಸ್ ಗೆ ಹೋಗಬೇಕಿತ್ತು ಎಂದು ಸುಳ್ಳು ಹೇಳಿದ್ದೆ. ಆ ನಂತರ ಅಲ್ಲಿಂದ ಪುಣೆಗೆ ಬಂದೆ.

ನಾನು ಮಾರಿಷಸ್‌ನಲ್ಲಿದ್ದೇನೆ ಎಂದು ಎಲ್ಲರೂ ತಿಳಿದಿದ್ದರು.ಮದುವೆಗೆ ಆಗಮಿಸಿದ್ದ ಕುಟುಂಬದ ಪ್ರತಿಯೊಬ್ಬ ಸದಸ್ಯರು ಈ ರಹಸ್ಯ ಮದುವೆಯ ಬಗ್ಗೆ ಹೇಳಲಾಗಿತ್ತು. ಆದರೆ ಈ ಮದುವೆ ಬಗ್ಗೆ ಯಾರಿಗೂ ತಿಳಿಯಬಾರದು ಎಂದು ಎಲ್ಲರಿಗೂ ಸೂಚನೆ ನೀಡಲಾಗಿತ್ತು ಎಂದು ಬಹಿರಂಗ ಪಡಿಸಿದರು.
 

'ನನ್ನ ಮದುವೆಯ ಸುದ್ದಿ ನನ್ನ ವೃತ್ತಿ ಭವಿಷ್ಯಕ್ಕೆ ಅಡ್ಡಿಯಾಗಬಹುದು ಎಂದು ಅನ್ಮೋಲ್ ಗೆ ಹೇಳಿದಾಗ ಅರ್ಥವಾಯಿತು. ಆದಾಗ್ಯೂ, ಸರಿಯಾದ ಸಮಯದಲ್ಲಿ ಮದುವೆಯಾಗುವುದು ಸಹ ಮುಖ್ಯವಾಗಿತ್ತು ಮತ್ತು ಆದ್ದರಿಂದ ಅನ್ಮೋಲ್‌ಗೆ ರಹಸ್ಯವಾಗಿ ವಿವಾಹವಾಗುವ  ಆಲೋಚನೆ ಬಂತು' ಎಂದು ಅಮೃತಾ ಹೇಳಿದ್ದಾರೆ. 
 

Latest Videos

click me!